ಭಾರತದ ವಾಯುಯಾನ ಕ್ಷೇತ್ರವನ್ನು ಕ್ರಾಂತಿಗೊಳಿಸಿದ ಇಂದು ಉಡಾನ್ (ಉಡೇ ದೇಶ್ ಕೆ ಆಮ್ ನಾಗರಿಕ್) ಯೋಜನೆಯ 8ನೇ ವಾರ್ಷಿಕೋತ್ಸವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದರು.
ಶ್ರೀ ಮೋದಿ ಅವರು ಈ ಪ್ರಮುಖ ಉಪಕ್ರಮದ ಮಹತ್ವದ ಪರಿಣಾಮಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿಗಳು ಸಾಮಾಜಿಕ ಜಾಲತಾಣ X ನಲ್ಲಿ ಸಂದೇಶ ನೀಡಿದ್ದಾರೆ:
"ಇಂದು, ನಾವು #8YearsOfUDAN ಅನ್ನು ಆಚರಿಸುತ್ತಿದ್ದೇವೆ, ಇದು ಭಾರತದ ವಾಯುಯಾನ ಕ್ಷೇತ್ರವನ್ನು ಪರಿವರ್ತಿಸಿದ ಪ್ರಮುಖ ಉಪಕ್ರಮವಾಗಿದೆ. ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಹೆಚ್ಚಿನ ವಿಮಾನ ಮಾರ್ಗಗಳಿಗೆ, ಈ ಯೋಜನೆಯು ಕೋಟಿಗಟ್ಟಲೆ ಜನರಿಗೆ ವಾಯುಯಾನದ ಅವಕಾಶವನ್ನು ನೀಡಿದೆ. ಅದೇ ಸಮಯದಲ್ಲಿ, ಇದು ವ್ಯಾಪಾರ ಮತ್ತು ವಾಣಿಜ್ಯವನ್ನು ಹೆಚ್ಚಿಸಲು ಹಾಗೂ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಬೆಳವಣಿಗೆಯನ್ನು ಹೆಚ್ಚಿಸಲು ಪ್ರಮುಖ ಪರಿಣಾಮ ಬೀರುತ್ತದೆ, ನಾವು ವಾಯುಯಾನ ಕ್ಷೇತ್ರವನ್ನು ಬಲಪಡಿಸಿದ್ದೇವೆ. ಮತ್ತು ಜನರಿಗೆ ಉತ್ತಮ ಸಂಪರ್ಕ ಮತ್ತು ಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತೇವೆ" ಎಂದು ಪ್ರಧಾನಮಂತ್ರಿಗಳು ಸಂದೇಶ ನೀಡಿದ್ದಾರೆ.
Today, we mark #8YearsOfUDAN, an initiative that has transformed India’s aviation sector. From an increase in number of airports to more air routes, this scheme has ensured crores of people have access to flying. At the same time, it has had a major impact on boosting trade and… https://t.co/dnSNswBTsV
— Narendra Modi (@narendramodi) October 21, 2024