ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಮ್ಮ ಕಾಲವನ್ನು ನೆನಪಿಸಿಕೊಂಡು, ಗುಜರಾತ್ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಪರಿಕಲ್ಪನೆಯ ಉಜ್ವಲ ಉದಾಹರಣೆಯಾಗಿ ಹೊರಹೊಮ್ಮಿತು. ಸಮಾಜದ ಎಲ್ಲಾ ವರ್ಗಗಳಿಗೆ ಸಮೃದ್ಧಿಯನ್ನು ಖಾತ್ರಿಪಡಿಸಿತು ಎಂದು ಹೇಳಿದರು. ಕಳೆದ ದಶಕವನ್ನು ನೆನಪಿಸಿಕೊಳ್ಳುತ್ತಾ, ಭಾರತದ ಅಭಿವೃದ್ಧಿಯ ಹೆಜ್ಜೆಗಳು ನಮ್ಮ ದೇಶವನ್ನು ಜಾಗತಿಕವಾಗಿ ಅತ್ಯಂತ ಆಶಾವಾದದಿಂದ ನೋಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಕಸಿತ ಭಾರತದ ಸಾಮೂಹಿಕ ಗುರಿ ಸಾಧಿಸುವವರೆಗೆ ತಾವು ಅವಿರತವಾಗಿ ದುಡಿಯುತ್ತೇನೆ ಮತ್ತು ವಿಶ್ರಮಿಸುವುದಿಲ್ಲ ಎಂದು ಅವರು ನಾಗರಿಕರಿಗೆ ಭರವಸೆ ನೀಡಿದರು.
X ನಲ್ಲಿ ಪ್ರಧಾನ ಮಂತ್ರಿಯವರು ಸಂದೇಶ ಪೋಸ್ಟ್ ಮಾಡಿದ್ದಾರೆ:
"#23ವರ್ಷಗಳ ಸೇವೆ...
ನಾನು ಸರ್ಕಾರದ ಮುಖ್ಯಸ್ಥನಾಗಿ 23 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ತಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕಳುಹಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. 2001ರ ಅಕ್ಟೋಬರ್ 7 ರಂದು ನಾನು ಗುಜರಾತ್ ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ವಹಿಸಿಕೊಂಡೆ. ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯ ಆಡಳಿತದ ನೇತೃತ್ವವಹಿಸುವ ಜವಾಬ್ದಾರಿಯನ್ನು ವಹಿಸುವುದು ನನ್ನ ಪಕ್ಷದ @BJP4India ದ ಶ್ರೇಷ್ಠತೆಯಾಗಿದೆ.."
"ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ಗುಜರಾತ್ ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು - 2001ರ ಕಚ್ ಭೂಕಂಪ, ಅದಕ್ಕೂ ಮುಂಚೆ ಒಂದು ಭಾರೀ ಚಂಡಮಾರುತ, ದೊಡ್ಡ ಬರಗಾಲ ಮತ್ತು ಕಾಂಗ್ರೆಸ್ ನ ಅನೇಕ ದಶಕಗಳ ದುರಾಡಳಿತದ ಪರಂಪರೆಯಾದ ಲೂಟಿ, ಜಾತೀಯತೆ ಮತ್ತು ಜಾತಿವಾದ. ಜನಶಕ್ತಿಯಿಂದ, ನಾವು ಗುಜರಾತ್ ಅನ್ನು ಪುನರ್ನಿರ್ಮಿಸಿದೆವು ಮತ್ತು ಅದನ್ನು ಅಭಿವರದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದೆವು. ಕೃಷಿ ಸೇರಿದಂತೆ ರಾಜ್ಯವು ಸಾಮಾನ್ಯವಾಗಿ ಪ್ರಖ್ಯಾತವಾಗಿರದಂತಹ ಕ್ಷೇತ್ರದಲ್ಲೂ ಹೊಸ ಉನ್ನತಿಗೆ ತಲುಪಿದೆ.
"ನಾನು ಮುಖ್ಯಮಂತ್ರಿಯಾಗಿದ್ದ 13 ವರ್ಷಗಳ ಅವಧಿಯಲ್ಲಿ, ಸಮಾಜದ ಎಲ್ಲಾ ವರ್ಗಗಳಿಗೆ ಅಭಿವೃದ್ಧಿಯನ್ನು ಖಾತ್ರಿಪಡಿಸುವ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಗೆ ಗುಜರಾತ್ ಒಂದು ಉಜ್ವಲ ಉದಾಹರಣೆಯಾಗಿ ಹೊರಹೊಮ್ಮಿತು. 2014 ರಲ್ಲಿ ಭಾರತದ ಜನರು ನನ್ನ ಪಕ್ಷವನ್ನು ದಾಖಲೆಯ ಜನಾದೇಶದೊಂದಿಗೆ ಆಶೀರ್ವದಿಸಿದರು, ಹೀಗಾಗಿ ನಾನು ಪ್ರಧಾನಿಯಾಗಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟರು. ಇದು ಒಂದು ಐತಿಹಾಸಿಕ ಕ್ಷಣವಾಗಿದ್ದು, 30 ವರ್ಷಗಳಲ್ಲಿ ಮೊದಲ ಬಾರಿಗೆ ಒಂದು ಪಕ್ಷವು ಪೂರ್ಣ ಬಹುಮತವನ್ನು ಗಳಿಸಿದೆ" ಎಂದು ಹೇಳಿದರು.
"ಕಳೆದ ದಶಕದಲ್ಲಿ, ನಮ್ಮ ರಾಷ್ಟ್ರ ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ನಾವು ಪರಿಹರಿಸಲು ಸಾಧ್ಯವಾಗಿದೆ. 25 ಕೋಟಿಗೂ ಹೆಚ್ಚು ಜನರು ಬಡತನದ ಕಪಿಮುಷ್ಠಿಯಿಂದ ಮುಕ್ತರಾಗಿದ್ದಾರೆ. ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದೆ ಮತ್ತು ಇದು ವಿಶೇಷವಾಗಿ ನಮ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಸ್ಟಾರ್ಟ ಅಪ್ ವಲಯ ಮತ್ತು ಇನ್ನೂ ಹೆಚ್ಚಿನವುಗಳಿಗೆ ನೆರವಾಗಿದೆ. ನಮ್ಮ ಶ್ರಮಜೀವಿ ರೈತರು, ನಾರೀ ಶಕ್ತಿ, ಯುವ ಶಕ್ತಿ ಮತ್ತು ಬಡವರು ಹಾಗೂ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಅಭಿವೃದ್ಧಿ ಹೊಸ ಮಾರ್ಗಗಳು ತೆರೆದುಕೊಂಡಿವೆ."
"ಭಾರತದ ಅಭಿವೃದ್ಧಿಯ ದಾಪುಗಾಲುಗಳು ನಮ್ಮ ದೇಶವನ್ನು ಜಾಗತಿಕವಾಗಿ ಅತ್ಯಂತ ಆಶಾವಾದದಿಂದ ನೋಡುವುದನ್ನು ಖಾತ್ರಿಪಡಿಸಿದೆ. ನಮ್ಮೊಂದಿಗೆ ಕೆಲಸ ಮಾಡಲು, ನಮ್ಮ ಜನರಲ್ಲಿ ಹೂಡಿಕೆ ಮಾಡಲು ಮತ್ತು ನಮ್ಮ ಯಶಸ್ಸಿನಲ್ಲಿ ಪಾಲುದಾರರಾಗಲು ಜಗತ್ತು ಎದುರು ನೋಡುತ್ತಿದೆ. ಅದೇ ಸಮಯದಲ್ಲಿ, ಹವಾಮಾನ ಬದಲಾವಣೆ, ಆರೋಗ್ಯ ಸುಧಾರಣೆ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ಮತ್ತು ಮುಂತಾದ ಅನೇಕ ಜಾಗತಿಕ ಸವಾಲುಗಳನ್ನು ಜಯಿಸಲು ಭಾರತವು ಶ್ರಮಿಸುತ್ತಿದೆ.
"ಕಳೆದ ಕೆಲವು ವರ್ಷಗಳಲ್ಲಿ ಬಹಳಷ್ಟು ಸಾಧಿಸಲಾಗಿದೆ ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಈ 23 ವರ್ಷಗಳಲ್ಲಿನ ಕಲಿಕೆಗಳು ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಪರಿಣಾಮ ಬೀರಿದ ಮುಂಚೂಣಿ ಉಪಕ್ರಮಗಳೊಂದಿಗೆ ಬರಲು ನಮಗೆ ಅನುವು ಮಾಡಿಕೊಟ್ಟವು. ನಾನು ಜನರ ಸೇವೆಯಲ್ಲಿ ಇನ್ನೂ ಹೆಚ್ಚಿನ ಹುರುಪಿನೊಂದಿಗೆ ದಣಿವರಿಯಿಲ್ಲದೆ ಕೆಲಸ ಮಾಡುತ್ತೇನೆ ಎಂದು ನನ್ನ ಸಹ ಭಾರತೀಯರಿಗೆ ಭರವಸೆ ನೀಡುತ್ತೇನೆ. ನಮ್ಮ ಸಾಮೂಹಿಕ ವಿಕಸಿತ ಭಾರತದ ಗುರಿಯನ್ನು ಸಾಧಿಸುವವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ."
#23YearsOfSeva…
— Narendra Modi (@narendramodi) October 7, 2024
A heartfelt gratitude to everyone who has sent their blessings and good wishes as I complete 23 years as the head of a government. It was on October 7, 2001, that I took on the responsibility of serving as the Chief Minister of Gujarat. It was the greatness of…