ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ಗುರು ಗ್ರಂಥ ಸಾಹಿಬ್ ನ ಪ್ರಕಾಶ್ ಪುರಬ್ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
ಸಮಾಜದಲ್ಲಿ ಬೇರೆಯವರ ಬಗ್ಗೆ ಕಾಳಜಿ ತೋರಿಸಿ ಜನತೆಗೆ ಸೇವೆ ಸಲ್ಲಿಸಲು ಶ್ರೀ ಗುರು ಗ್ರಂಥ ಸಾಹಿಬ್ ಪ್ರಪಂಚದಾದ್ಯಂತದ ಲಕ್ಷಾಂತರ ಜನತೆಯನ್ನು ಪ್ರೇರೇಪಿಸುತ್ತದೆ. ಜನರಲ್ಲಿ ಸಹೋದರತೆ ಮತ್ತು ಸಾಮರಸ್ಯದ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
"ಶ್ರೀ ಗುರು ಗ್ರಂಥ ಸಾಹಿಬ್ ಪ್ರಕಾಶ್ ಪುರಬ್ ಶುಭಾಶಯಗಳು. ಶ್ರೀ ಗುರು ಗ್ರಂಥ ಸಾಹಿಬ್ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಇತರರ ಸೇವೆ ಮಾಡಲು ಮತ್ತು ಬೇರೆಯವರ ಬಗ್ಗೆ ಕಾಳಜಿ ವಹಿಸಲು ಜನರನ್ನು ಪ್ರೇರೇಪಿಸುತ್ತದೆ. ಇಂಥಹ ಮನೋಭಾವ ನಮ್ಮ ಸಮಾಜದಲ್ಲಿ ಸಹೋದರತ್ವ ಮತ್ತು ಸಾಮರಸ್ಯದ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ಜನತೆಗೆ ಕಲಿಸುತ್ತದೆ. ಅದರಲ್ಲಿರುವ ಸಾರಾಂಶ ಮತ್ತು ಬೌದ್ಧಿಕ ವಿಷಯಗಳು ನಮ್ಮನ್ನು ಮತ್ತಷ್ಟು ಉತ್ತಮಗೊಳಿಸುವ ಮತ್ತು ನಮಗೆ ಮಾರ್ಗದರ್ಶನ ನೀಡುವಂತೆ ಮಾಡುತ್ತದೆ" ಎಂದಿದ್ದಾರೆ.
My greetings on the Parkash Purab of the Sri Guru Granth Sahib.
— Narendra Modi (@narendramodi) September 4, 2024
The Sri Guru Granth Sahib motivates millions across the world, inspiring people to serve and care for others. It also teaches us to further the bonds of brotherhood and harmony in our society. May its wisdom keep… pic.twitter.com/n2SkkF4ImL
ਸ੍ਰੀ ਗੁਰੂ ਗ੍ਰੰਥ ਸਾਹਿਬ ਜੀ ਦੇ ਪ੍ਰਕਾਸ਼ ਪੁਰਬ ਦੀਆਂ ਲੱਖ-ਲੱਖ ਵਧਾਈਆਂ।
— Narendra Modi (@narendramodi) September 4, 2024
ਸ੍ਰੀ ਗੁਰੂ ਗ੍ਰੰਥ ਸਾਹਿਬ ਜੀ ਦੁਨੀਆ ਭਰ ਦੇ ਲੱਖਾਂ ਲੋਕਾਂ ਨੂੰ ਪ੍ਰੇਰਿਤ ਕਰਦੇ ਹਨ,ਲੋਕਾਂ ਨੂੰ ਦੂਜਿਆਂ ਦੀ ਸੇਵਾ ਅਤੇ ਦੇਖਭਾਲ ਕਰਨ ਲਈ ਉਤਸ਼ਾਹਿਤ ਕਰਦੇ ਹਨ। ਇਹ ਸਾਨੂੰ ਸਾਡੇ ਸਮਾਜ ਵਿੱਚ ਭਾਈਚਾਰਕ ਸਾਂਝ ਅਤੇ ਸਦਭਾਵਨਾ ਦੇ ਬੰਧਨ ਨੂੰ ਅੱਗੇ ਵਧਾਉਣਾ ਵੀ ਸਿਖਾਉਂਦੇ… pic.twitter.com/SnLh5oyBac