ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮುಂಬರುವ ನೈಜೀರಿಯ ಭೇಟಿಗೆ ಮುನ್ನ ಅಲ್ಲಿನ ಜನರ ಹಿಂದಿ ಪ್ರೇಮ ಬಗ್ಗೆ, ಜನರ ಉತ್ಸಾಹದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು,
"ನೈಜೀರಿಯಾದಲ್ಲಿರುವ ಹಿಂದಿ ಭಾಷಾ ಪ್ರೇಮಿಗಳು ಅಲ್ಲಿಗೆ ನನ್ನ ಭೇಟಿಗೆ ಉತ್ಸಾಹ ತೋರಿದ ರೀತಿ ಹೃದಯಸ್ಪರ್ಶಿಯಾಗಿದೆ! ಈ ಪ್ರವಾಸದ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ." ಎಂದು ಬರೆದುಕೊಂಡಿದ್ದಾರೆ.
नाइजीरिया के हिन्दी प्रेमियों ने जिस प्रकार वहां के मेरे दौरे को लेकर उत्साह दिखाया है, वो हृदय को छू गया है! अपनी इस यात्रा को लेकर बहुत उत्सुक हूं। @MEAIndia@NigeriaMFA https://t.co/KtQJYUFjty
— Narendra Modi (@narendramodi) November 14, 2024
ಇದೇ 16 ಮತ್ತು 17 ರಂದು ನೈಜೀರಿಯಾ ಪ್ರವಾಸ ಮಾಡಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸುತ್ತಿರುವ ರೀತಿ, ಜನರ ಉತ್ಸಾಹ ಖುಷಿಯಾಗುತ್ತಿದೆ ಎಂದು ನೈಜೀರಿಯಾದ ಭಾರತೀಯ ಹೈಕಮಿಷನ್ ಅವರ ಪೋಸ್ಟ್ ಗೆ ಪ್ರಧಾನ ಮಂತ್ರಿಯವರು ಪ್ರತಿಕ್ರಿಯೆ ನೀಡಿದ್ದಾರೆ.