35 ನೇ ಆಸಿಯಾನ್ ಶೃಂಗಸಭೆ, 14 ನೇ ಪೂರ್ವ ಏಷ್ಯಾ ಶೃಂಗಸಭೆ (ಇಎಎಸ್) ಮತ್ತು 16 ನೇ ಭಾರತ-ಏಷಿಯಾನ್ ಶೃಂಗಸಭೆಯ ಹೊರತಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2019 ರ ನವೆಂಬರ್ 3 ರಂದು ಥೈಲ್ಯಾಂಡ್ ಪ್ರಧಾನಿ ಜನರಲ್ (ನಿವೃತ್ತ) ಪ್ರಯುತ್ ಚಾನ್-ಒ-ಚಾ ಅವರನ್ನು ಭೇಟಿಯಾದರು.
ಸಭೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧದಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಆಗಾಗ್ಗೆ ಉನ್ನತ ಮಟ್ಟದ ಸಭೆಗಳು ಮತ್ತು ಎಲ್ಲಾ ಹಂತಗಳ ವಿನಿಮಯವು ಸಂಬಂಧದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಸೃಷ್ಟಿಸಿದೆ ಎಂದು ಗಮನಿಸಿದರು. ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಹೆಚ್ಚಿದ ಪರಸ್ಪರ ಕಾರ್ಯಗಳನ್ನು ಗಮನಿಸಿ, ರಕ್ಷಣಾ ಮತ್ತು ಕೈಗಾರಿಕೆಗಳ ವಲಯದಲ್ಲಿ ಸಹಕಾರದ ಅವಕಾಶಗಳನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿದರು. ಕಳೆದ ವರ್ಷ ದ್ವಿಪಕ್ಷೀಯ ವ್ಯಾಪಾರದಲ್ಲಿ 20% ಬೆಳವಣಿಗೆಯನ್ನು ಸ್ವಾಗತಿಸಿದ ನಾಯಕರು ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಚರ್ಚಿಸಲು ಸಂಬಂಧಪಟ್ಟ ವ್ಯವಹಾರ ಅಧಿಕಾರಿಗಳಿಗೆ ಕಾರ್ಯನಿರ್ವಹಣೆ ಜವಾಬ್ದಾರಿ ವಹಿಸಲು ನಿರ್ಧರಿಸಿದರು.
ಭೌತಿಕ ಮತ್ತು ಡಿಜಿಟಲ್ ಸಂಪರ್ಕ ಕ್ಷೇತ್ರಗಳು ಸೇರಿದಂತೆ ಉಭಯ ದೇಶಗಳ ನಡುವೆ ಸಂಪರ್ಕವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆಯೂ ಪ್ರಧಾನ ಮಂತ್ರಿಗಳು ಚರ್ಚಿಸಿದರು. ಉಭಯ ನಾಯಕರು ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ವಾಯು ಸಂಪರ್ಕವನ್ನು ಸ್ವಾಗತಿಸಿದರು ಮತ್ತು ಬ್ಯಾಂಕಾಕ್ ಮತ್ತು ಗುವಾಹಟಿ ನಡುವೆ ನೇರ ಹಾರಾಟದ ಆರಂಭ ಮತ್ತು ರಾನೊಂಗ್ ಬಂದರು, ಥೈಲ್ಯಾಂಡ್ ಮತ್ತು ಕೋಲ್ಕತ್ತಾ, ಚೆನ್ನೈ ಮತ್ತು ವಿಶಾಕಪಟ್ಟಣಂನಲ್ಲಿರುವ ಭಾರತೀಯ ಬಂದರುಗಳ ನಡುವಿನ ಸಹಕಾರಕ್ಕಾಗಿ ಒಪ್ಪಂದಗಳನ್ನು ಅಂತಿಮಗೊಳಿಸಿದರು.
ನಾಯಕರು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಆಸಿಯಾನ್ ಸಂಬಂಧಿತ ಸಭೆಗಳಲ್ಲಿ ಪಾಲ್ಗೊಳ್ಳಲು ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಥಾಯ್ ಪ್ರಧಾನ ಮಂತ್ರಿಯವರಿಗೆ ಧನ್ಯವಾದವನ್ನು ಅರ್ಪಿಸಿದರು ಮತ್ತು ಆಸಿಯಾನ್ ಅಧ್ಯಕ್ಷರಾಗಿರುವ ಅವರ ನಾಯಕತ್ವವನ್ನು ಅಭಿನಂದಿಸಿದರು. ಈ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಭಾರತ-ಆಸಿಯಾನ್ ಕಾರ್ಯತಂತ್ರದ ಸಹಭಾಗಿತ್ವದ ದೇಶಗಳ ಸಂಯೋಜಕರಾಗಿ ಥೈಲ್ಯಾಂಡ್ ನೀಡಿದ ಕೊಡುಗೆಯನ್ನು ಅವರು ಸಕಾರಾತ್ಮಕ ಅಭಿಪ್ರಾಯದ ಮೂಲಕ ವ್ಯಕ್ತಪಡಿಸಿದರು.
ಭಾರತ ಮತ್ತು ಥೈಲ್ಯಾಂಡ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿರುವ ನಿಕಟ ಕಡಲ ನೆರೆಹೊರೆಯವರು. ಸಮಕಾಲೀನ ಸನ್ನಿವೇಶದಲ್ಲಿ, ಭಾರತದ ‘ಆಕ್ಟ್ ಈಸ್ಟ್’ ನೀತಿಯು ಥೈಲ್ಯಾಂಡ್‌ನ ‘ಲುಕ್ ವೆಸ್ಟ್’ ನೀತಿಯಿಂದ ಮೆಚ್ಚುಗೆ ಪಡೆದಿದೆ, ಇದು ಸಂಬಂಧವನ್ನು ಆಳವಾಗಿ, ದೃಢವಾಗಿ ಮತ್ತು ಬಹುಮುಖಿಯನ್ನಾಗಿ ಮಾಡಿದೆ.
การประชุมหารือกับพลเอก ประยุทธ์ จันทร์โอชาประสบผลสำเร็จอย่างดียิ่ง โดยเราได้พูดคุยเกี่ยวกับแนวทางในการขยายความร่วมมือระหว่างอินเดียและไทย ผมยังได้กล่าวขอบคุณท่านสำหรับการต้อนรับอันดีเยี่ยมของประชาชนและรัฐบาลไทย pic.twitter.com/EZEhaBIn1W
— Narendra Modi (@narendramodi) November 3, 2019
Had an excellent meeting with Prime Minister Prayut Chan-o-cha. We talked about ways to expand cooperation between India and Thailand. I also thanked him for the wonderful hospitality of the people as well as Government of Thailand. pic.twitter.com/79pMhf8MV1
— Narendra Modi (@narendramodi) November 3, 2019