ಮಹೇಶ್ ಕುಕ್ರೇಜಾ ಅವರು ರಚಿಸಿರುವ, ವಿಕಾಸ್ ಅವರು ಸಂಯೋಜಿಸಿ, ಹಾಡಿರುವ "ಅಯೋಧ್ಯಾ ಮೇ ಜಯಕರ ಗುಂಜಯ್" ಭಕ್ತಿ ಭಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
“ಅಯೋಧ್ಯೆ ಮಾತ್ರವಲ್ಲದೆ ಇಂದು ದೇಶದ ಎಲ್ಲೆಡೆ ಭಗವಾನ್ ಶ್ರೀರಾಮನನ್ನು ಸ್ವಾಗತಿಸಲು ಶುಭ ಗೀತೆಗಳನ್ನು ಹಾಡಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ, ನೀವು ರಾಮ್ ಲಲ್ಲಾ ಬಗ್ಗೆ ಭಕ್ತಿಯಿಂದ ತುಂಬಿದ ವಿಕಾಸ್ ಮತ್ತು ಮಹೇಶ್ ಕುಕ್ರೇಜಾರವರ ರಾಮ್ ಭಜನೆಯನ್ನು ಸಹ ಕೇಳಿ ಆನಂದಿಸಿ. #ಶ್ರೀರಾಮಭಜನೆ" ಎಂದು ಬರೆದುಕೊಂಡಿದ್ದಾರೆ.
अयोध्या के साथ देशभर में आज हर ओर प्रभु श्री राम के स्वागत में मंगलगान हो रहा है। इस पुण्य अवसर पर राम लला की भक्ति से ओतप्रोत विकास जी और महेश कुकरेजा जी के राम भजन को आप भी जरूर सुनिए।#ShriRamBhajanhttps://t.co/yHYgEqiSt8
— Narendra Modi (@narendramodi) January 8, 2024