ಸ್ನೇಹಿತರೇ
ಭಾರತ ವಿವಿಧತೆ, ಆಧ್ಯಾತ್ಮಿಕತೆ ಮತ್ತು ಸಾಂಪ್ರದಾಯಿಕ ತಾಣ. ಜಗತ್ತಿನ ಅನೇಕ ದರ್ಮಗಳು ಇಲ್ಲಿ ಜನ್ಮ ತಳೆದಿವೆ ಮತ್ತು ಜಗತ್ತಿನ ಪ್ರತಿಯೊಂದು ಧರ್ಮಗಳಿಗೂ ಇಲ್ಲಿ ಗೌರವವಿದೆ.
ಪ್ರಜಾತಂತ್ರದ ತಾಯಿಯಾಗಿರುವ ಇಲ್ಲಿ ಸಂವಾದ ಮತ್ತು ಪ್ರಜಾಪ್ರಭುತ್ವದ ತತ್ವಗಳ ಬಗ್ಗೆ ಅನಾದಿ ಕಾಲದಿಂದಲೂ ಅಚಲವಾದ ನಂಬಿಕೆಯನ್ನು ಹೊಂದಿದೆ. ನಮ್ಮ ಜಾಗತಿಕ ನಡವಳಿಕೆಯು ವಸುಧೈವ ʼಕುಟುಂಬಕಂʼ ಎಂಬ ಮೂಲಭೂತ ತತ್ವಗಳಲ್ಲಿ ಬೇರೂರಿದ್ದು, ʼಜಗತ್ತು ಒಂದೇ ಕುಟುಂಬʼವಾಗಿದೆ.
ಪ್ರತಿಯೊಂದು ದೇಶ ಜಗತ್ತು ಒಂದೇ ಕುಟುಂಬ ಎಂಬುದನ್ನು ಪರಿಗಣಿಸಿದ್ದು, ʼಒಂದು ಭೂಮಿʼ ಎಂಬ ಜವಾಬ್ದಾರಿಯುತ ಪ್ರಜ್ಞೆಯಿಂದ ಪ್ರತಿಯೊಬ್ಬ ಭಾರತೀಯರ ಜೊತೆ ಸಂಪರ್ಕ ಹೊಂದಿದೆ. ʼಒಂದು ಭೂಮಿʼ ಎಂಬ ಸ್ಪೂರ್ತಿದಾಯಕ ಮನೋಭಾವನೆಯಿಂದ ʼಜೀವನ ಶೈಲಿಗಾಗಿ ಪರಿಸರ ಅಭಿಯಾನʼ ಆರಂಭಿಸಿದೆ. ಭಾರತದ ಈ ಉಪಕ್ರಮ ಮತ್ತು ನಿಮ್ಮ ಬೆಂಬಲದಿಂದ ಇಡೀ ಜಗತ್ತು ಈ ವರ್ಷವನ್ನು ಹವಾಮಾನ ಭದ್ರತೆ ತತ್ವದಡಿ ʼಅಂತರರಾಷ್ಟ್ರೀಯ ಸಿರಿ ಧಾನ್ಯ ವರ್ಷʼ ವನ್ನಾಗಿ ಆಚರಿಸುತ್ತಿದೆ. ಈ ಸ್ಫೂರ್ತಿಯಿಂದ ಕಾಪ್ 26 ಅಡಿ “ಹಸಿರು ಗ್ರಿಡ್ ಉಪಕ್ರಮ – ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ʼ ಗೆ ಭಾರತ ಚಾಲನೆ ನೀಡಿದೆ.
ಇಂದು ಭಾರತ ವ್ಯಾಪಕ ಪ್ರಮಾಣದಲ್ಲಿ ವಿವಿಧ ದೇಶಗಳೊಂದಿಗೆ ಆರಂಭಿಸಿರುವ ಸೌರ ಕ್ರಾಂತಿ ಪ್ರಗತಿಯಲ್ಲಿದೆ. ಲಕ್ಷಾಂತರ ರೈತರು ನೈಸರ್ಗಿಕ ಕೃಷಿಯನ್ನು ಅಪ್ಪಿಕೊಂಡಿದ್ದಾರೆ. ಈ ದೊಡ್ಡ ಅಭಿಯಾನ ಮಾನವನ ಆರೋಗ್ಯವನ್ನಷ್ಟೇ ಅಲ್ಲದೇ ಮಣ್ಣು ಮತ್ತು ಭೂಮಿಯ ಆರೋಗ್ಯವನ್ನು ಸಹ ರಕ್ಷಿಸಲಿದೆ. ನಾವು ʼರಾಷ್ಟ್ರೀಯ ಹಸಿರು ಜಲಜನಕ ಅಭಿಯಾನʼವನ್ನು ಆರಂಭಿಸಿದ್ದು, ಹಸಿರು ಜಲಜನಕ ಉತ್ಪಾದನೆಗೆ ಭಾರತ ಪುಷ್ಟಿ ನೀಡಿದೆ. ಭಾರತದ ಜಿ20 ಅಧ್ಯಕ್ಷತೆಯಲ್ಲಿ ಜಾಗತಿಕ ಜಲಜನಕ ಪರಿಸರ ವ್ಯವಸ್ಥೆಯನ್ನು ಸೃಜಿಸಲು ನಿರ್ಣಾಯಕ ಹೆಜ್ಜೆ ಇಡಲಾಗಿದೆ.
ಸ್ನೇಹಿತರೇ
ಹವಾಮಾನ ಬದಲಾವಣೆಯ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಇಂಧನ ಪರಿವರ್ತನೆಯು 21 ನೇ ಶತಮಾನದಲ್ಲಿ ಪ್ರಪಂಚಕ್ಕೆ ಅತ್ಯಂತ ಅಗತ್ಯವಾಗಿದೆ. ಎಲ್ಲವನ್ನೊಳಗೊಂಡ ಇಂಧನ ಪರಿವರ್ತನೆಗೆ ಟ್ರಿಲಿಯನ್ ಡಾಲರ್ ಗಳು ಅಗತ್ಯವಾಗಿವೆ. ಸಹಜವಾಗಿ ಅಭಿವೃದ್ಧಿ ಹೊಂದಿದ ದೇಶಗಳು ಈ ವಲಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.
2023 ರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಸಕಾರಾತ್ಮಕ ಉಪಕ್ರಮದಿಂದಾಗಿ ಭಾರತದೊಂದಿಗೆ ಜಾಗತಿಕ ದಕ್ಷಿಣದ ಎಲ್ಲಾ ದೇಶಗಳು ಸಂತಸಗೊಂಡಿವೆ. ಇದೇ ಮೊದಲ ಬಾರಿಗೆ ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ವಲಯದಲ್ಲಿ 100 ಶತಕೋಟಿ ಡಾಲರ್ ಒದಗಿಸುವ ವಾಗ್ದಾನ ಈಡೇರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿವೆ.
ʼಹಸಿರು ಅಭಿವೃದ್ಧಿ ಒಪ್ಪಂದವನ್ನು ಅಳವಡಿಸಿಕೊಳ್ಳುವ ಮೂಲಕ ಜಿ-20 ಸುಸ್ಥಿರ ಮತ್ತು ಹಸಿರು ಬೆಳವಣಿಗೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.
ಸ್ನೇಹಿತರೇ
“ಈ ಸಾಮೂಹಿಕ ಪ್ರಯತ್ನದಿಂದ ಇಂದು ಭಾರತ ಜಿ-20 ವೇದಿಕೆಯಲ್ಲಿ ಕೆಲವು ಸಲಹೆಗಳನ್ನು ನೀಡುತ್ತದೆ. ಇಂದು ಎಲ್ಲಾ ದೇಶಗಳು ಇಂಧನ ಮಿಶ್ರಣದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಬೇಕು. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್ ನಲ್ಲಿ 20% ರಷ್ಟು ಎಥೆನಾಲ್ ಮಿಶ್ರಣಕ್ಕೆ ಪ್ರಯತ್ನ ಆರಂಭವಾಗಬೇಕು ಎನ್ನುವುದು ನಮ್ಮ ಪ್ರಸ್ತಾವನೆಯಾಗಿದೆ”
ಅಥವಾ ಪರ್ಯಾಯವಾಗಿ ಹೆಚ್ಚಿನ ಜಾಗತಿಕ ಒಳಿತಿಗಾಗಿ ಮತ್ತೊಂದು ಮಿಶ್ರಣವನ್ನು ಅಭಿವೃದ್ಧಿಪಡಿಸಲು ನಾವು ಕೆಲಸ ಮಾಡಬಹುದು. ಇದು ಹವಾಮಾನ ಭದ್ರತೆಗೆ ಕೊಡುಗೆ ನೀಡುವಾಗ ಸ್ಥಿರವಾದ ಶಕ್ತಿಯ ಪೂರೈಕೆಯನ್ನು ಖಾತ್ರಿಪಡಿಸುತ್ತದೆ.
ಈ ನಿಟ್ಟಿನಲ್ಲಿ ಇಂದು ನಾವು ಜಾಗತಿಕ ಜೈವಿಕ ಇಂಧನ ಒಕ್ಕೂಟ ಆರಂಭಿಸುತ್ತಿದ್ದೇವೆ. ಈ ಉಪಕ್ರಮದಲ್ಲಿ ಭಾಗಿಯಾಗುವಂತೆ ಎಲ್ಲಾ ದೇಶಗಳಿಗೂ ಭಾರತ ಆಹ್ವಾನ ನೀಡುತ್ತದೆ.
ಸ್ನೇಹಿತರೇ
ಪರಿಸರವನ್ನು ಮನಸ್ಸಿನಲ್ಲಿಟ್ಟುಕೊಂಡು ದಶಕಗಳಿಂದ ಕಾರ್ಬನ್ ಕ್ರೆಡಿಟ್ ಕುರಿತು ಚರ್ಚೆಗಳು ನಡೆಯುತ್ತಿವೆ. ಕಾರ್ಬನ್ ಕ್ರೆಡಿಟ್ ಏನನ್ನು ಮಾಡಬಾರದು ಎಂಬುದನ್ನು ಒತ್ತಿ ಹೇಳುತ್ತದೆ. ಇದು ನಕಾರಾತ್ಮಕ ದೃಷ್ಟಿಕೋನ ಹೊಂದಿದೆ.
ಇದರ ಫಲಿತಾಂಶದಿಂದ ಯಾವ ರೀತಿಯ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಎಂಬುದನ್ನು ನಾವು ಪರಿಶೀಲಿಸಬೇಕು. ಆದರೆ ಆಗಿಂದಾಗ್ಗೆ ಈ ಬಗ್ಗೆ ಸಾಕಷ್ಟು ಗಮನ ಹರಿಯುವುದಿಲ್ಲ. ಸಕಾರಾತ್ಮಕ ಕ್ರಮಗಳಿಗೆ ಉತ್ತೇಜನದ ಕೊರತೆ ಇದೆ.
ಹಸಿರು ಕ್ರೆಡಿಟ್ ನಮಗೆ ದಾರಿ ತೋರಿಸುತ್ತದೆ. ಇಂತಹ ಸಕಾರಾತ್ಮಕ ಚಿಂತನೆಗಳನ್ನು ಉತ್ತೇಜಿಸಬೇಕು. ಆದ್ದರಿಂದ ಜಿ-20 ರಾಷ್ಟ್ರಗಳು ಹಸಿರು ಕ್ರೆಡಿಟ್ ಉಪಕ್ರಮಗಳ ಕೆಲಸವನ್ನು ಆರಂಭಿಸಬೇಕೆಂದು ನಾನು ಪ್ರಸ್ತಾಪ ಮಾಡುತ್ತಿದ್ದೇನೆ.
ಸ್ನೇಹಿತರೇ
ಭಾರತದ ಚಂದ್ರಯಾನ ಯಶಸಿನ ಖ್ಯಾತಿ ಕುರಿತು ನಿಮಗೆಲ್ಲಾ ತಿಳಿದಿದೆ. ಇದರಿಂದ ಪಡೆದ ದತ್ತಾಂಶ ಎಲ್ಲಾ ಮಾನವೀಯತೆಗೆ ಪ್ರಯೋಜನಕಾರಿಯಾಗಿದೆ. ಇದೇ ಸ್ಫೂರ್ತಿಯಿಂದ ಭಾರತ ಪರಿಸರ ಮತ್ತು ಹವಾಮಾನ ವೀಕ್ಷಣೆಗಾಗಿ ಭಾರತ ಜಿ20 ಉಪಗ್ರಹವನ್ನು ನಭೋಮಂಡಲಕ್ಕೆ ಕಳುಹಿಸಲಿದೆ ಎಂದು ಪ್ರಸ್ತಾಪಿಸುತ್ತಿದ್ದೇವೆ.
ಹವಾಮಾನ ಮತ್ತು ಪರಿಸರ ದತ್ತಾಂಶವನ್ನು ಎಲ್ಲಾ ದೇಶಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣ ದೇಶಗಳೊಂದಿಗೆ ಹಂಚಿಕೊಳ್ಳಲಿದೆ. ಈ ಉಪಕ್ರಮದಲ್ಲಿ ಸೇರುವಂತೆ ಎಲ್ಲಾ ಜಿ-20 ದೇಶಗಳನ್ನು ಭಾರತ ಆಹ್ವಾನಿಸುತ್ತದೆ.
ಸ್ನೇಹಿತರೇ
ಮತ್ತೊಮ್ಮೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ ಮತ್ತು ಎಲ್ಲರಿಗೂ ಅಭಿನಂದನೆಗಳು. ಇದೀಗ ನಾನು ನಿಮ್ಮ ಚಿಂತನೆಗಳನ್ನು ಆಲಿಸಲು ಉತ್ಸುಕನಾಗಿದ್ದೇನೆ.
We have to move ahead with a human centric approach. pic.twitter.com/0GhhYD5j7o
— PMO India (@PMOIndia) September 9, 2023
Mitigating global trust deficit, furthering atmosphere of trust and confidence. pic.twitter.com/Yiyk5f7y9j
— PMO India (@PMOIndia) September 9, 2023
India has made it a 'People's G20' pic.twitter.com/PpPGBdXn8C
— PMO India (@PMOIndia) September 9, 2023