ಈ ಕ್ಷಣ ನಮ್ಮೆಲ್ಲರಿಗೂ ದುಃಖದ ಕ್ಷಣ. ಕಲ್ಯಾಣ್ ಸಿಂಗ್ ಜಿ ಅವರ ಪೋಷಕರು ಅವರಿಗೆ ಕಲ್ಯಾಣ ಸಿಂಗ್ ಎಂದು ಹೆಸರಿಟ್ಟಿದ್ದರು. ಅವರು ತಮ್ಮ ಪೋಷಕರು ಇಟ್ಟ ಹೆಸರಿನಂತೆ ಜೀವನವನ್ನು ನಡೆಸಿದರು. ಅವರು ತಮ್ಮ ಇಡೀ ಜೀವನವನ್ನು ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು ಮತ್ತು ಅದನ್ನೇ ತಮ್ಮ ಜೀವನಮಂತ್ರವನ್ನಾಗಿ ಮಾಡಿಕೊಂಡಿದ್ದರು. ಅವರು ಭಾರತೀಯ ಜನತಾ ಪಾರ್ಟ, ಭಾರತೀಯ ಜನಸಂಘ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.
ಕಲ್ಯಾಣ್ ಸಿಂಗ್ ಜಿ ಅವರ ಹೆಸರು ಭಾರತದಾದ್ಯಂತ ನಂಬಿಕೆಗೆ ಸಮಾನಾರ್ಥಕವಾಗಿದೆ. ಅವರು ಬದ್ಧ ನಿರ್ಧಾರ ಕೈಗೊಳ್ಳುವವರಾಗಿದ್ದರು ಮತ್ತು ತಮ್ಮ ಜೀವನದುದ್ಧಕ್ಕೂ ಸದಾ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದರು. ಅವರು ಶಾಸಕರಾಗಿರಲಿ ಅಥವಾ ಸರ್ಕಾದೊಳಗಿರಲಿ ಅಥವಾ ರಾಜ್ಯಪಾಲರಾಗಿರಲಿ, ಯಾವುದೇ ಜವಾಬ್ದಾರಿ ನೀಡಿದರೂ ಅವರು ಇತರರಿಗೆ ಸ್ಫೂರ್ತಿಯಾಗಿದ್ದರು. ಅವರು ಜನಸಾಮಾನ್ಯರಿಗೆ ನಂಬಿಕೆಯ ಸಂಕೇತವಾಗಿದ್ದರು.
ರಾಷ್ಟ್ರವು ಮೌಲ್ಯಯುತ ವ್ಯಕ್ತಿತ್ವ ಮತ್ತು ಸಮರ್ಥ ನಾಯಕನನ್ನು ಕಳೆದುಕೊಂಡಿದೆ. ಅವರ ಆದರ್ಶಗಳನ್ನು ಅನುಸರಿಸಿ ಮತ್ತು ಅವರ ಕನಸುಗಳನ್ನು ಈಡೇರಿಸುವ ಮೂಲಕ ನಾವು ಅವರ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸಬೇಕು. ಶ್ರೀರಾಮನು ಅವರ ಆತ್ಮವನ್ನು ಆಶೀರ್ವದಿಸಲಿ ಮತ್ತು ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಮೌಲ್ಯಗಳು, ಆದರ್ಶಗಳು ಮತ್ತು ಭಾರತದ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಂಬಿಕೆ ಹೊಂದಿರುವ ಮತ್ತು ಅವರಿಗಾಗಿ ದುಃಖಿಸುತ್ತಿರುವ ಎಲ್ಲರಿಗೂ ಭಗವಾನ್ ಶ್ರೀ ರಾಮ ಶಕ್ತಿಯನ್ನು ನೀಡಲಿ.
Kalyan Singh Ji…a leader who always worked for Jan Kalyan and will always be admired across India. pic.twitter.com/nqVIwilT7r
— Narendra Modi (@narendramodi) August 22, 2021
जीवनपर्यंत जन कल्याण के लिए समर्पित रहे कल्याण सिंह जी के अंतिम दर्शन किए। उनके परिजनों से मिला। प्रभु श्रीराम उनके परिजनों को इस अपार दुख को सहने की शक्ति प्रदान करें। pic.twitter.com/NFc0Prs46U
— Narendra Modi (@narendramodi) August 22, 2021