ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾಷಾ ಗೌರವ ಸಪ್ತಾಹದ #BhashaGauravSaptah ಅಂಗವಾಗಿ ಅಸ್ಸಾಂನ ಜನತೆಗೆ ಶುಭ ಕೋರಿದ್ದಾರೆ ಮತ್ತು ಅದರ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಅವರು ಇತ್ತೀಚೆಗೆ ಅಸ್ಸಾಮಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿರುವ ಕುರಿತು ಸಂಭ್ರಮವನ್ನು ಹಂಚಿಕೊಂಡರು. ಇದು ಆ ಪ್ರದೇಶದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಗೆ ದೊರೆತ ಪ್ರಮುಖ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ.
ಅಸ್ಸಾಂನ ಶ್ರೀಮಂತ ಭಾಷಾ ಪರಂಪರೆಯ ಸಪ್ತಾಹದ ಆಚರಣೆಯಾದ ಭಾಷಾ ಗೌರವ ಸಪ್ತಾಹ ಆರಂಭವನ್ನು ಪ್ರಕಟಿಸಿದ ಅಸ್ಸಾಂನ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಪ್ರಧಾನಮಂತ್ರಿ ಅವರು ಇಂದು ಟ್ವೀಟ್ ಮಾಡಿದ್ದಾರೆ:
“#BhashaGauravSaptah ಭಾಷಾ ಗೌರವ ಸಪ್ತಾಹ ಒಂದು ಗಮನಾರ್ಹ ಪ್ರಯತ್ನವಾಗಿದೆ, ಅಸ್ಸಾಮಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿರುವುದರ ಕುರಿತು ಜನರ ಉತ್ಸಾಹವನ್ನು ಎತ್ತಿ ತೋರಿಸುತ್ತದೆ. ನನ್ನ ಶುಭಾಶಯಗಳು. ಸಪ್ತಾಹದಲ್ಲಿ ಯೋಜಿಸಲಾದ ಕಾರ್ಯಕ್ರಮಗಳು ಜನರು ಮತ್ತು ಅಸ್ಸಾಮಿ ಸಂಸ್ಕೃತಿಯ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿ, ಅಸ್ಸಾಮಿನ ಹೊರಗಿನ ಅಸ್ಸಾಮಿ ಜನರೂ ಇದರಲ್ಲಿ ಭಾಗವಹಿಸುವಂತೆ ನಾನು ಕರೆ ನೀಡುತ್ತೇನೆ’’ ಎಂದು ಹೇಳಿದ್ದಾರೆ.
#BhashaGauravSaptah is a noteworthy effort, highlighting people’s enthusiasm on Assamese being conferred Classical Language status. My best wishes. May the programmes planned over the week deepen the connect between people and Assamese culture. I also urge Assamese people outside… https://t.co/94Ba6UlMor
— Narendra Modi (@narendramodi) November 3, 2024