ಮಾಲ್ಡೀವ್ಸ್ ಅಧ್ಯಕ್ಷರ ವಿಶೇಷ ದೂತ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಮೊಹಮದ್ ಅಸೀಮ್ ಅವರಿಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಹಿಂದೂ ಮಹಾಸಾಗರದಲ್ಲಿ ಹಂಚಿಕೆಯ ಇತಿಹಾಸ, ಸಂಸ್ಕೃತಿ ಮತ್ತು ಕಡಲ ಹಿತಾಸಕ್ತಿಗಳಿಂದಾಗಿ ಆಪ್ತ ನೆರೆಹೊರೆಯವರಾದ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಬಾಂಧವ್ಯ ಕುರಿತು ಅವರು ಚರ್ಚಿಸಿದರು. ವಿಶೇಷ ದೂತರಾದ ಅಸೀಮ್ ಅವರು, ಮಾಲ್ಡೀವ್ಸ್ ನ ‘ಭಾರತ ಮೊದಲು’ನೀತಿಯ ಅಡಿಯಲ್ಲಿ ಭಾರತದೊಂದಿಗೆ ಆಪ್ತ ಬಾಂಧವ್ಯ ಕಾಪಾಡಿಕೊಳ್ಳುವ ಬದ್ಧತೆಯನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿಯವರು, ಮಾಲ್ಡೀವ್ಸ್ ನ ಪ್ರಗತಿ ಮತ್ತು ಭದ್ರತೆಗೆ ಬೆಂಬಲ ನೀಡುತ್ತಿರುವ ಭಾರತ ಎಂದೆಂದಿಗೂ ವಿಶ್ವಾಸಾರ್ಹ ಮತ್ತು ಆಪ್ತ ನೆರೆ ರಾಷ್ಟ್ರವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿಯವರು ಮಾಲ್ಡೀವ್ಸ್ ಗೆ ಭೇಟಿ ನೀಡಬೇಕು ಎಂಬ ಅಧ್ಯಕ್ಷ ಯಮೀನ್ ಅವರ ಆಮಂತ್ರಣವನ್ನು ವಿಶೇಷ ಪ್ರತಿನಿಧಿ ಅರಿಕೆ ಮಾಡಿಕೊಂಡರು. ಪ್ರಧಾನಮಂತ್ರಿಯವರು ಆಹ್ವಾನಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ಸೂಕ್ತ ಸಮಯದಲ್ಲಿ ಭೇಟಿ ನೀಡಲು ಒಪ್ಪಿಗೆ ಸೂಚಿಸಿದರು.
ವಿಶೇಷ ಪ್ರತಿನಿಧಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಶುಭಾಶಯಗಳನ್ನು ಪ್ರಧಾನಿಯವರಿಗೆ ತಿಳಿಸಿದರು. ಪ್ರಧಾನಿಯವರು ಅದಕ್ಕೆ ಪ್ರತಿ ಶುಭಾಶಯ ಸಲ್ಲಿಸಿದರು.