ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2024-25 ಅನ್ನು ಶ್ಲಾಘಿಸಿದರು.
2024-25ರ ಕೇಂದ್ರ ಬಜೆಟ್ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಈ ವರ್ಷದ ಬಜೆಟ್‌ಗಾಗಿ ದೇಶದ ಎಲ್ಲಾ ನಾಗರಿಕರನ್ನು ಅಭಿನಂದಿಸಿದರು, ಇದು ರಾಷ್ಟ್ರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಅವರ ಇಡೀ ತಂಡ ಅಭಿನಂದನೆಗೆ ಅರ್ಹರು ಎಂದರು.
"2024-25ರ ಕೇಂದ್ರ ಬಜೆಟ್ ಸಮಾಜದ ಪ್ರತಿಯೊಂದು ವರ್ಗವನ್ನು ಸಬಲೀಕರಿಸುತ್ತದೆ". "ಇದು ಗ್ರಾಮೀಣ ಬಡ ರೈತರನ್ನು ಸಮೃದ್ಧಿಯ ಹಾದಿಗೆ ಕೊಂಡೊಯ್ಯುತ್ತದೆ". 25 ಕೋಟಿ ಜನರು ಬಡತನದಿಂದ ಹೊರಬಂದ ನಂತರ ನವ-ಮಧ್ಯಮ ವರ್ಗ ಉದಯವಾಗಿದೆ. ಈ ಬಜೆಟ್ ಅವರ ಸಬಲೀಕರಣಕ್ಕೆ ನಿರಂತರತೆ ತರುತ್ತದೆ, ಅಸಂಖ್ಯಾತ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. "ಈ ಬಜೆಟ್ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೊಸ ಅಳತೆಗೋಲು ಅಥವಾ ಮಾನದಂಡ ತರುತ್ತದೆ". ಬಜೆಟ್ ತನ್ನ ಹೊಸ ಯೋಜನೆಗಳೊಂದಿಗೆ ಮಧ್ಯಮ ವರ್ಗ, ಬುಡಕಟ್ಟು ವಿಭಾಗ, ದಲಿತರು ಮತ್ತು ಹಿಂದುಳಿದ ವರ್ಗಗಳ ಜೀವನ ಬಲಪಡಿಸುವ ಗುರಿ ಹೊಂದಿದೆ. ಈ ವರ್ಷದ ಬಜೆಟ್ ಮಹಿಳೆಯರ ಆರ್ಥಿಕ ಸಹಭಾಗಿತ್ವ ಖಾತ್ರಿಪಡಿಸುತ್ತದೆ, ಸಣ್ಣ ಉದ್ಯಮಗಳು ಮತ್ತು ಎಂಎಸ್ಎಂಇಗಳಿಗೆ ಹೊಸ ಮಾರ್ಗ ತೋರುತ್ತದೆ. "ಕೇಂದ್ರ ಬಜೆಟ್ ಉತ್ಪಾದನೆ ಮತ್ತು ಮೂಲಸೌಕರ್ಯಕ್ಕೆ ಪೂರಕವಾಗಿದೆ", ನಿರಂತರತೆ ಕಾಪಾಡಿಕೊಳ್ಳುವ ಮೂಲಕ ಆರ್ಥಿಕ ಬೆಳವಣಿಗೆಗೆ ಹೊಸ ಶಕ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಉದ್ಯೋಗ ಮತ್ತು ಸ್ವಯಂ-ಉದ್ಯೋಗ ಸೃಷ್ಟಿಸಲು ಸರ್ಕಾರ ಹೊಂದಿರುವ ಬದ್ಧತೆ ಪುನರುಚ್ಚರಿಸಿದ ಪ್ರಧಾನ ಮಂತ್ರಿ, ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ ದೇಶದಲ್ಲಿ ಯಶಸ್ಸು ಕಂಡಿದೆ. ಈ ನಿಟ್ಟಿನಲ್ಲಿ ಕೋಟಿಗಟ್ಟಲೆ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯೋಗ ಸಂಪರ್ಕಿತ ಉತ್ತೇಜನಾ ಯೋಜನೆ ಅಡಿ, ಯುವಕರ ಮೊದಲ ಉದ್ಯೋಗದ ಮೊದಲ ಸಂಬಳವನ್ನು ಸರ್ಕಾರವೇ ಭರಿಸಲಿದೆ. ಅವರು ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ, 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಯೋಜನೆ ಜಾರಿಗೆ ತರಲಾಗಿದೆ. "ಯೋಜನೆಯ ಅಡಿ, ಉನ್ನತ ಕಂಪನಿಗಳಲ್ಲಿ ಕೆಲಸ ಮಾಡುವುದರಿಂದ, ಯುವ ಇಂಟರ್ನಿಗಳು ಹೊಸ ಉದ್ಯೋಗಾವಕಾಶ ಸಾಧ್ಯತೆಗಳ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ" ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರತಿ ನಗರ, ಪ್ರತಿ ಹಳ್ಳಿ ಮತ್ತು ಪ್ರತಿ ಮನೆಯಲ್ಲೂ ಉದ್ಯಮಿಗಳನ್ನು ಸೃಷ್ಟಿಸುವ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಿ, ಮುದ್ರಾ ಸಾಲ ಯೋಜನೆಯಡಿ, ಮೇಲಾಧಾರ ರಹಿತ ಸಾಲದ ಮಿತಿಯನ್ನು 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದು ಸಣ್ಣ ಉದ್ಯಮಿಗಳು, ಮಹಿಳೆಯರು, ದಲಿತರಿಗೆ, ಹಿಂದುಳಿದವರಿಗೆ ಮತ್ತು ಸೌಲಭ್ಯವಂಚಿತರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದರು.
ಭಾರತವನ್ನು ವಿಶ್ವದ ಉತ್ಪಾದನೆ ಅಥವಾ ತಯಾರಿಕಾ ತಾಣವನ್ನಾಗಿ ಮಾಡುವ ಬದ್ಧತೆಯನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ, ದೇಶದ ಮಧ್ಯಮ ವರ್ಗಗಳಿಗೆ ಎಂಎಸ್‌ಎಂಇ ಸಂಪರ್ಕ ಒದಗಿಸಲಾಗಿದೆ, ಬಡ ವರ್ಗಕ್ಕೆ ಎಂಎಸ್ಎಂಇಯಲ್ಲಿ ಅಪಾರ ಉದ್ಯೋಗ ಸಾಮರ್ಥ್ಯಗಳಿವೆ. ಸಣ್ಣ ಕೈಗಾರಿಕೆಗಳಿಗೆ ಬಹುದೊಡ್ಡ ಬಲ ಸೃಷ್ಟಿಸಲು, ಎಂಎಸ್ಎಂಇಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಬಜೆಟ್‌ನಲ್ಲಿ ಹೊಸ ಯೋಜನೆ ಘೋಷಿಸಲಾಗಿದೆ. "ಬಜೆಟ್ ಘೋಷಣೆಗಳು ಪ್ರತಿ ಜಿಲ್ಲೆಯಲ್ಲಿ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸಲಿದೆ". "ಇ-ಕಾಮರ್ಸ್, ರಫ್ತು ಕೇಂದ್ರಗಳು ಮತ್ತು ಆಹಾರ ಗುಣಮಟ್ಟ ಪರೀಕ್ಷೆಯು ಒಂದು ಜಿಲ್ಲೆ-ಒಂದು ಉತ್ಪನ್ನ ಕಾರ್ಯಕ್ರಮಕ್ಕೆ ಹೊಸ ವೇಗ ನೀಡುತ್ತದೆ."
2024-25ರ ಕೇಂದ್ರ ಬಜೆಟ್ ಭಾರತದ ಆರಂಭಿಕ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಹಲವಾರು ಅವಕಾಶಗಳನ್ನು ತರಲಿದೆ. ಬಾಹ್ಯಾಕಾಶ ಆರ್ಥಿಕತೆ ಜೀವಂತಗೊಳಿಸಲು 1 ಸಾವಿರ ಕೋಟಿ ರೂಪಾಯಿ ಬಂಡವಾಳ ನಿಧಿ ಅಥವಾ ದುಡಿಮೆ ಬಂಡವಾಳ(ಕಾರ್ಪಸ್ ಫಂಡ್) ಮತ್ತು ಪ್ರೋತ್ಸಾಹಕ ಹೂಡಿಕೆ ಮೇಲಿನ ತೆರಿಗೆ(ಏಂಜೆಲ್ ಟ್ಯಾಕ್ಸ್) ರದ್ದು ಮಾಡಲಾಗಿದೆ ಎಂದರು.
"ದಾಖಲೆಯ ಮಟ್ಟದಲ್ಲಿ ಬಂಡವಾಳ ವೆಚ್ಚ(ಕ್ಯಾಪೆಕ್ಸ್) ಏರಿಕೆ ಮಾಡಿರುವುದು ಆರ್ಥಿಕತೆಯ ಪ್ರೇರಕ ಶಕ್ತಿಯಾಗಲಿದೆ". 12 ಹೊಸ ಕೈಗಾರಿಕಾ ಪ್ರದೇಶಗಳ ಜಾಲ ಅಭಿವೃದ್ಧಿ ಯೋಜನೆಗಳು, ಹೊಸ ಉಪನಗರಗಳು ಮತ್ತು 14 ಬೃಹತ್ ನಗರಗಳಿಗೆ ಸಾರಿಗೆ ಯೋಜನೆಗಳು ಜಾರಿಗೆ ಬರಲಿವೆ, ಇದು ದೇಶದಲ್ಲಿ ಹೊಸ ಆರ್ಥಿಕ ಕೇಂದ್ರಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ, ಹಲವಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.
ದಾಖಲೆಯ ಮಟ್ಟದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ಮಾಡಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ 'ಆತ್ಮನಿರ್ಭರ್' ರಕ್ಷಣಾ ವಲಯ ನಿರ್ಮಿಸಲು ಹಲವಾರು ಅವಕಾಶಗಳನ್ನು ಒದಗಿಸಲಾಗಿದೆ. ಈ ಮೂಲಕ ಭಾರತದೆಡೆಗೆ ಇಡೀ ವಿಶ್ವದ ಆಕರ್ಷಣೆ ನಿರಂತರವಾಗಿ ಹೆಚ್ಚುತ್ತಿದ್ದು, ಪ್ರವಾಸೋದ್ಯಮಕ್ಕೆ ಹೊಸ ಮಾರ್ಗಗಳನ್ನು ತೆರೆಯಲಿದೆ. ಈ ವರ್ಷದ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ, ಪ್ರವಾಸೋದ್ಯಮವು ಬಡವರು ಮತ್ತು ಮಧ್ಯಮ ವರ್ಗದವರಿಗೆ ಹಲವಾರು ಅವಕಾಶಗಳನ್ನು ತರುತ್ತದೆ ಎಂದರು.
ಕಳೆದ 10 ವರ್ಷಗಳಲ್ಲಿ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಖಾತ್ರಿಪಡಿಸಿದೆ. ಆದರೆ ಈ ವರ್ಷದ ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿಮೆ ಮಾಡಲು, ಪ್ರಮಾಣಿತ ಕಡಿತ ಹೆಚ್ಚಿಸಲು ಮತ್ತು ಟಿಡಿಎಸ್ ನಿಯಮಗಳನ್ನು ಸರಳೀಕರಿಸುವ ನಿರ್ಧಾರ ಮಾಡಲಾಗಿದೆ. ಈ ಸುಧಾರಣೆಗಳು ತೆರಿಗೆದಾರರಿಗೆ ಹೆಚ್ಚಿನ ಹಣ ಉಳಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
‘ಪೂರ್ವೋದಯ’ ದೃಷ್ಟಿ ಅಥವಾ ಮುನ್ನೋಟದ ಮೂಲಕ ಭಾರತದ ಪೂರ್ವ ಪ್ರದೇಶದ ಸಮಗ್ರ ಅಭಿವೃದ್ಧಿಯು ಹೊಸ ವೇಗ ಮತ್ತು ಶಕ್ತಿ ಪಡೆಯುತ್ತದೆ. "ಪೂರ್ವ ಭಾರತದಲ್ಲಿ ಹೆದ್ದಾರಿಗಳು, ನೀರಿನ ಯೋಜನೆಗಳು ಮತ್ತು ವಿದ್ಯುತ್ ಯೋಜನೆಗಳಂತಹ ಪ್ರಮುಖ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡಲಾಗುವುದು" ಎಂದು ಅವರು ಹೇಳಿದರು.
“ಈ ಬಜೆಟ್‌ನ ವಿಶೇಷ ಗಮನ ದೇಶದ ರೈತರ ಮೇಲಿದೆ” ಎಂದ ಪ್ರಧಾನಿ, ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆಯ ನಂತರ ಈಗ ತರಕಾರಿ ಉತ್ಪಾದನಾ ಕ್ಲಸ್ಟರ್‌ಗಳನ್ನು ಪರಿಚಯಿಸಲಾಗುತ್ತಿದೆ. ಅದು ರೈತರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಹಾಯ ಮಾಡುತ್ತದೆ. “ಭಾರತವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದು ಈ ಸಮಯದ ಅಗತ್ಯವಾಗಿದೆ. ಆದ್ದರಿಂದ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಿಸಲು ರೈತರಿಗೆ ಸಹಾಯ ಮಾಡುವ ಹಲವು ಕ್ರಮಗಳನ್ನು ಘೋಷಿಸಲಾಗಿದೆ ಎಂದರು.
ಬಡತನ ನಿರ್ಮೂಲನೆ ಮತ್ತು ಬಡವರ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಬಡವರಿಗೆ 3 ಕೋಟಿ ಮನೆಗಳು ಮತ್ತು 5 ಕೋಟಿ ಬುಡಕಟ್ಟು ಕುಟುಂಬಗಳಿಗೆ ಪರಿಪೂರ್ಣತೆ ಒದಗಿಸುವ ಕಾರ್ಯವಿಧಾನದೊಂದಿಗೆ ಮೂಲಸೌಕರ್ಯಗಳನ್ನು ಒದಗಿಸುವ ಜಂಜಾತಿಯ ಉನ್ನತ ಗ್ರಾಮ ಅಭಿಯಾನ ಪ್ರಕಟಿಸಲಾಗಿದೆ. ಇದಲ್ಲದೆ, ಗ್ರಾಮ ಸಡಕ್ ಯೋಜನೆಯು 25 ಸಾವಿರ ಹೊಸ ಗ್ರಾಮೀಣ ಪ್ರದೇಶಗಳಿಗೆ ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವ ರಸ್ತೆಗಳು ಸಂಪರ್ಕ ಕಲ್ಪಿಸುತ್ತದೆ, ಇದು ಎಲ್ಲಾ ರಾಜ್ಯಗಳಿಗೂ ಪ್ರಯೋಜನ ನೀಡುತ್ತದೆ.
ಇಂದಿನ ಬಜೆಟ್ ಹೊಸ ಅವಕಾಶಗಳು, ಹೊಸ ಶಕ್ತಿ, ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ತಂದಿದೆ. ಇದು ಉತ್ತಮ ಬೆಳವಣಿಗೆ ಮತ್ತು ಉಜ್ವಲ ಭವಿಷ್ಯ ರೂಪಿಸಲಿದೆ. ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡಲು ಮತ್ತು ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಲು ವೇಗವರ್ಧಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಬಜೆಟ್‌ನ ಸಾಮರ್ಥ್ಯವನ್ನು ಒತ್ತಿಹೇಳುವ ಮೂಲಕ ಪ್ರಧಾನ ಮಂತ್ರಿ ಅವರು ಭಾಷಣ ಮುಕ್ತಾಯಗೊಳಿಸಿದರು.
Click here to read full text speech
#BudgetForViksitBharat benefits every segment of society. pic.twitter.com/IlKhCb2HMq
— PMO India (@PMOIndia) July 23, 2024
इस बजट में सरकार ने Employment Linked Incentive scheme की घोषणा की है।
— PMO India (@PMOIndia) July 23, 2024
इससे देश में करोड़ों नए रोजगार बनेंगे। #BudgetForViksitBharat pic.twitter.com/cWAnnt3I5h
#BudgetForViksitBharat opens up new avenues for StartUps and innovation ecosystem. pic.twitter.com/N5aFatddxd
— PMO India (@PMOIndia) July 23, 2024
इस बजट में भी income tax में कटौती और standard deduction में वृद्धि का बहुत बड़ा फैसला लिया गया है। #BudgetForViksitBharat pic.twitter.com/ki6qSsqqPU
— PMO India (@PMOIndia) July 23, 2024
#BudgetForViksitBharat focuses on welfare of farmers. pic.twitter.com/jnwiY76vsV
— PMO India (@PMOIndia) July 23, 2024