We are united by our democratic values, and our commitment to a free, open and inclusive Indo-Pacific: PM
We will work together, closer than ever before, for advancing our shared values and promoting a secure, stable and prosperous Indo-Pacific: PM

ಗೌರವಾನ್ವಿತರಾದ

ಅಧ್ಯಕ್ಷ ಜೊ ಬೈಡೆನ್,

ಪ್ರಧಾನ ಮಂತ್ರಿಗಳಾದ ಮಾರಿಸನ್, ಮತ್ತು

ಪ್ರಧಾನ ಮಂತ್ರಿಗಳಾಧ ಸುಗಾ,

ನಿಮ್ಮೆಲ್ಲಾ ಸ್ನೇಹಿತರೊಂದಿಗೆ ನಾನಿಲ್ಲಿ ಉಪಸ್ಥಿತನಿರುವುದು ಸಂತೋಷವೆನಿಸಿದೆ!

ಈ ವರ್ಚುವಲ್ ಸಮಾವೇಶ ಆಯೋಜಿಸಿರುವ ಅಧ್ಯಕ್ಷ ಜೊ ಬೈಡೆನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

 

ಗೌರವಾನ್ವಿತ ಅತಿಥಿಗಳೆ,

ನಮ್ಮ ಪ್ರಜಾಸತ್ತೆಯ ಮೌಲ್ಯಗಳಿಂದಾಗಿ, ನಾವೆಲ್ಲಾ ಇಲ್ಲಿ ಒಂದುಗೂಡಿದ್ದೇವೆ. ಇಂಡೊ-ಪೆಸಿಫಿಕ್  ವಲಯದ ಮುಕ್ತ, ತೆರೆದ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಗೆ ನಾವೆಲ್ಲಾ ಬದ್ಧರಾಗಿದ್ದೇವೆ.

ನಮ್ಮ ಇಂದಿನ ಕಾರ್ಯಸೂಚಿಯು ಲಸಿಕೆ, ಹವಾಮಾನ ಬದಲಾವಣೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆ ಮತ್ತಿತರ ಕ್ಷೇತ್ರಗಳನ್ನು ಒಳಗೊಂಡಿದ್ದು, ಈ ಕ್ಷೇತ್ರಗಳ ಪ್ರಗತಿಯ ವಿಸ್ತೃತ ಸಮಾಲೋಚನೆಗೆ ಮೀಸಲಾಗಿದೆ. ಇದು ಇಂಡೊ-ಪೆಸಿಫಿಕ್ ವಲಯದ ನಾಲ್ಕು ದಿಕ್ಕುಗಳಿಗೂ ಪ್ರಬಲ ಶಕ್ತಿಯಾಗಿ ರೂಪುಗೊಂಡು, ಜಾಗತಿಕ ಒಳಿತಿಗೆ ಕಾರಣವಾಗಲಿದೆ.

‘ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ’ ಎಂದು ಭಾರತದ ಪ್ರಾಚೀನ ತತ್ವಶಾಸ್ತ್ರದಲ್ಲಿ ಪ್ರಸ್ತಾಪಿಸಿರುವ ‘ವಸುದೈವ ಕುಟುಂಬಕಂ’ ನಾಣ್ಣುಡಿಯ ಮುಂದುವರಿದ ಭಾಗವಾಗಿ, ಸಕಾರಾತ್ಮಕ ದೃಷ್ಟಿಕೋನವನ್ನು ನಾನಿಲ್ಲಿ ನೋಡುತ್ತಿದ್ದೇನೆ.

ನಮ್ಮ ಹಂಚಿತ ಮೌಲ್ಯಗಳನ್ನು ಮುನ್ನಡೆಸಲು, ಸುಭದ್ರ, ಸ್ಥಿರ ಮತ್ತು ಸಮೃದ್ಧ ಇಂಡೊ-ಪೆಸಿಫಿಕ್ ವಲಯವನ್ನು ಉತ್ತೇಜಿಸಲು ನಾವುಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಜತೆಗೂಡಿ ಕೆಲಸ ಮಾಡೋಣ.

ಇಂದಿನ ಶೃಂಗಸಭೆಯು ಚತುಷ್ಕೋನ ನಾಯಕರ ಅಗತ್ಯ ಮತ್ತು ಕಾಲಘಟ್ಟವನ್ನು ಪ್ರತಿಪಾದಿಸಿದೆ ಮತ್ತು ತೋರುತ್ತಿದೆ.

ಇಂಡೊ-ಪೆಸಿಫಿಕ್ ವಲಯದ ಸ್ಥಿರತೆಗೆ ಈ ಶೃಂಗಸಭೆಯು ಪ್ರಮುಖ ಆಧಾರಸ್ತಂಭವಾಗಲಿದೆ.

ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi