ಜಮೈಕಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಅಂಡ್ರ್ಯೂ ಮೈಕೆಲ್ ಹೊಲ್ನೆಸ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಐತಿಹಾಸಿಕ ಜಯ ಸಾಧಿಸಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.
ಪ್ರಧಾನಮಂತ್ರಿ ಶ್ರೀ . ನರೇಂದ್ರ ಮೋದಿ ಅವರು ಹೊಲ್ನೆಸ್ ಅವರಿಗೆ ಆತ್ಮೀಯ ಅಭಿನಂದನೆಗಳನ್ನು ತಿಳಿಸಿದ್ದಕ್ಕೆ ಮತ್ತು ಮೊದಲು ಬರೆದಿದ್ದ ಅಭಿನಂದನಾ ಪತ್ರಕ್ಕೂ ಧನ್ಯವಾದಗಳನ್ನು ಹೇಳಿದರು. ಜಮೈಕಾ ಸೇರಿದಂತೆ ಇಡೀ ಕೆರೆಬಿಯನ್ ಪ್ರಾಂತ್ಯದ ದೇಶಗಳ ನಡುವಿನ ಸಂಬಂಧಗಳಿಗೆ ಭಾರತ ಅಗ್ರ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ಶ್ರೀ . ನರೇಂದ್ರ ಮೋದಿ ಪ್ರತಿಪಾದಿಸಿದರು. ಭಾರತ ಈ ವರ್ಷದ ಆರಂಭದಲ್ಲಿ ಕೋರಿಕಾಮ್ ಅಭಿವೃದ್ಧಿ ನಿಧಿಯಲ್ಲಿ ಅಂತಾರಾಷ್ಟ್ರೀಯ ಅಭಿವೃದ್ಧಿ ಪಾಲುದಾರಿಕೆ ಹೊಂದಲು ಆ ಪ್ರಾಂತ್ಯದೊಂದಿಗೆ ಆಳವಾದ ಆರ್ಥಿಕ ಸಹಕಾರ ಹೊಂದಬೇಕೆಂಬ ಬಲವಾದ ಆಶಯ ಹೊಂದಿದ್ದೇ ಕಾರಣ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಹೊಲ್ನೆಸ್ ಅವರು ಭಾರತ ಜಮೈಕಾ ಮತ್ತು ಕೆರೇಬಿಯನ್ ಸಂಬಂಧಗಳಿಗೆ ಆದ್ಯತೆ ನೀಡುತ್ತಿರುವುದನ್ನು ಸ್ವಾಗತಿಸಿದರು. ಪ್ರಧಾನಮಂತ್ರಿ ಶ್ರೀ .ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡುವ ಬಲವಾದ ಆಸಕ್ತಿ ಪುನರ್ ಪ್ರತಿಪಾದಿಸಿದರಲ್ಲದೆ, ಹವಾಮಾನ ವೈಪರೀತ್ಯದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು ಸೇರಿದಂತೆ ಪರಸ್ಪರ ಹಿತಾಸಕ್ತಿಯ ಎಲ್ಲ ವಲಯಗಳಲ್ಲಿ ಸಂಬಂಧಗಳ ಬಲವರ್ಧನೆಗೆ ದುಡಿಯುವುದಾಗಿ ಹೇಳಿದರು.