ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ನವ ದೆಹಲಿಯ ಎಲ್.ಕೆ.ಎಂ.ನಲ್ಲಿ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಲಿದ್ದಾರೆ.
ಪ್ರಧಾನಮಂತ್ರಿಯವರ ಟ್ವಿಟರ್ ಖಾತೆಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಸಾಧಕಿಯರು ನಾಳೆ ನಿರ್ವಹಿಸಲಿದ್ದಾರೆ. # SheInspiresUs.
ರಾಷ್ಟ್ರಪತಿಯವರು ನಾರಿ ಶಕ್ತಿ ಪುರಸ್ಕಾರಗಳನ್ನು ನಾಳೆ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರತಿವರ್ಷ ಮಹಿಳಾ ಉದ್ಯಮಶೀಲತೆ ಅದರಲ್ಲೂ ಅಂಚಿನಲ್ಲಿರುವ ಮತ್ತು ದುರ್ಬಲ ಮಹಿಳೆಯರ ಉದ್ಯಮಶೀಲತೆಯ ನಿಟ್ಟಿನಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ, ಗುಂಪುಗಳಿಗೆ, ಸಂಸ್ಥೆಗಳನ್ನು ಗುರುತಿಸಿ ನೀಡಲಾಗುತ್ತಿದೆ.