In an interdependent and interconnected world, no country is immune to the effect of global disasters: PM
Lessons from the pandemic must not be forgotten: PM
Notion of "resilient infrastructure" must become a mass movement: PM

ಫಿಜಿಯ ಪ್ರಧಾನ ಮಂತ್ರಿ ಅವರೇ

ಇಟೆಲಿಯ ಪ್ರಧಾನ ಮಂತ್ರಿಯವರೇ

ಯುನೈಟೆಡ್ ಕಿಂಗ್ಡಂನ ಪ್ರಧಾನ ಮಂತ್ರಿಯವರೇ

ಗೌರವಾನ್ವಿತರೇ

ರಾಷ್ಟ್ರೀಯ ಸರಕಾರಗಳ ಪ್ರತಿನಿಧಿಗಳೇ

ಅಂತಾರಾಷ್ಟ್ರೀಯ ಸಂಘಟನೆಗಳ ತಜ್ಞರೇ

ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ವಲಯದವರೇ

ವಿಪತ್ತು ಪುನಶ್ಚೇತನ ಸ್ಥಿತಿಸ್ಥಾಪಕತ್ವದ ಮೂಲಸೌಕರ್ಯಕ್ಕಾಗಿರುವ ಮಿತ್ರಕೂಟ ಅಥವಾ ಸಿ.ಡಿ.ಆರ್.ಐ.ಯ ವಾರ್ಷಿಕ ಸಮ್ಮೇಳನದ ಮೂರನೇ ಆವೃತ್ತಿ ಒಂದು ಅಭೂತಪೂರ್ವ ಕಾಲಘಟ್ಟದಲ್ಲಿ ನಡೆಯುತ್ತಿದೆ. ನೂರು ವರ್ಷಗಳಲ್ಲಿ ಸಂಭವಿಸಬಹುದಾದ  ವಿಪತ್ತುಗಳಲ್ಲೊಂದನ್ನು ನಾವೀಗ ಕಾಣುತ್ತಿದ್ದೇವೆ. ಕೋವಿಡ್-19 ಜಾಗತಿಕ ಸಾಂಕ್ರಾಮಿಕವು ಅಂತರವಲಂಬಿತ ಮತ್ತು ಅಂತರ್ ಸಂಪರ್ಕಿತ ಜಗತ್ತಿನಲ್ಲಿ ಶ್ರೀಮಂತ ದೇಶವಿರಲಿ ಅಥವಾ ಬಡ ದೇಶವಿರಲಿ, ಅದು ಪೂರ್ವ ದೇಶವಾಗಿರಲಿ ಅಥವಾ ಪಶ್ಚಿಮದ್ದಾಗಿರಲಿ, ಉತ್ತರದ್ದಾಗಿರಲಿ ಅಥವಾ ದಕ್ಷಿಣದ್ದಾಗಿರಲಿ-ಅದು ಜಾಗತಿಕ ವಿಪತ್ತುಗಳ ಸೋಂಕಿನ ಪರಿಣಾಮವನ್ನು ಸಂಪೂರ್ಣವಾಗಿ  ತಡೆದು ನಿಲ್ಲಲಾರದು ಎಂಬುದನ್ನು ಸಾರಿದೆ. ಎರಡನೇ ಶತಮಾನದಲ್ಲಿ ಭಾರತೀಯ ಸಂತ, ವಿದ್ವಾಂಸ ನಾಗಾರ್ಜುನ ಬರೆದಿದ್ದಾರೆ “ ಪದ್ಯಗಳು ಅವಲಂಬಿತ ಉದ್ಭವಗಳು” प्रतीत्यसमुत्पाद ಎಂಬುದಾಗಿ. ಅವರು ಮಾನವರು ಸಹಿತ ಎಲ್ಲಾ ಸಂಗತಿಗಳ ಅಂತರ್ ಸಂಬಂಧವನ್ನು ತೋರಿಸಿದ್ದಾರೆ. ಇದು ಮಾನವ ಜೀವನ ನಿಸರ್ಗದಲ್ಲಿ ಮತ್ತು ಸಾಮಾಜಿಕ ಜಗತ್ತಿನಲ್ಲಿ ಹೇಗೆ ಅನಾವರಣಗೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ. ಈ ಪ್ರಾಚೀನ ಜ್ಞಾನವನ್ನು ಆಳವಾಗಿ ಅರಿತುಕೊಂಡಷ್ಟೂ ನಾವು ನಮ್ಮ ಜಾಗತಿಕ ವ್ಯವಸ್ಥೆಯ ಅಪಾಯ ಸಂಭಾವ್ಯವನ್ನು ಕಡಿಮೆ ಮಾಡಬಹುದು. ಒಂದೆಡೆ ಜಾಗತಿಕ ಸಾಂಕ್ರಾಮಿಕವು ನಮಗೆ ಪರಿಣಾಮಗಳು ಹೇಗೆ ಬಹಳ ವೇಗವಾಗಿ ಜಗತ್ತಿನಾದ್ಯಂತ ಪಸರಿಸಬಲ್ಲುದು ಎಂಬುದನ್ನು ತೋರಿಸಿದರೆ, ಇನ್ನೊಂದೆಡೆ ಸಮಾನ ವೈರಿಯ ವಿರುದ್ಧ ಹೋರಾಡಲು ಜಗತ್ತು ಹೇಗೆ ಒಂದಾಗಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಅತ್ಯಂತ ಕಠಿಣ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಕೂಡಾ ಇದು ನಮಗೆ ತೋರಿಸಿದೆ.ನಾವು ದಾಖಲೆ ಅವಧಿಯಲ್ಲಿ ಲಸಿಕೆಯನ್ನು ಅಭಿವೃದ್ಧಿ ಮಾಡಿದ್ದೇವೆ. ಜಾಗತಿಕ ಸಾಂಕ್ರಾಮಿಕವು ನಮಗೆ ಜಾಗತಿಕ ಸವಾಲುಗಳು ಎಲ್ಲಿಂದಲೇ ಬರಲಿ ಅದನ್ನು ಎದುರಿಸುವ ಅನ್ವೇಷಣೆಯನ್ನು ನಮಗೆ ತೋರಿಸಿಕೊಟ್ಟಿದೆ. ನಾವು ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಅನ್ವೇಷಣೆಯನ್ನು ಬೆಂಬಲಿಸುವ ಜಾಗತಿಕ ಪರಿಸರ ವ್ಯವಸ್ಥೆಯನ್ನು ಮತ್ತು ಅತ್ಯಂತ ಅವಶ್ಯಕತೆ ಇರುವಲ್ಲಿಗೆ ಅದನ್ನು ವರ್ಗಾಯಿಸುವ ವ್ಯವಸ್ಥೆಯನ್ನು ಪೋಷಿಸುತ್ತಾ ಬರಬೇಕು.

2021ರ ವರ್ಷ ಜಾಗತಿಕ ಸಾಂಕ್ರಾಮಿಕದಿಂದ ತ್ವರಿತವಾಗಿ ಮುಕ್ತವಾಗುವಂತಹ ಸಾಧ್ಯತೆಯ  ಭರವಸೆಯನ್ನು ನೀಡಿದೆ. ಆದಾಗ್ಯೂ ಜಾಗತಿಕ ಸಾಂಕ್ರಾಮಿಕದ ಪಾಠಗಳನ್ನು ನಾವು ಮರೆಯಬಾರದು. ಅವುಗಳು ಸಾರ್ವಜನಿಕ ಆರೋಗ್ಯ ದುರಂತಗಳ ಬಗ್ಗೆ ಹೇಳುವುದು ಮಾತ್ರವಲ್ಲದೆ ಇತರ ಅಪಾಯಗಳ ಬಗ್ಗೆಯೂ ಬೆಳಕು ಚೆಲ್ಲುತ್ತವೆ. ನಮ್ಮೆದುರು ವಾತಾವರಣ ಬಿಕ್ಕಟ್ಟು ಇದೆ. ವಿಶ್ವಸಂಸ್ಥೆಯ ಪರಿಸರ ಮುಖ್ಯಸ್ಥರು ಇತ್ತೀಚೆಗೆ ಹೇಳಿದಂತೆ “ವಾತಾವರಣ ಬಿಕ್ಕಟ್ಟಿಗೆ ಲಸಿಕೆ ಎಂಬುದಿಲ್ಲ”. ವಾತಾವರಣ ಬದಲಾವಣೆಯನ್ನು ನಿಭಾಯಿಸಲು ಸಹ್ಯ ಮತ್ತು ದೃಢವಾದ ಪ್ರಯತ್ನಗಳನ್ನು ಮಾಡಬೇಕಾಗಿದೆ. ಈಗಾಗಲೇ ಗಮನಕ್ಕೆ ಬಂದಿರುವ ಬದಲಾವಣೆಗಳಿಗೆ  ಹೊಂದಿಕೊಳ್ಳಬೇಕಾದ ಅಗತ್ಯವಿದೆ ಮಾತ್ರವಲ್ಲ ಅವುಗಳು ಇಡೀ ಜಗತ್ತಿನಲ್ಲಿ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಮಿತ್ರಕೂಟದ ಮಹತ್ವ ಬಹಳ ಹೆಚ್ಚಿನದಾಗಿದೆ. ನಾವು ಮೂಲಸೌಕರ್ಯ ಪುನಶ್ಚೇತನದ ಮೇಲೆ, ಸ್ಥಿತಿಸ್ಥಾಪಕತ್ವದ ವ್ಯವಸ್ಥೆಯ ಮೇಲೆ ನಮ್ಮ ಹೂಡಿಕೆಗಳನ್ನು ಮಾಡಿದರೆ ನಮ್ಮ ವಿಸ್ತಾರ ವ್ಯಾಪ್ತಿಯ ಹೊಂದಾಣಿಕೆಯ ಕೇಂದ್ರ ಬಿಂದು ಅದಾಗುತ್ತದೆ. ಭಾರತವೂ ಸಹಿತ ಮೂಲಸೌಕರ್ಯಗಳ ಮೇಲೆ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿರುವ ದೇಶಗಳು, ಈ ಹೂಡಿಕೆ ಪುನಶ್ಚೇತನದ ಮೇಲೆ ಎಂಬುದನ್ನು ಖಾತ್ರಿಪಡಿಸಬೇಕೇ ಹೊರತು ಅಪಾಯದ ಮೇಲೆ ಅಲ್ಲ. ಆದರೆ ಇತ್ತೀಚಿನ ವಾರಗಳ ವಿದ್ಯಮಾನಗಳು ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆ ಮಾತ್ರ ಅಲ್ಲ ಎಂಬುದನ್ನು ತೋರಿಸಿವೆ. ಕಳೆದ ತಿಂಗಳು ಉರಿಯಲ್ಲಿ ಚಳಿಗಾಲದ ಪ್ರವಾಹ ಅಮೆರಿಕಾದ ಟೆಕ್ಸಾಸ್ ನಲ್ಲಿ ಮೂರನೇ ಒಂದು ಭಾಗದಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹಾಳು ಮಾಡಿತು. ಬಹುತೇಕ ಮೂರು ಮಿಲಿಯನ್ ಜನರು ವಿದ್ಯುತ್ ಇಲ್ಲದೆ ಕಂಗಾಲಾದರು. ಇಂತಹ ಘಟನೆಗಳು ಎಲ್ಲಿ ಬೇಕಾದರೂ ನಡೆಯಬಹುದು.ಇದರ ಸಂಕೀರ್ಣ ಕಾರಣಗಳನ್ನು ಇನ್ನಷ್ಟೇ ಅರಿಯಬೇಕಾಗಿದೆ. ನಾವು ಇಂತಹ ಪಾಠಗಳನ್ನು ಕಲಿಯಬೇಕು ಮತ್ತು ಪೂರ್ವತಯಾರಿಯನ್ನು ಮಾಡಬೇಕು.

ಮೂಲಸೌಕರ್ಯ ವ್ಯವಸ್ಥೆಗಳಾದ –ಡಿಜಿಟಲ್ ಮೂಲಸೌಕರ್ಯ, ಶಿಪ್ಪಿಂಗ್ ಮಾರ್ಗಗಳು, ವಾಯು ಯಾನ ಜಾಲಗಳು-ಇಡೀ ವಿಶ್ವವನ್ನು ವ್ಯಾಪಿಸಿವೆ. ವಿಪತ್ತಿನ ಪರಿಣಾಮ ಜಗತ್ತಿನ ಯಾವುದೇ ಒಂದು ಭಾಗದಿಂದ ಬಹಳ ವೇಗವಾಗಿ ವಿಶ್ವದಾದ್ಯಂತ ಹರಡಬಲ್ಲದು. ಜಾಗತಿಕ ವ್ಯವಸ್ಥೆಗೆ ಪುನಶ್ಚೇತನ ನೀಡಲು ಸಹಕಾರ ಬಹಳ ಮುಖ್ಯ. ಮೂಲಸೌಕರ್ಯಗಳನ್ನು ಬಹಳ ಧೀರ್ಘಾವಧಿಗಾಗಿ ಅಭಿವೃದ್ಧಿ ಮಾಡಬೇಕು. ಅದನ್ನು ನಾವು ಪುನಶ್ಚೇತನಗೊಳ್ಳುವಂತೆ ರೂಪಿಸಿದರೆ, ನಾವು ದುರಂತಗಳನ್ನು ನಮ್ಮ ಕಾಲದ ಮಟ್ಟಿಗೆ ತಪ್ಪಿಸಿದಂತಾಗುವುದು ಮಾತ್ರವಲ್ಲ ಮುಂದಿನ ಹಲವಾರು ತಲೆಮಾರುಗಳಿಗೂ ಅದರ ಅಪಾಯವನ್ನು ತಪ್ಪಿಸಿದಂತಾಗುತ್ತದೆ. ಸೇತುವೆ ಕುಸಿದಾಗ, ಟೆಲಿಕಾಂ ಗೋಪುರ ನೆಲ ಕಚ್ಚಿದಾಗ, ಇಂಧನ, ವಿದ್ಯುತ್ ವ್ಯವಸ್ಥೆ ವಿಫಲವಾದಾಗ ಅಥವಾ ಶಾಲೆಗೆ ಹಾನಿಯಾದಾಗ, ನಷ್ಟ ಎಂಬುದು ನೇರ ಹಾನಿ ಮಾತ್ರವಲ್ಲ. ನಾವು ನಷ್ಟವನ್ನು ಸಮಗ್ರವಾಗಿ ನೋಡಬೇಕು. ಸಣ್ಣ ಉದ್ಯಮಗಳಿಗೆ ಈ ಅವ್ಯವಸ್ಥೆಗಳಿಂದಾಗುವ ಹಾನಿ, ಶಾಲೆಗಳ ಅನಿಶ್ಚಿತತೆಯಿಂದ ಮಕ್ಕಳ ಮೇಲಾಗುವ ಹಾನಿ ಹಲವು ಪಟ್ಟಿನದಾಗಿರುತ್ತದೆ. ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನಕ್ಕಾಗಿ ಸರಿಯಾದ ಲೆಕ್ಕಪತ್ರ ಧೋರಣೆಯನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. ನಾವು ನಮ್ಮ ಮೂಲಸೌಕರ್ಯವನ್ನು ಪುನಶ್ಚೇತನಕ್ಕೆ ತಕ್ಕಂತೆ ರೂಪಿಸಿದರೆ ಆಗ ನಾವು ನೇರ ಮತ್ತು ಪರೋಕ್ಷ ನಷ್ಟವನ್ನು ಕಡಿಮೆ ಮಾಡಬಹುದು ಮತ್ತು ಮಿಲಿಯಾಂತರ ಜೀವನೋಪಾಯಗಳನ್ನು ರಕ್ಷಿಸಬಹುದು.

ಸಿ.ಡಿ.ಆರ್.ಐ.ಯ ಆರಂಭಿಕ ವರ್ಷಗಳಲ್ಲಿ ನಾವು ಭಾರತದ ಜೊತೆಗೆ ಯುನೈಟೆಡ್ ಕಿಂಗ್ಡಂನ ನಾಯಕತ್ವ ಹೊಂದಿದ್ದುದಕ್ಕೆ ಅಭಾರಿಯಾಗಿದ್ದೇವೆ. 2021ರ ವರ್ಷವು ನಿರ್ದಿಷ್ಟವಾಗಿ ಬಹಳ ಪ್ರಮುಖ ವರ್ಷ. ನಾವು ಪ್ಯಾರಿಸ್ ಒಪ್ಪಂದದ ಸಹ್ಯ ಅಥವಾ ಸುಸ್ಥಿರ  ಅಭಿವೃದ್ಧಿಯ ಗುರಿಗಳ ಮತ್ತು ಸೆಂಡೈ ಚೌಕಟ್ಟಿನ ಮಧ್ಯಬಿಂದು ಸಮೀಪಿಸುತ್ತಿದ್ದೇವೆ. ಸಿ.ಒ.ಪಿ.-26ರ ನಿರೀಕ್ಷೆಗಳು ಬಹಳ ಎತ್ತರದಲ್ಲಿವೆ ಮತ್ತು ಇವುಗಳ ಅತಿಥೇಯವನ್ನು ಈ ವರ್ಷಾಂತ್ರ್ಯದಲ್ಲಿ ಯು.ಕೆ. ಮತ್ತು ಇಟೆಲಿಗಳು ವಹಿಸಿಕೊಳ್ಳುತ್ತಿವೆ.

ಪುನಶ್ಚೇತನಗೊಳ್ಳುವ ಮೂಲಸೌಕರ್ಯದ ಸಹಭಾಗಿತ್ವವು ಈ ಕೆಲವು ನಿರೀಕ್ಷೆಗಳನ್ನು ಈಡೇರಿಸುವಲ್ಲಿ ತನ್ನ ಪ್ರಮುಖ ಪಾತ್ರವನ್ನು ವಹಿಸಬೇಕಾಗುತ್ತದೆ. ಆದ್ಯತೆ ನೀಡಬೇಕಾದ ಕೆಲವು ಪ್ರಮುಖ ವಲಯಗಳನ್ನು ನಾನಿಲ್ಲಿ ಹಂಚಿಕೊಳ್ಳುತ್ತೇನೆ. ಮೊದಲನೆಯದಾಗಿ, ಸಿ.ಡಿ.ಆರ್.ಐ. ಯು ಕೇಂದ್ರ ಭರವಸೆಯಾದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅಡಕಗೊಳಿಸಿಕೊಳ್ಳಬೇಕು, ಅಂದರೆ “ಯಾರನ್ನೂ ಹಿಂದುಳಿಯಲು ಬಿಡದೆ”. ಇದರರ್ಥ ನಾವು ಅಪಾಯ ಸಂಭವನೀಯತೆ ಅತ್ಯಂತ ಹೆಚ್ಚು ಇರುವ  ರಾಷ್ಟ್ರಗಳ ಕಳವಳಗಳನ್ನು ಮತ್ತು ಸಮುದಾಯಗಳ ಕಳವಳಗಳನ್ನು ಮೊದಲು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಣ್ಣ ದ್ವೀಪ ರಾಷ್ಟ್ರಗಳು ಈಗಾಗಲೇ ವಿಪತ್ತುಗಳ ಪರಿಣಾಮವನ್ನು ಅನುಭವಿಸುತ್ತಿದ್ದು, ಅವುಗಳಿಗೆ ಅವುಗಳು ಅವಶ್ಯ ಎನಿಸುವ ಎಲ್ಲಾ ತಂತ್ರಜ್ಞಾನ, ಜ್ಞಾನ ಮತ್ತು ಸಹಾಯಗಳು ಲಭ್ಯವಾಗುವಂತಾಗಬೇಕು. ನಾವು ಸ್ಥಳೀಯ ಹಿನ್ನೆಲೆಯಲ್ಲಿ ಜಾಗತಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯ ಮತ್ತು ಬೆಂಬಲವನ್ನು ಹೊಂದಿರಬೇಕು. ಎರಡನೆಯದಾಗಿ ನಾವು ಕೆಲವು ಪ್ರಮುಖ ಮೂಲಸೌಕರ್ಯಗಳ ವಲಯಗಳಾದ-ಜಾಗತಿಕ ಸಾಂಕ್ರಾಮಿಕದಲ್ಲಿ ಪ್ರಮುಖ ಪಾತ್ರವಹಿಸಬಹುದಾದ ಅದರಲ್ಲೂ ನಿರ್ದಿಷ್ಟವಾಗಿ ಆರೋಗ್ಯ ಮೂಲಸೌಕರ್ಯ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಸಾಧನೆ, ಕಾರ್ಯ ಚಟುವಟಿಕೆಗಳ ಮೌಲ್ಯಮಾಪನ ಮಾಡಬೇಕು. ಈ ವಲಯಗಳು ಹೇಳುವ ಪಾಠಗಳಾವುವು?. ಮತ್ತು ನಾವು ಅವುಗಳನ್ನು ಹೇಗೆ ಭವಿಷ್ಯತ್ತಿಗಾಗಿ ಹೆಚ್ಚು ಪುನಶ್ಚೇತನ ಮಾಡಬಹುದು. ಎಂಬುದನ್ನು ಪರಾಮರ್ಶಿಸಬೇಕು. ಮತ್ತು ರಾಷ್ಟ್ರೀಯ ಹಾಗು ಉಪ ರಾಷ್ಟ್ರೀಯ ಮಟ್ಟದಲ್ಲಿ ನಾವು ಸಮಗ್ರ ಯೋಜನೆ, ರಾಚನಿಕ ವಿನ್ಯಾಸ, ಆಧುನಿಕ ಸಾಮಗ್ರಿಗಳ ಲಭ್ಯತೆ ಮತ್ತು ಎಲ್ಲಾ ಮೂಲ ಸೌಕರ್ಯ ವಲಯಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಕೌಶಲ್ಯಯುಕ್ತ ಸಿಬ್ಬಂದಿ ಲಭ್ಯತೆಯ ಸಾಮರ್ಥ್ಯ ವೃದ್ಧಿಯ ಮೇಲೆ ಹೂಡಿಕೆ ಮಾಡಬೇಕಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಶೋಧನೆ ಮತ್ತು ಅಭಿವೃದ್ಧಿ ಅವಶ್ಯವಿದೆ. ಮೂರನೇಯದಾಗಿ ಪುನಶ್ಚೇತನದ ನಮ್ಮ ಹಂಬಲದಲ್ಲಿ ಯಾವುದೇ ತಂತ್ರಜ್ಞಾನವನ್ನು ತೀರಾ ಪ್ರಾಥಮಿಕ ಅಥವಾ ತೀರಾ ಆಧುನಿಕ ಎಂದು ಪರಿಗಣಿಸಬಾರದು. ಸಿ.ಡಿ.ಆರ್.ಐ. ಯು ತಂತ್ರಜ್ಞಾನ ಆನ್ವಯಿಕತೆಯ ಪ್ರದರ್ಶಕ ಪರಿಣಾಮವನ್ನು ಗರಿಷ್ಠತಮವಾಗಿಸಬೇಕು. ಗುಜರಾತಿನಲ್ಲಿ ನಾವು ಭಾರತದ ಪ್ರತ್ಯೇಕಿಸುವ ತಂತ್ರಜ್ಞಾನದಲ್ಲಿ ಮೊದಲ ಆಸ್ಪತ್ರೆಯನ್ನು ಕಟ್ಟಿದೆವು. ಈಗ ಭೂಕಂಪ ಸುರಕ್ಷೆ ಒದಗಿಸುವ ಈ ತಳಮಟ್ಟದ ಪ್ರತ್ಯೇಕಿಸುವಿಕೆ ವ್ಯವಸ್ಥೆಯನ್ನು ಭಾರತದಲ್ಲಿಯೇ ನಿರ್ಮಾಣ ಮಾಡಲಾಗಿದೆ. ಈಗಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ನಮಗೆ ಇನ್ನಷ್ಟು ಅವಕಾಶಗಳಿವೆ. ನಾವು ಭೂ ಅವಕಾಶ ತಂತ್ರಜ್ಞಾನದ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಾಗಬೇಕು. ಬಾಹ್ಯಾಕಾಶ ಆಧಾರಿತ ಸಾಮರ್ಥ್ಯಗಳು, ದತ್ತಾಂಶ ವಿಜ್ಞಾನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ , ವಸ್ತು ವಿಜ್ಞಾನಗಳನ್ನು ಸ್ಥಳೀಯ ಜ್ಞಾನದ ಜೊತೆ ಸಮ್ಮಿಳಿತಗೊಳಿಸಿಕೊಂಡು ಪುನಶ್ಚೇತನವನ್ನು ಸಾಧಿಸಬೇಕು. ಮತ್ತು ಅಂತಿಮವಾಗಿ “ಪುನಶ್ಚೇತನ ಮೂಲಸೌಕರ್ಯ”  ಚಿಂತನೆ ಜನಾಂದೋಲನವಾಗಬೇಕು.ಅದು ತಜ್ಞರ ಮತ್ತು ಔಪಚಾರಿಕ ಸಂಸ್ಥೆಗಳ ಶಕ್ತಿಗಳ ಜೊತೆಗೆಯೇ, ಸಮುದಾಯಗಳು  ಅದರಲ್ಲೂ ನಿರ್ದಿಷ್ಟವಾಗಿ ಯುವಜನತೆಯನ್ನು ಒಳಗೊಂಡಿರಬೇಕು. ಪುನಶ್ಚೇತನ ಮೂಲಸೌಕರ್ಯಕ್ಕಾಗಿರುವ ಸಾಮಾಜಿಕ ಬೇಡಿಕೆ ಗುಣಮಾನಕಗಳಿಗೆ ಬದ್ಧವಾಗುವಿಕೆಯನ್ನು ಸುಧಾರಿಸುವಲ್ಲಿ ಬಹಳ ದೂರ ಕೊಂಡೊಯ್ಯಬಲ್ಲದು. ಸಾರ್ವಜನಿಕ ಜಾಗೃತಿ ಮತ್ತು ಶಿಕ್ಷಣವು ಈ ನಿಟ್ಟಿನಲ್ಲಿ ಪ್ರಮುಖ ಸಂಗತಿಗಳು. ನಮ್ಮ ಶಿಕ್ಷಣ ವ್ಯವಸ್ಥೆ ಸ್ಥಳೀಯವಾಗಿ ನಿರ್ದಿಷ್ಟವಾಗಿರುವ ಅಪಾಯಗಳ, ವಿಪತ್ತುಗಳ ಬಗ್ಗೆ ಅರಿವನ್ನು, ಜಾಗೃತಿಯನ್ನು ಹೆಚ್ಚಿಸಬೇಕು ಮತ್ತು ಅವುಗಳು ಮೂಲಸೌಕರ್ಯಗಳ ಮೇಲೆ ಉಂಟುಮಾಡುವ ಪರಿಣಾಮ ಸಾಧ್ಯತೆಯನ್ನೂ ಮನಗಾಣಬೇಕು.

ಮುಗಿಸುವಾಗ, ಸಿ.ಡಿ.ಆರ್.ಐ. ಎದುರು ಸವಾಲುಗಳಿವೆ ಮತ್ತು ಅದರೆದುರು ತುರ್ತು ಕಾರ್ಯಪಟ್ಟಿಯೂ ಇದೆ ಎಂಬುದನ್ನು ಹೇಳಲು ಇಚ್ಛಿಸುತ್ತೇನೆ. ಮತ್ತು ಅದು ಸದ್ಯದಲ್ಲಿಯೇ ಫಲಿತಾಂಶವನ್ನು ನೀಡುವ ನಿರೀಕ್ಷೆ ಇದೆ. ಮುಂದಿನ ಚಂಡಮಾರುತದಲ್ಲಿ, ಮುಂದಿನ ಮಹಾಪೂರದಲ್ಲಿ,  ಮುಂದಿನ ಭೂಕಂಪದಲ್ಲಿ ನಾವು ನಮ್ಮ ಮೂಲಸೌಕರ್ಯ ವ್ಯವಸ್ಥೆಗಳು ಉತ್ತಮವಾಗಿ ತಯಾರಾಗಿವೆ ಎಂದು ಹೇಳುವಂತಹ ಸ್ಥಿತಿಯಲ್ಲಿರಬೇಕು. ಮತ್ತು ನಷ್ಟದ ಪ್ರಮಾಣ ಕಡಿಮೆಯಾಗುವಂತಿರಬೇಕು. ಹಾನಿಗಳು ಸಂಭವಿಸಿದರೆ, ನಾವು ಸೇವೆಗಳನ್ನು ತ್ವರಿತವಾಗಿ ಮರುಸ್ಥಾಪಿಸುವಂತಿರಬೇಕು ಮತ್ತು ಮರುನಿರ್ಮಾಣ ಮಾಡುವಂತಿರಬೇಕು. ಪುನಶ್ಚೇತನದ ನಮ್ಮ ಬಯಕೆಯಲ್ಲಿ ನಾವೆಲ್ಲರೂ ಒಂದೇ ದೋಣಿಯಲ್ಲಿದ್ದೇವೆ!. ಜಾಗತಿಕ ಸಾಂಕ್ರಾಮಿಕವು ನಮಗೆ ಎಲ್ಲರೂ ಸುರಕ್ಷಿತವಾಗಿರುವವರೆಗೆ ಯಾರೊಬ್ಬರೂ ಸುರಕ್ಷಿತ ಅಲ್ಲ ಎಂಬ ಸಂದೇಶವನ್ನು ಕೊಟ್ಟಿದೆ!.ಯಾವ ಸಮುದಾಯವು ಕೂಡಾ, ಯಾವುದೇ ಸ್ಥಳ, ಯಾವುದೇ ಪರಿಸರ ವ್ಯವಸ್ಥೆ, ಮತ್ತು ಯಾವುದೇ ಆರ್ಥಿಕತೆ ಹಿಂದುಳಿಯದೇ ಇರುವುದನ್ನು ನಾವು ಖಾತ್ರಿಪಡಿಸಬೇಕು. ಜಾಗತಿಕ ಸಾಂಕ್ರಾಮಿಕದ ವಿರುದ್ಧದ ಹೋರಾಟ ವಿಶ್ವದ ಏಳು ಬಿಲಿಯನ್ ಜನತೆಯ ಶಕ್ತಿಗಳನ್ನು ಒಗ್ಗೂಡಿಸಿದಂತೆ, ಪುನಶ್ಚೇತನಕ್ಕಾಗಿರುವ ನಮ್ಮ ಹಂಬಲ ಈ ಭೂಗ್ರಹದ ಪ್ರತಿಯೊಬ್ಬ ವ್ಯಕ್ತಿಯ ಕಲ್ಪನೆ ಮತ್ತು ಉಪಕ್ರಮಗಳನ್ನು ನಿರೂಪಿಸುವಂತಿರಬೇಕು.   

ಬಹಳ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.