ಭಾರತೀಯ ರಾಜಕೀಯ ಮತ್ತು ಸಮಾಜ ಸೇವೆಯ ಮಹಾನ್ ವ್ಯಕ್ತಿ ಶ್ರೀ ನಾರಾಯಣ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿರುವ ತಮ್ಮ ದುಃಖದ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ:
"ರಾಜಕೀಯ ಮತ್ತು ಸಮಾಜ ಸೇವೆಗೆ ಅಮೂಲ್ಯ ಕೊಡುಗೆ ನೀಡಿದ ನಾರಾಯಣ್ ಅವರ ನಿಧನ ತುಂಬಲಾರದ ನಷ್ಟ. ಅವರು ಬಿಜೆಪಿಯ ಹಿರಿಯ ಕಾರ್ಯಕರ್ತರು ಮತ್ತು ಶ್ರಮಜೀವಿಗಳಾಗಿದ್ದರು. ಅವರು ನಮಗೆ ಭುಲಾಯ್ ಭಾಯಿ ಎಂದೇ ಚಿರಪರಿಚಿತರು. ಸಮಾಜ ಕಲ್ಯಾಣಕ್ಕೆ ಸಂಬಂಧಿಸಿದ ಅವರ ಕೆಲಸಗಳು ಸದಾ ಸ್ಮರಣೀಯ. ದುಃಖದ ಈ ಸಮಯದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಓಂ ಶಾಂತಿ!”
राजनीति और समाज सेवा में अमूल्य योगदान देने वाले नारायण जी का देहावसान एक अपूरणीय क्षति है। वे भाजपा के सबसे पुराने और कर्मठ कार्यकर्ताओं में शामिल रहे हैं, जिन्हें हम भुलई भाई के नाम से भी जानते हैं। जन कल्याण से जुड़े उनके कार्यों को सदैव याद किया जाएगा। शोक की इस घड़ी में मैं… pic.twitter.com/4dqZuc7xV9
— Narendra Modi (@narendramodi) November 1, 2024