ಭೂತಾನ್ ಪ್ರಧಾನಿ ದಾಶೋ ಶೆರಿಂಗ್ ಟೊಬ್ಗೆ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ 18ನೇ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಗೆಲುವಿಗಾಗಿ ಅಭಿನಂದಿಸಿದರು. ಕಳೆದ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವನ್ನು ಪ್ರಧಾನಿ ಟೊಬ್ಗೆ ಶ್ಲಾಘಿಸಿದರು ಮತ್ತು ಅವರ ಯಶಸ್ವಿ ಮೂರನೇ ಅವಧಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು.
ಆತ್ಮೀಯ ಅಭಿನಂದನೆಗಳಿಗಾಗಿ ಪ್ರಧಾನಮಂತ್ರಿ ಟೊಬ್ಗೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಭೂತಾನ್ ಜೊತೆಗಿನ ತನ್ನ ಅನುಕರಣೀಯ ಪಾಲುದಾರಿಕೆಗೆ ಭಾರತವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಭೂತಾನ್ ಮತ್ತು ಭಾರತ ನಡುವಿನ ಸ್ನೇಹ ಮತ್ತು ಸಹಕಾರದ ಅನನ್ಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತ ಸರ್ಕಾರ ದೃಢ ಬದ್ಧತೆಯನ್ನು ಹೊಂದಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.
ಭಾರತ-ಭೂತಾನ್ ಪಾಲುದಾರಿಕೆಯು ಎಲ್ಲಾ ಹಂತಗಳಲ್ಲಿ ಅತ್ಯಂತ ನಂಬಿಕೆ, ಸದಾಶಯ ಮತ್ತು ಪರಸ್ಪರ ತಿಳಿವಳಿಕೆಯಿಂದ ರೂಪಿಸಲ್ಪಟ್ಟಿದೆ ಮತ್ತು ದೃಢವಾದ ಜನರ ನಡುವಿನ ಸಂಪರ್ಕಗಳು ಮತ್ತು ನಿಕಟ ಆರ್ಥಿಕ ಮತ್ತು ಅಭಿವೃದ್ಧಿ ಪಾಲುದಾರಿಕೆಯಿಂದ ಬಲವರ್ಧನೆಗೊಂಡಿದೆ.
Glad to speak with my friend PM @tsheringtobgay. Bharat and Bhutan ties are exemplary, unique and an important pillar of our Neighbourhood First policy. I look forward to taking this special partnership to newer heights.
— Narendra Modi (@narendramodi) June 6, 2024