ನಮಸ್ಕಾರ, ಸ್ನೇಹಿತರೇ!

ಚಂದ್ರಯಾನ-3 ಯಶಸ್ಸು ನಮ್ಮ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದೆ. ಶಿವಶಕ್ತಿ ಪಾಯಿಂಟ್ ಹೊಸ ಸ್ಫೂರ್ತಿಯ ಕೇಂದ್ರವಾಗಿದೆ ಮತ್ತು ತಿರಂಗಾ ಪಾಯಿಂಟ್ ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತದೆ. ಈ ರೀತಿಯ ಸಾಧನೆಗಳು ಜಗತ್ತಿನಲ್ಲಿ ಸಂಭವಿಸಿದಾಗ, ಅವುಗಳನ್ನು ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಯಲ್ಲಿ ತಾಳೆ ಹಾಕಿ ನೋಡಲಾಗುತ್ತದೆ. ಮತ್ತು ಈ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಿದಾಗ, ಅದು ಭಾರತದ ಮನೆ ಬಾಗಿಲಿಗೆ ಹಲವಾರು ಸಾಧ್ಯತೆಗಳು ಮತ್ತು ಅವಕಾಶಗಳನ್ನು ತರುತ್ತದೆ. G20ನ ಅಭೂತಪೂರ್ವ ಯಶಸ್ಸು, 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರಪಂಚದಾದ್ಯಂತದ ನಾಯಕರನ್ನು ಸ್ವಾಗತಿಸುವುದು, ಬುದ್ದಿಮತ್ತೆ ಸೆಷನ್ ಗಳು, ನಿಜವಾದ ಉತ್ಸಾಹದಲ್ಲಿ ಒಕ್ಕೂಟ ರಚನೆಯ ಜೀವಂತ ಅನುಭವ, G20 ಸ್ವತಃ ನಮ್ಮ ವೈವಿಧ್ಯತೆ ಮತ್ತು ಅನನ್ಯತೆಯ ಆಚರಣೆಯಾಗಿದೆ. ಜಿ20 ರೊಳಗೆ ಜಾಗತಿಕ ದಕ್ಷಿಣದ ಧ್ವನಿಯಾಗಿ ಭಾರತವು ಸದಾ ಹೆಮ್ಮೆಪಡುತ್ತದೆ. ಆಫ್ರಿಕನ್ ಯೂನಿಯನ್ ಗೆ ಶಾಶ್ವತ ಸದಸ್ಯತ್ವ ಮತ್ತು ಸರ್ವಾನುಮತದ G20 ಘೋಷಣೆಯಂತಹ ಬೆಳವಣಿಗೆಗಳು ಭಾರತಕ್ಕೆ ಉಜ್ವಲ ಭವಿಷ್ಯದ ಅವಕಾಶ ಒದಗಿಸುತ್ತದೆ.

ನಿನ್ನೆ ಯಶೋಭೂಮಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಭಾರತದ ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕೌಶಲ್ಯಗಳನ್ನು ಆಚರಿಸುವ ವಿಶ್ವಕರ್ಮ ಜಯಂತಿಯೂ ಆಗಿತ್ತು. ತರಬೇತಿ, ಆಧುನಿಕ ಉಪಕರಣಗಳು ಮತ್ತು ಹೊಸ ವಿಧಾನದೊಂದಿಗೆ ಹಣಕಾಸು ನಿರ್ವಹಣೆಯು ಭಾರತದ ವಿಶ್ವಕರ್ಮ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ, ದೇಶದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡುತ್ತಿದೆ. ಈ ಘಟನೆಗಳು ಆಚರಣೆ, ಉತ್ಸಾಹ ಮತ್ತು ಆತ್ಮವಿಶ್ವಾಸದ ವಾತಾವರಣವನ್ನು ಸೃಷ್ಟಿಸಿವೆ, ರಾಷ್ಟ್ರದಾದ್ಯಂತ ನಮ್ಮೆಲ್ಲರಲ್ಲಿ ಹೊಸ ಆತ್ಮವಿಶ್ವಾಸವನ್ನು ಹುಟ್ಟುಹಾಕಿದೆ. ಅದೇ ಸಮಯದಲ್ಲಿ, ಈ ಹೊಸ ವ್ಯವಸ್ಥೆಯಲ್ಲಿ ಸಂಸತ್ತಿನ ಈ ಅಧಿವೇಶನವು ಮಹತ್ವದ್ದಾಗಿದೆ. ಇದು ಒಂದು ಸಣ್ಣ ಅಧಿವೇಶನವಾಗಿರಬಹುದು, ಆದರೆ ಐತಿಹಾಸಿಕ ನಿರ್ಧಾರಗಳ ವಿಷಯದಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತದ 75 ವರ್ಷಗಳ ಪ್ರಯಾಣದಲ್ಲಿ ಹೊಸ ಹಂತದ ಆರಂಭಕ್ಕೆ ನಾಂದಿ ಹಾಡುತ್ತದೆ. ಈ ಪ್ರಯಾಣವು ಬಹಳ ಸ್ಪೂರ್ತಿದಾಯಕವಾಗಿದೆ. ಮತ್ತು ಈಗ ಆ ಪ್ರಯಾಣವನ್ನು ಮುಂದುವರಿಸುತ್ತಿರುವಾಗ, ನಾವು ಈ ದೇಶವನ್ನು 2047ರಲ್ಲಿ ಹೊಸ ಸಂಕಲ್ಪ, ಹೊಸ ಶಕ್ತಿ, ಹೊಸ ನಂಬಿಕೆ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಿರ್ಧಾರಗಳನ್ನು ಈ ಹೊಸ ಸಂಸತ್ತಿನ ಭವನದಲ್ಲಿ ಮಾಡಲಾಗುವುದು. ಆದ್ದರಿಂದ, ಈ ಅಧಿವೇಶನವು ಹಲವು ವಿಧಗಳಲ್ಲಿ ನಿರ್ಣಾಯಕವಾಗಿದೆ.

ಎಲ್ಲಾ ಗೌರವಾನ್ವಿತ ಸದಸ್ಯರು ಉತ್ಸಾಹ ಮತ್ತು ಸಕಾರಾತ್ಮಕತೆಯಿಂದ ತುಂಬಿರುವ ಈ ಕಿರು ಅಧಿವೇಶನವನ್ನು ಫಲಪ್ರದವಾಗಿ ಮಾಡಬೇಕೆಂದು ನಾನು ಕೋರುತ್ತೇನೆ. ಆರೋಪ ಮತ್ತು ಪ್ರತ್ಯಾರೋಪ ಮಾಡಲು ಸಾಕಷ್ಟು ಸಮಯವಿದೆ. ಜೀವನದ ಕೆಲವು ಕ್ಷಣಗಳು ನಮ್ಮಲ್ಲಿ ಉತ್ಸಾಹ ಮತ್ತು ಭರವಸೆಯನ್ನು ತುಂಬುತ್ತವೆ. ನಾನು ಈ ಕಿರು ಅಧಿವೇಶನವನ್ನು ಆ ದಿಕ್ಕಿನಲ್ಲಿ ನೋಡುತ್ತೇನೆ. ನಾವೆಲ್ಲರೂ ಹಳೆಯ ನಿರಾಕರಣೆಗಳನ್ನು ಬಿಟ್ಟು ಉತ್ತಮ ಉದ್ದೇಶಗಳೊಂದಿಗೆ ಹೊಸ ಸಂಸತ್ತಿಗೆ ಪ್ರವೇಶಿಸುತ್ತೇವೆ ಮತ್ತು ಹೊಸ ಸಂಸತ್ತಿನಲ್ಲಿ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ನಾವು ಯಾವುದೇ ಪ್ರಯತ್ನವನ್ನೂ ಬಿಡುವುದಿಲ್ಲ ಎಂದು ಭಾವಿಸುತ್ತೇನೆ. ಎಲ್ಲಾ ಗೌರವಾನ್ವಿತ ಸದಸ್ಯರು ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ಇದು ನಿರ್ಣಾಯಕ ಕ್ಷಣವಾಗಿದೆ.

ಗಣೇಶ ಚತುರ್ಥಿಯು ಪವಿತ್ರ ಹಬ್ಬ. ಭಗವಾನ್ ಗಣೇಶನನ್ನು ಅಡೆತಡೆಗಳನ್ನು ನಿವಾರಿಸುವವನು ಎಂದು ಪರಿಗಣಿಸಲಾಗಿದೆ ಮತ್ತು ಈಗ ಭಾರತದ ಅಭಿವೃದ್ಧಿ ಪಯಣದಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ. ಭಾರತವು ಎಲ್ಲಾ ಕನಸುಗಳು ಮತ್ತು ನಿರ್ಣಯಗಳನ್ನು ಅಡೆತಡೆಗಳಿಲ್ಲದ ರೀತಿಯಲ್ಲಿ ಪೂರೈಸುತ್ತದೆ. ಆದ್ದರಿಂದ, ಗಣೇಶ ಚತುರ್ಥಿಯ ದಿನದಂದು, ಈ ಹೊಸ ಆರಂಭವು ಭಾರತದ ಎಲ್ಲಾ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಈ ಅಧಿವೇಶನವು ಚಿಕ್ಕದಾಗಿರಬಹುದು, ಆದರೆ ಇದು ಹೆಚ್ಚಿನ ಮೌಲ್ಯ ನೀಡುವ ಸಾಧ್ಯತೆ ಹೊಂದಿದೆ.

ಎಲ್ಲರಿಗೂ ತುಂಬ ಧನ್ಯವಾದಗಳು…

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSME exports touch Rs 9.52 lakh crore in April–September FY26: Govt tells Parliament

Media Coverage

MSME exports touch Rs 9.52 lakh crore in April–September FY26: Govt tells Parliament
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2025
December 21, 2025

Assam Rising, Bharat Shining: PM Modi’s Vision Unlocks North East’s Golden Era