ಮಾಜಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಮತ್ತು ಭಾರತದ ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರಾಗಿದ್ದ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ, ಪ್ರಾರ್ಥನಾ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗಿಯಾಗಿದ್ದರು. ಶ್ರೀಮತಿ ಸುಷ್ಮಾ ಸ್ವರಾಜ್ ಅವರು ದೇಶಕ್ಕೆ ಶ್ರದ್ಧೆಯಿಂದ ಮಾಡಿದ ಸೇವೆಯನ್ನು ಬಣ್ಣಿಸಿದ ಅವರು, ಅವರ ಸಾರ್ವಜನಿಕ ಜೀವನದ ಹಲವು ವಿಚಾರಗಳನ್ನು ಒತ್ತಿ ಹೇಳಿದರು.
ಅವರೊಂದಿಗೆ ಕಾರ್ಯ ನಿರ್ವಹಿಸಿದ ಎಲ್ಲರೂ ಶ್ರೀಮತಿ ಸುಷ್ಮಾ ಸ್ವರಾಜ್ ಅವರೊಂದಿಗೆ ಆಪ್ತವಾಗಿ ಸಂವಾದ ನಡೆಸಲು ಹರಸಲ್ಪಟ್ಟಿದ್ದರು.
ಅವರ ಕೊಡುಗೆ ಸ್ಮರಿಸಿದ ಪ್ರಧಾನಮಂತ್ರಿಯವರು, ನಾವು ಸುಷ್ಮಾ ಸ್ವರಾಜ್ ಅವರೊಂದಿಗೆ ಆಪ್ತವಾಗಿ ಮಾತುಕತೆ ನಡೆಸಲು ಹರಸಲ್ಪಟ್ಟಿದ್ದೆವು ಎಂದರು. ಸುಷ್ಮಾ ಅವರದು ಬಹುಮುಖಿ ವ್ಯಕ್ತಿತ್ವ ಮತ್ತು ಅವರೊಂದಿಗೆ ಕೆಲಸ ಮಾಡಿದ ಎಲ್ಲರೂ ಅವರದು ಎಂಥ ಶ್ರೇಷ್ಠ ವ್ಯಕ್ತಿತ್ವ ಎಂಬುದನ್ನು ಕಂಡಿದ್ದಾರೆ ಎಂದರು.
ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಸವಾಲು ಸ್ವೀಕರಿಸಲು ಎಂದೂ ಹಿಂಜರಿಯಲಿಲ್ಲ
ಶ್ರೀಮತಿ ಸುಷ್ಮಾ ಸ್ವರಾಜ್ ಅವರು, ಸವಾಲು ಸ್ವೀಕರಿಸಲು ಎಂದೂ ಹಿಂಜರಿದವರಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. 1999ರಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವರ ನಿರ್ಧಾರ ಉಲ್ಲೇಖಿಸಿದ ಪ್ರಧಾನಮಂತ್ರಿ, “ನಾನು ಮತ್ತು ವೆಂಕಯ್ಯನಾಯ್ಡು ಅವರು ಸುಷ್ಮಾ ಅವರ ಬಳಿ ಹೋಗಿ, ಕರ್ನಾಟಕದಲ್ಲಿ ಚುನಾವಣೆ ಎದುರಿಸುವಂತೆ ಕೇಳಿದ್ದೆವು”. ಫಲಿತಾಂಶ ಏನು ಎಂಬುದು ನಿಶ್ಚಿತವಾಗಿತ್ತು ಆದರೆ, ಅವರು ಸವಾಲು ಸ್ವೀಕರಿಸಲು ಸದಾ ಸಿದ್ಧರಿದ್ದರು” ಎಂದರು. ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಪ್ರಭಾವಿ ವಾಗ್ಮಿಯಾಗಿದ್ದರು ಮತ್ತು ಅವರ ಭಾಷಣಗಳು ಪರಿಣಾಮಕಾರಿ ಮತ್ತು ಪ್ರೇರಣಾತ್ಮಕವಾಗಿರುತ್ತಿದ್ದವು ಎಂದು ಪ್ರಧಾನಮಂತ್ರಿ ತಿಳಿಸಿದರು.
ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಎಂ.ಇ.ಎ.ಯನ್ನು ಶಿಷ್ಟಾಚಾರಕ್ಕಿಂತ ಹೆಚ್ಚಾಗಿ ಜನರ ಪರ ಮಾಡಿದ್ದರು.
ಸುಷ್ಮಾ ಸ್ವರಾಜ್ ಅವರು ತಾವು ನಿರ್ವಹಿಸುತ್ತಿದ್ದ ಸಚಿವರ ಕರ್ತವ್ಯದಲ್ಲಿ, ಅಲ್ಲಿ ಗಮನಾರ್ಹ ಕಾರ್ಯ ಸಂಸ್ಕೃತಿಯನ್ನು ತರುತ್ತಿದ್ದರು ಎಂದು ಪ್ರಧಾನಮಂತ್ರಿ ತಿಳಿಸಿದರು. “ಯಾರೇ ಆದರೂ ಸಾಂಪ್ರದಾಯಿಕವಾಗಿ ಎಂ.ಇ.ಎ.ಯಲ್ಲಿ ಶಿಷ್ಟಾಚಾರಕ್ಕೆ ಅಂಟಿಕೊಳ್ಳುತ್ತಾರೆ, ಆದರೆ ಸುಷ್ಮಾ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಜನರ ಕರೆಗೆ ಓಗೊಟ್ಟರು, ಸಚಿವಾಲಯವನ್ನು ಜನ ಸ್ನೇಹಿಗೊಳಿಸಿದರು”, ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
ಶ್ರೀಮತಿ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಅವಧಿಯಲ್ಲಿ ಪಾಸ್ ಪೋರ್ಟ್ ಕಚೇರಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ
ಶ್ರೀಮತಿ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಅವಧಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಪಾಸ್ ಪೋರ್ಟ್ ಕಚೇರಿಗಳ ಸಂಖ್ಯೆ ಹೇಗೆ ಗಣನೀಯವಾಗಿ ಏರಿಕೆಯಾಯಿತು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿದರು.
ಹರ್ಯಾನ್ವಿ ಸ್ಪರ್ಶ
ಸುಷ್ಮಾ ಸ್ವರಾಜ್ ಅವರ ಬಗ್ಗೆ ಹೆಚ್ಚು ತಿಳಿಯದ ಅಂಶಗಳ ಪೈಕಿ ಒಂದಾದ ಹರ್ಯಾನ್ವಿ ಉಚ್ಚಾರಣೆಯ ಬಗ್ಗೆ ಪ್ರಧಾನಮಂತ್ರಿ ಒತ್ತಿ ಹೇಳಿದರು. “ರಾಜಕೀಯವಾಗಿ ಸಂಗತಿಗಳನ್ನು ಸರಿಪಡಿಸಿಕೊಳ್ಳಿ ಎಂದು ಜನರು ನಮಗೆ ಹೇಳುವುದು ಸಾಮಾನ್ಯ, ಆದರೆ ಸುಷ್ಮಾ ಅವರು ವಿಭಿನ್ನವಾಗಿದ್ದರು. ಅವರು ತಮ್ಮ ಮನದಾಳದ ಮಾತು ಹೇಳಲು ಹಿಂಜರಿಯುತ್ತಿರಲಿಲ್ಲ ಮತ್ತು ಅವರು ದೃಢವಾಗಿ ಮಾತನಾಡುತ್ತಿದ್ದರು. ಇದು ಅವರ ವಿಶೇಷವಾಗಿತ್ತು” ಎಂದು ಪ್ರಧಾನಮಂತ್ರಿ ಹೇಳಿದರು.
ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಪಿಎಂಗೂ ಏನು ಮಾಡಬೇಕು ಎಂದು ಹೇಳುತ್ತಿದ್ದರು
ವಿಶ್ವಸಂಸ್ಥೆಯ ಮಹಾಧಿವೇಶನ ಉದ್ದೇಶಿಸಿ ತಾವು ಮೊದಲ ಬಾರಿಗೆ ಭಾಷಣ ಮಾಡಲು ಮುಂದಾಗಿದ್ದಾಗ ನಡೆದ ಘಟನೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಏನು ಮಾಡಬೇಕು ಎಂಬ ಬಗ್ಗೆ ಹೇಗೆ ಮಾರ್ಗದರ್ಶನ ಮಾಡಿದರು ಎಂಬುದನ್ನು ನೆನಪಿಸಿಕೊಂಡರು. ವಿಶ್ವ ಸಂಸ್ಥೆಯಲ್ಲಿ ಮಾಡಬೇಕಾದ ಭಾಷಣ ತಯಾರಿಗೆ ರಾತ್ರಿಯಿಡೀ ಹೇಗೆ ಸುಷ್ಮಾ ಸ್ವರಾಜ್ ನೆರವಾದರು ಎಂಬುದನ್ನು ಅವರು ಸ್ಮರಿಸಿದರು.
ಬಾನ್ಸುರಿಯಲ್ಲಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಹೆಗ್ಗುರುತುಗಳನ್ನು ನೋಡಿ: ಪಿ.ಎಂ.
ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಬಾನ್ಸುರಿಯಲ್ಲಿ ಮೂಡಿಸಿರುವ ಹೆಗ್ಗುರುತುಗಳನ್ನು ತಾವು ಗಮನಿಸಿರುವುದಾಗಿ ಹೇಳಿದ ಪ್ರಧಾನಮಂತ್ರಿ ಅವರ ಆ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಿವಂಗತ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಮತ್ತು ಪುತ್ರಿ ಬಾನ್ಸುರಿ ಅವರಿಗೆ ಪ್ರಧಾನಮಂತ್ರಿಯವರು ಸಾಂತ್ವನ ಹೇಳಿದರು.
ಈ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದ ಗಣ್ಯರಲ್ಲಿ ಅವದೇಶಾನಂದ ಗಿರಿ ಮಹಾರಾಜ್, ಮಾಜಿ ಮಂತ್ರಿ ದಿನೇಶ್ ತ್ರಿವೇದಿ, ಸಂಸತ್ ಸದಸ್ಯ ಪಿನಾಕಿ ಮಿಶ್ರಾ, ಸಚಿವರಾದ ಶ್ರೀ ರಾಮ್ ವಿಲಾಸ್ ಪಾಸ್ವಾನ್, ಸಂಸದ ಸತೀಶ್ ಚಂದ್ರ ಮಿಶ್ರಾ, ಸಚಿವ ರಾಜೀವ್ ರಂಜನ್, ಸಂಸದ ತಿರುಚಿ ಶಿವ, ಸಂಸದ ಎ. ನವನೀತ ಕೃಷ್ಣನ್, ಸಂಸದ ನಮ್ಮ ನಾಗೇಶ್ವರ ರಾವ್, ಮಾಜಿ ಸಂಸದ ಶರದ್ ಯಾದವ್, ಸಚಿವ ಅರವಿಂದ್ ಸಾವಂತ್, ಸಂಸದ ಪ್ರೇಮ್ ಚಂದ್ ಗುಪ್ತಾ, ಸಂಸದ ಸುಖ್ಬೀರ್ ಸಿಂಗ್ ಬಾದಲ್, ಸಂಸದೆ ಅನುಪ್ರಿಯಾ ಪಟೇಲ್, ಸಂಸದ ಆನಂದ್ ಶರ್ಮಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಮುಖಂಡರಾದ ಡಾ. ಕೃಷ್ಣ ಗೋಪಾಲ್ ಮತ್ತು ಶ್ರೀ ಜೆ.ಪಿ. ನಡ್ಡಾ ಸೇರಿದ್ದರು.