2019 ರ ಸೆಪ್ಟೆಂಬರ್ 25 ರಂದು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74 ನೇ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಲ್ಜಿಯಂ ಪ್ರಧಾನಿ ಶ್ರೀ ಚಾರ್ಲ್ಸ್ ಮೈಕೆಲ್ ಅವರನ್ನು ಭೇಟಿಯಾದರು.
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಧಾನಿ ಚಾರ್ಲ್ಸ್ ಮೈಕೆಲ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು.
ಉಭಯ ನಾಯಕರು ಭಾರತ ಮತ್ತು ಬೆಲ್ಜಿಯಂ ನಡುವಿನ ಅತ್ಯುತ್ತಮ ಸಂಬಂಧಗಳನ್ನು ಮತ್ತು 2017 ರಲ್ಲಿ ಗೌರವಾನ್ವಿತ ಬೆಲ್ಜಿಯಂ ದೊರೆಯ ಭೇಟಿಯ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪರಿಶೀಲಿಸಿದರು.
ಭಾರತ ಮತ್ತು ಯುರೋಪಿಯನ್ ಸಂಘಟನೆ ನಡುವಿನ ಕಾರ್ಯತಂತ್ರದ ಮತ್ತು ಭದ್ರತಾ ಸಂಬಂಧಗಳ ತೀವ್ರತೆಯ ಬಗ್ಗೆ ಅವರು ಚರ್ಚಿಸಿದರು. ದ್ವಿಪಕ್ಷೀಯ ಹೂಡಿಕೆ ಮತ್ತು ವ್ಯಾಪಾರ ಒಪ್ಪಂದ, ಸಂಪರ್ಕ, ಭಯೋತ್ಪಾದನೆ ನಿಗ್ರಹ, ಬಹುಪಕ್ಷೀಯ ಸಂಸ್ಥೆಗಳು ಮತ್ತು ವಲಸೆ ಬಗ್ಗೆ ನಿಕಟ ಸಹಕಾರ ಕುರಿತು ಮಾತುಕತೆಗಳ ತ್ವರಿತ ತೀರ್ಮಾನಕ್ಕೆ ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಲು ಅವರು ಒಪ್ಪಿಕೊಂಡರು.
15 ನೇ ಭಾರತ-ಇಯು ಶೃಂಗಸಭೆಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಉಭಯ ನಾಯಕರು ಒಪ್ಪಿಕೊಂಡರು.
Prime Minister @narendramodi held talks with Prime Minister @CharlesMichel of Belgium. Both leaders discussed ways to boost strategic ties and deepen cooperation in various areas including improving trade and connectivity. https://t.co/zubUlmN600 pic.twitter.com/lwDPDPK9Xq
— PMO India (@PMOIndia) September 25, 2019