“ವಿಕಸಿತ ಭಾರತದ ಬಜೆಟ್‌ ನ ಖಾತರಿಗಳು ಅಭಿವೃದ್ಧಿ ಹೊಂದಿದ ಭಾರತದ ಆಧಾರ ಸ್ತಂಭವನ್ನು ಬಲಗೊಳಿಸಲಿದೆ”
“ಬಜೆಟ್‌ ವಿಶ್ವಾಸವನ್ನು ನಿರಂತರವಾಗಿ ಮುಂದುವರೆಸಲಿದೆ”
“ಬಜೆಟ್‌ ಯುವ ಭಾರತದ ಆಕಾಂಕ್ಷೆಗಳ ಪ್ರತಿಫಲನ”
“ನಾವು ದೊಡ್ಡ ಗುರಿ ನಿಗದಿ ಮಾಡಿದೆವು, ಸಾಧಿಸಿದೆವು ಮತ್ತು ನಂತರ ನಮಗಾಗಿ ಮತ್ತಷ್ಟು ದೊಡ್ಡ ಗುರಿ ನಿಗದಿ ಮಾಡಿದ್ದೇವೆ”
“ಬಜೆಟ್‌ ಬಡವರು ಮತ್ತು ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸುವುದರತ್ತ ಕೇಂದ್ರೀಕರಿಸುತ್ತದೆ”

ಈ ಬಜೆಟ್‌ ಕೇವಲ ಮಧ್ಯಂತರ ಬಜೆಟ್‌ ಅಲ್ಲ, ಇದು ಎಲ್ಲರನ್ನೊಳಗೊಂಡ ಮತ್ತು ನಾವೀನ್ಯತೆಯ ಬಜೆಟ್‌ ಆಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. “ಬಜೆಟ್‌ ವಿಶ್ವಾಸವನ್ನು ನಿರಂತರವಾಗಿ ಮುಂದುವರೆಸಲಿದೆ”. “ಈ ಬಜೆಟ್‌ ಅಭಿವೃದ್ಧಿ ಹೊಂದಿದ ಭಾರತದ ಎಲ್ಲಾ ಆಧಾರ ಸ್ತಂಭಗಳನ್ನು ಸಬಲೀಕರಣಗೊಳಿಸಲಿದೆ – ಯುವ ಜನಾಂಗ, ಬಡವರು, ಮಹಿಳೆಯರು ಮತ್ತು ರೈತರನ್ನು ಸಬಲೀಕರಣಗೊಳಿಸಲಿದೆ ಎಂದು ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ತಮ್ಮದೇ ದೃಷ್ಟಿಕೋನದಲ್ಲಿ ಪ್ರಧಾನಮಂತ್ರಿಯವರು ಅಭಿನಂದಿಸಿದರು. “ನಿರ್ಮಲಾ ಜೀ ಅವರ ಬಜೆಟ್‌ ಭವಿಷ್ಯದ ದೇಶವನ್ನು ನಿರ್ಮಿಸಲಿದೆ” “ಬರುವ 2047 ರ ವೇಳೆಗೆ ವಿಕಸಿತ ಭಾರತ ನಿರ್ಮಿಸಲು ಬಜೆಟ್‌ ನ ಖಾತರಿಗಳು ಭಾರತದ ಆಧಾರ ಸ್ತಂಭವನ್ನು ಬಲಗೊಳಿಸಲಿದೆ” ಎಂದರು.  

 

“ಬಜೆಟ್‌ ಯುವ ಭಾರತದ ಆಕಾಂಕ್ಷೆಗಳ ಪ್ರತಿಫಲನವಾಗಿದೆ”. ಬಜೆಟ್‌ ನಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಪ್ರಕಟಿಸಿದ್ದು, “ಸಂಶೋಧನೆ ಮತ್ತು ನಾವೀನ್ಯತೆಗಾಗಿ ಒಂದು ಲಕ್ಷ ಕೋಟಿ ರೂಪಾಯಿ ನಿಧಿಯನ್ನು ಘೋಷಿಸಲಾಗಿದೆ” ನವೋದ್ಯಮಗಳಿಗೆ ತೆರಿಗೆ ವಿನಾಯಿತಿಯನ್ನು ಮುಂದುವರೆಸಲಾಗಿದೆ ಎಂದು ಹೇಳಿದರು.  
ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿರುವುದನ್ನು ಗಮನದಲ್ಲಿರಿಸಿಕೊಂಡು ಅರ್ಥಶಾಸ್ತ್ರಜ್ಞರ ಭಾಷೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಒಟ್ಟಾರೆ ವೆಚ್ಚವನ್ನು ಐತಿಹಾಸಿಕವಾಗಿ 11,11,111 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದರು. ʼಇದು ಒಂದು ರೀತಿಯಲ್ಲಿ ಸಿಹಿ ತಾಣವಾಗಿದೆʼ. 21 ನೇ ಶತಮಾನದ ಆಧುನಿಕ ಮೂಲ ಸೌಕರ್ಯ ನಿರ್ಮಾಣದಿಂದ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. 40,000 ಅತ್ಯಾಧುನಿಕ ಬೋಗಿಯನ್ನು ಉತ್ಪಾದಿಸಿ ವಂದೇ ಭಾರತ್‌ ರೈಲುಗಳಿಗೆ ಇವುಗಳನ್ನು ಅಳವಡಿಸಲಾಗುವುದು ಮತ್ತು ಇವು ಸಾಮಾನ್ಯ ದರ್ಜೆಯ ಪ್ರಯಾಣಿಕರ ರೈಲುಗಳಲ್ಲಿ ಅಳವಡಿಕೆಯಾಗಲಿದೆ. ಇದರಿಂದ ದೇಶದ ವಿವಿಧ ರೈಲ್ವೆ ಮಾರ್ಗಗಳಲ್ಲಿ ಪ್ರಯಾಣಿಕರ ಪ್ರಯಾಣ ಸುಲಭ ದರದಲ್ಲಿ ಸಾಧ್ಯವಾಗಲಿದೆ ಮತ್ತು ಆರಾಮದಾಯವಾಗಲಿದೆ ಎಂದರು. 

ಹೊಸ ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿ ಮಾಡಿರುವ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, “ನಾವು ದೊಡ್ಡ ಗುರಿ ನಿಗದಿ ಮಾಡಿದೆವು, ಸಾಧಿಸಿದೆವು ಮತ್ತು ನಂತರ ನಮಗಾಗಿ ಮತ್ತಷ್ಟು ದೊಡ್ಡ ಗುರಿ ನಿಗದಿ ಮಾಡಿದ್ದೇವೆ”. ಮಧ್ಯಮ ವರ್ಗ ಮತ್ತು ಬಡವರ ಕಲ್ಯಾಣ ಕುರಿತು ಸರ್ಕಾರದ ಪ್ರಯತ್ನಗಳನ್ನು ಎತ್ತಿ ಹೇಳಿದ ಪ್ರಧಾನಮಂತ್ರಿಯವರು, ಗ್ರಾಮಗಳು ಮತ್ತು ನಗರಗಳಲ್ಲಿ 4 ಕೋಟಿ ಮನೆಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಇನ್ನೂ ಎರಡು ಕೋಟಿ ಹೆಚ್ಚಿನ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದರು. ಮಹಿಳೆಯರ ಸಬಲೀರಣ ಕುರಿತು ಒತ್ತು ನೀಡಿ ಮಾತನಾಡಿದ ಅವರು, “ಎರಡು ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವುದು ನಮ್ಮ ಗುರಿ. ಇದನ್ನು 3 ಕೋಟಿ ಲಕ್ಷಾಧಿಪತಿಗಳನ್ನಾಗಿ ಮಾಡುವ ಗುರಿಗೆ ವಿಸ್ತರಣೆ ಮಾಡಿದ್ದೇವೆ” ಎಂದರು. 

 

ಆಯುಷ್ಮಾನ್‌ ಭಾರತ್‌ ಯೋಜನೆಯ ಮಹತ್ವವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು ಇದು ಬಡವರಿಗೆ ನೆರವಾಗಲಿದ್ದು, ಇದರ ಲಾಭವನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೂ ವಿಸ್ತರಣೆ ಮಾಡಲಾಗುವುದು” ಎಂದು ಹೇಳಿದರು.

ಬಜೆಟ್‌ ನಲ್ಲಿ ಬಡವರು ಮತ್ತು ಮಧ್ಯಮವರ್ಗದವರನ್ನು ಸಬಲೀಕರಣಗೊಳಿಸಲು ಹೊಸ ಅವಕಾಶಗಳನ್ನು ಕಲ್ಪಿಸಿರುವ ಕುರಿತು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಒಂದು ಕೋಟಿ ಜನರಿಗೆ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್‌ ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಇದರಿಂದ ಪ್ರತಿವರ್ಷ 15,000 ರಿಂದ 18,000 ಕೋಟಿ ರೂಪಾಯಿ ಮೊತ್ತದ ಹೆಚ್ಚುವರಿ ವಿದ್ಯುತ್‌ ಅನ್ನು ಮಾರಾಟ ಮಾಡಲು ನೆರವಾಗಲಿದೆ ಎಂದರು.   

ಮಧ್ಯಮ ವರ್ಗಕ್ಕೆ ಸೇರಿದ ಒಂದು ಕೋಟಿ ನಾಗರಿಕರಿಗೆ ಪರಿಹಾರ ಒದಗಿಸುವ ಆದಾಯ ತೆರಿಗೆ ವಿನಾಯಿತಿ ಯೋಜನೆಯನ್ನು ಘೋಷಿಸಿರುವುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಬಜೆಟ್‌ ನಲ್ಲಿ ರೈತರ ಕಲ್ಯಾಣ ಕುರಿತು ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಮಾತನಾಡಿದ ಅವರು, ನ್ಯಾನೋ ಡಿಎಪಿ, ಪ್ರಾಣಿಗಳಿಗಾಗಿ ಹೊಸ ಯೋಜನೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ವಿಸ್ತರಣೆ ಮತ್ತು ಸ್ವಾವಲಂಬಿ ತೈಲ ಬೀಜ ಅಭಿಯಾನದಿಂದ ರೈತರ ವೆಚ್ಚ ತಗ್ಗಲಿದೆ ಮತ್ತು ಆದಾಯ ಹೆಚ್ಚಲಿದೆ ಎಂದರು. ಐತಿಹಾಸಿಕ ಬೆಜಟ್‌ ನಲ್ಲಿ ಎಲ್ಲಾ ನಾಗರಿಕರಿಗೆ ಶುಭ ಹಾರೈಕೆಗಳನ್ನು ತಿಳಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.  

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India Delivers': UN Climate Chief Simon Stiell Hails India As A 'Solar Superpower'

Media Coverage

'India Delivers': UN Climate Chief Simon Stiell Hails India As A 'Solar Superpower'
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”