ಬೋಟ್ಸ್ವಾನಾದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಡುಮಾ ಬೊಕೊ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ. ಪ್ರಧಾನಮಂತ್ರಿಅವರು ತಮ್ಮ ಸಾಮಾಜಿಕ ಜಾಲತಾಣ X ಸಂದೇಶದಲ್ಲಿ ಹೊಸದಾಗಿ ಚುನಾಯಿತ ಅಧ್ಯಕ್ಷರ ಯಶಸ್ವಯಾಗಿ ಅಧಿಕಾರಾವಧಿಯನ್ನು ಪೂರೈಸಲಿದ್ದಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು ಮತ್ತು ಬೋಟ್ಸ್ವಾನದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಬಲವಾಗಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಬೋಟ್ಸ್ವಾನಾದ ಅಧ್ಯಕ್ಷರಾಗಿ ಆಯ್ಕೆಯಾದ @duma_boko ಅವರಿಗೆ ಅಭಿನಂದನೆಗಳು. ಅಧಿಕಾರಾವಧಿ ಯಶಸ್ವಿಗೊಳಿಸಲು ಶುಭಾಶಯಗಳು. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಎದುರುನೋಡುತ್ತಿದ್ದೇವೆ.
Congratulations @duma_boko on your election as the President of Botswana. Best wishes for a successful tenure. Look forward to working closely with you to further strengthen our bilateral ties.
— Narendra Modi (@narendramodi) November 3, 2024