ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್‌ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀ ಫುಮಿಯೋ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪ್ರಧಾನಿ ಕಿಶಿಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಔತಣಕೂಟವನ್ನು ಆಯೋಜಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಬಗ್ಗೆ ಮತ್ತು ಕೆಲವು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅವರು ಉತ್ಪಾದಕ ದೃಷ್ಟಿಕೋನಗಳ ವಿನಿಮಯ ಮಾಡಿಕೊಂಡರು.

ರಕ್ಷ ಣಾ ಉತ್ಪಾದನಾ ಕ್ಷೇತ್ರವೂ ಸೇರಿದಂತೆ ದ್ವಿಪಕ್ಷೀಯ ಭದ್ರತೆ ಮತ್ತು ರಕ್ಷ ಣಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಇಬ್ಬರೂ ನಾಯಕರು ಸಮ್ಮತಿಸಿದರು. ಮುಂದಿನ 2+2 ವಿದೇಶಾಂಗ ಮತ್ತು ರಕ್ಷ ಣಾ ಸಚಿವರ ಸಭೆಯನ್ನು ಜಪಾನ್‌ನಲ್ಲಿ ಆದಷ್ಟು ಬೇಗ ನಡೆಸಬಹುದಾದರ ಬಗ್ಗೆ ಇಬ್ಬರು ನಾಯಕರೂ ಸಹಮತ ವ್ಯಕ್ತಪಡಿಸಿದರು.

ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಆರ್ಥಿಕ ಬಾಂಧವ್ಯವನ್ನು ಇಬ್ಬರೂ ನಾಯಕರು ಶ್ಲಾಘಿಸಿದರು. ಮುಂದಿನ ಐದು ವರ್ಷಗಳಲ್ಲಿ ಜಪಾನ್‌ನಿಂದ ಭಾರತಕ್ಕೆ 5 ಟ್ರಿಲಿಯನ್‌ ಯೆನ್‌ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಹಾಗು ಹಣಕಾಸು ನೆರವು ನೀಡುವ ತಮ್ಮ ನಿರ್ಧಾರವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎರಡೂ ಕಡೆಯವರು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಒಪ್ಪಿಕೊಂಡರು. ಗತಿ ಶಕ್ತಿ ಉಪಕ್ರಮದ ಮೂಲಕ ಸುಗಮ ವ್ಯಾಪಾರ, ಲಾಜಿಸ್ಟಿಕ್ಸ್‌ ಅನ್ನು ಸುಧಾರಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಭಾರತದಲ್ಲಿ ಜಪಾನಿನ ಕಂಪನಿಗಳು ಹೆಚ್ಚಿನ ಹೂಡಿಕೆಗೆ ಬೆಂಬಲ ನೀಡುವಂತೆ ಪ್ರಧಾನಮಂತ್ರಿ ಕಿಶಿಡಾ ಅವರನ್ನು ಒತ್ತಾಯಿಸಿದರು. ಅಂತಹ ಹೂಡಿಕೆಗಳು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ರಚಿಸಲು ಸಹಾಯ ಮಾಡುತ್ತದೆ ಮತ್ತು ಪರಸ್ಪರ ಪ್ರಯೋಜನಕಾರಿಯಾಗಿದೆ. ಈ ಸಂದರ್ಭದಲ್ಲಿ, ಜಪಾನಿನ ಕಂಪನಿಗಳು ಭಾರತದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸುತ್ತಿವೆ ಮತ್ತು ಜಪಾನಿನ 24 ಕಂಪನಿಗಳು ವಿವಿಧ ಪಿಎಲ್‌ಐ ಯೋಜನೆಗಳ ಅಡಿಯಲ್ಲಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದರು.

ಮುಂಬೈ-ಅಹ್ಮದಾಬಾದ್‌ ಹೈಸ್ಪೀಡ್‌ ರೈಲು (ಎಂಎಎಚ್‌ ಎಸ್‌ಆರ್‌) ಯೋಜನೆಯ ಅನುಷ್ಠಾನದಲ್ಲಿನ ಪ್ರಗತಿಯನ್ನು ಇಬ್ಬರೂ ನಾಯಕರು ಗಮನಿಸಿದರು ಮತ್ತು ಈ ಯೋಜನೆಗಾಗಿ 3ನೇ ಕಂತಿನ ಸಾಲದ ವಿನಿಮಯಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಹೆಚ್ಚುತ್ತಿರುವ ಪ್ರಾಮುಖ್ಯತೆ ಕುರಿತು ಇಬ್ಬರೂ ನಾಯಕರು ಬೆಳಕು ಚೆಲ್ಲಿದರು ಮತ್ತು ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಎರಡು ಕಡೆಯ ಖಾಸಗಿ ವಲಯಗಳ ನಡುವೆ ಹೆಚ್ಚಿನ ಸಹಯೋಗವನ್ನು ಉತ್ತೇಜಿಸಲು ಒಪ್ಪಿಕೊಂಡರು. 5ಜಿ, ಬಿಯಾಂಡ್‌ 5ಜಿ ಮತ್ತು ಸೆಮಿಕಂಡಕ್ಟರ್‌ಗಳಂತಹ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಯೋಗದ ಸಾಧ್ಯತೆಗಳ ಬಗ್ಗೆಯೂ ಅವರು ಚರ್ಚಿಸಿದರು. ಹಸಿರು ಜಲಜನಕ ಸೇರಿದಂತೆ ಶುದ್ಧ ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಉತ್ತಮಗೊಳಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು ಮತ್ತು ಈ ನಿಟ್ಟಿನಲ್ಲಿ, ವ್ಯಾಪಾರ ಸಹಯೋಗಕ್ಕೆ ಹೆಚ್ಚಿನ ವ್ಯವಹಾರವನ್ನು ಪ್ರೋತ್ಸಾಹಿಸಿದರು.

ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಇಂತಹ ಸಂಬಂಧಗಳು ದ್ವಿಪಕ್ಷೀಯ ಸಂಬಂಧಗಳ ಬೆನ್ನೆಲುಬಾಗಬೇಕು ಎಂದು ಪ್ರಧಾನ ಮಂತ್ರಿ ಕಿಶಿಡಾ ಹೇಳಿದರು. ಈ ನಿಟ್ಟಿನಲ್ಲಿ, ಅವರು ನಿರ್ದಿಷ್ಟಪಡಿಸಿದ ನುರಿತ ಕೆಲಸಗಾರರ (ಎಸ್‌ಎಸ್‌ಡಬ್ಲ್ಯು) ಕಾರ್ಯಕ್ರಮದ ಅನುಷ್ಠಾನದಲ್ಲಿನ ಪ್ರಗತಿಯನ್ನು ಗಮನಿಸಿದರು ಮತ್ತು ಈ ಕಾರ್ಯಕ್ರಮವನ್ನು ಮತ್ತಷ್ಟು ಹೆಚ್ಚಿಸಲು ಒಪ್ಪಿಕೊಂಡರು. ಕೋವ್ಯಾಕ್ಸಿನ್‌ ಮತ್ತು ಕೋವಿ ಶೀಲ್ಡ್… ಲಸಿಕೆ ಪ್ರಮಾಣಪತ್ರಗಳನ್ನು ಹೊಂದಿರುವ ಭಾರತದಿಂದ ಬರುವ ಪ್ರಯಾಣಿಕರಿಗೆ ಜಪಾನ್‌ಗೆ  ಕ ಮುಕ್ತ ಪ್ರವೇಶವನ್ನು ಸುಗಮಗೊಳಿಸುವ ಸಲುವಾಗಿ ಪ್ರಯಾಣ ನಿರ್ಬಂಧಗಳನ್ನು ಮತ್ತಷ್ಟು ಸರಾಗಗೊಳಿಸುವ ವಿಷಯವನ್ನು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಪ್ರಸ್ತಾಪಿಸಿದರು. ಭಾರತದ ಈಶಾನ್ಯ ವಲಯದ ಅಭಿವೃದ್ಧಿಗೆ ಆದ್ಯತೆ ನೀಡುವಲ್ಲಿ ಭಾರತ-ಜಪಾನ್‌ ಆಕ್ಟ್ ಈಸ್ಟ್‌ ಫೋರಂ ಉಪಯುಕ್ತವಾಗಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು ಮತ್ತು ವಾರ್ಷಿಕ ಶೃಂಗಸಭೆಯಲ್ಲಿ ಎರಡೂ ಕಡೆಯವರು ಗುರುತಿಸಿರುವ ವಿವಿಧ ಯೋಜನೆಗಳ ಶೀಘ್ರ ಅನುಷ್ಠಾನದ ಬಗ್ಗೆ ಕೂಡ ಪರಿಶೀಲಿಸಲಾಯಿತು.

ಇಬ್ಬರೂ ನಾಯಕರು ಇತ್ತೀಚಿನ ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಇಂಡೋ-ಪೆಸಿಫಿಕ್‌ಗೆ ಸಂಬಂಧಿಸಿದ ತಮ್ಮ ವಿಧಾನಗಳಲ್ಲಿನ ಒಮ್ಮತಗಳ  ಪರಾಮರ್ಶೆ ನಡೆಸಲಾಯಿತು ಮತ್ತು ಮುಕ್ತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್‌ ಪ್ರದೇಶದ ಕಡೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಲಸಿಕೆಗಳು, ವಿದ್ಯಾರ್ಥಿ ವೇತನಗಳು, ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯಗಳಂತಹ ಕ್ವಾಡ್‌ನ ಸಮಕಾಲೀನ ಮತ್ತು ರಚನಾತ್ಮಕ ಕಾರ್ಯಸೂಚಿಯಲ್ಲಿನ ಪ್ರಗತಿಯನ್ನು ಅವರು ಸ್ವಾಗತಿಸಿದರು.

ಭೇಟಿಯ ಸಂದರ್ಭದಲ್ಲಿ ತಮಗೆ ಮತ್ತು ತಮ್ಮ ನಿಯೋಗದ ಸದಸ್ಯರಿಗೆ ನೀಡಿದ ಆತ್ಮೀಯತೆ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಶಿಡಾ ಅವರಿಗೆ ಧನ್ಯವಾದ ಅರ್ಪಿಸಿದರು. ಮುಂದಿನ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗಾಗಿ ಜಪಾನ್‌ಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಕಿಶಿಡಾ ಆಹ್ವಾನ ನೀಡಿದರು. ಇದನ್ನು ಸಂತೋಷದಿಂದ ಸ್ವೀಕರಿಸಲಾಯಿತು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage