ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಎಸ್.ಎನ್. ಗೋಯಂಕಾ ಅವರ 100ನೇ ಜಯಂತಿ ಅಂಗವಾಗಿ ವರ್ಷವಿಡೀ ನಡೆದ ಆಚರಣೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.
ಒಂದು ವರ್ಷದ ಹಿಂದೆ ವಿಪಸ್ಸನ ಧ್ಯಾನದ ಗುರುಗಳಾದ ಆಚಾರ್ಯ ಶ್ರೀ ಎಸ್. ಎನ್. ಗೋಯೆಂಕಾ ಅವರ ಜನ್ಮಶತಮಾನೋತ್ಸವದ ಆರಂಭವನ್ನು ಸ್ಮರಿಸಿಕೊಂಡ ಪ್ರಧಾನಿ, ರಾಷ್ಟ್ರವು ‘ಅಮೃತ ಮಹೋತ್ಸವ’ವನ್ನು ಆಚರಿಸಿತು ಮತ್ತು ಅದೇ ಸಮಯದಲ್ಲಿ ಕಲ್ಯಾಣ ಮಿತ್ರ ಗೋಯೆಂಕಾ ಅವರ ಆದರ್ಶಗಳನ್ನು ನೆನಪಿಸಿಕೊಳ್ಳುತ್ತದೆ ಎಂದು ಬಲವಾಗಿ ಪ್ರತಿಪಾದಿಸಿದರು. ಈ ಆಚರಣೆಗಳು ಇಂದು ಕೊನೆಗೊಳ್ಳುತ್ತಿರುವಾಗ, ದೇಶವು ವಿಕಸಿತ ಭಾರತದ ಸಂಕಲ್ಪಗಳನ್ನು ಈಡೇರಿಸುವತ್ತ ವೇಗವಾಗಿ ಸಾಗುತ್ತಿದೆ ಎಂದು ಅವರು ಪುನರುಚ್ಚರಿಸಿದರು. ಗುರೂಜಿ ಅವರು ಆಗಾಗ್ಗೆ ಬಳಸುತ್ತಿದ್ದ ಭಗವಾನ್ ಬುದ್ಧನ ಮಂತ್ರವನ್ನು ಉಲ್ಲೇಖಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅರ್ಥವನ್ನು ವಿವರಿಸಿದರು ಮತ್ತು “ಒಟ್ಟಿಗೆ ಧ್ಯಾನ ಮಾಡುವುದು ಪರಿಣಾಮಕಾರಿ ಫಲಿತಾಂಶ ನೀಡುತ್ತದೆ. ಈ ಒಗ್ಗಟ್ಟಿನ ಭಾವನೆ ಮತ್ತು ಏಕತೆಯ ಶಕ್ತಿಯು ವಿಕಸಿತ ಭಾರತದ ಪ್ರಮುಖ ಆಧಾರವಾಗಿದೆ. ವರ್ಷವಿಡೀ ಒಂದೇ ಮಂತ್ರವನ್ನು ಪ್ರಚಾರ ಮಾಡುತ್ತಿರುವುದಕ್ಕಾಗಿ ಅವರೆಲ್ಲರಿಗೂ ನನ್ನ ಆತ್ಮೀಯ ಶುಭಾಶಯಗಳು ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಶ್ರೀ ಗೋಯಂಕಾ ಅವರೊಂದಿಗಿನ ಸಂಬಂಧಗಳನ್ನು ಸ್ಮರಿಸಿಕೊಂಡರು ಮತ್ತು ಅಮೆರಿಕಾದಲ್ಲಿ ನಡೆದ ವಿಶ್ವ ಧಾರ್ಮಿಕ ಸಮಾವೇಶದಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ ನಂತರ ಗುಜರಾತ್ ನಲ್ಲಿ ಹಲವು ಸಲ ಭೇಟಿ ಮಾಡಿದ್ದೆ ಎಂದು ಹೇಳಿದರು. ಅಂತಿಮ ಹಂತದಲ್ಲಿ ಅವರನ್ನು ನೋಡಿದ ಮತ್ತು ಆಚಾರ್ಯರನ್ನು ಹತ್ತಿರದಿಂದ ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಸೌಭಾಗ್ಯ ದೊರೆತ ನಾನೇ ಅದೃಷ್ಟವಂತ ಎಂದು ಹೇಳಿದರು.
ಶ್ರೀ ಗೋಯೆಂಕಾ ಅವರು ತಾವು ಹೋದ ಕಡೆಗಳಲ್ಲೆಲ್ಲಾ ಸದ್ಗುಣದ ವಾತಾವರಣವನ್ನು ಸೃಷ್ಟಿಸಿದ ಅವರ ಶಾಂತ ಮತ್ತು ಗಂಭೀರ ವ್ಯಕ್ತಿತ್ವದ ಜೊತೆಗೆ ವಿಪಸ್ಸನವನ್ನು ಆಳವಾಗಿ ಪಾಲಿಸಿಕೊಂಡು ಬಂದಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಗೋಯೆಂಕಾ ಅವರ ಬಗ್ಗೆ ಮಾತನಾಡಿದರು. "ಒಂದು ಜೀವನ, ಒಂದು ಮಿಷನ್" ನ ಪರಿಪೂರ್ಣ ಉದಾಹರಣೆ, ಶ್ರೀ ಗೋಯೆಂಕಾ ಅವರಿಗೆ ಒಂದೇ ಒಂದು ಮಿಷನ್ ಇತ್ತು - ವಿಪಸ್ಸನ! ಅವರು ಎಲ್ಲರಿಗೂ ವಿಪಸ್ಸನದ ಜ್ಞಾನ ನೀಡಿದರು’’, ಆ ಮೂಲಕ ಅವರು ಮಾನವೀಯತೆ ಮತ್ತು ಜಗತ್ತಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು.
ಇಡೀ ಜಗತ್ತಿಗೆ ಪ್ರಾಚೀನ ಭಾರತೀಯ ಜೀವನ ವಿಧಾನದ ಅದ್ಭುತ ಕೊಡುಗೆ ವಿಪಸ್ಸನ. ಅದರೂ ಸಹ ಈ ಪರಂಪರೆಯು ದೀರ್ಘಕಾಲದವರೆಗೆ ದೇಶದಲ್ಲಿ ಕಳೆದುಹೋಗಿದೆ ಮತ್ತು ವಿಪಸ್ಸನವನ್ನು ಕಲಿಸುವ ಮತ್ತು ಕಲಿಯುವ ಕಲೆಯು ಮುಕ್ತಾಯವಾದಂತೆ ತೋರುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಆದರೂ ಮ್ಯಾನ್ಮಾರ್‌ನಲ್ಲಿ 14 ವರ್ಷಗಳ ತಪಸ್ಸಿನ ನಂತರ, ಶ್ರೀ ಗೋಯೆಂಕಾ ಅವರು ಜ್ಞಾನವನ್ನು ಪಡೆದರು ಮತ್ತು ವಿಪಸ್ಸನದ ಭಾರತದ ಪ್ರಾಚೀನ ವೈಭವದೊಂದಿಗೆ ತಾಯ್ನಾಡಿಗೆ ಮರಳಿದರು ಎಂದು ಪ್ರಧಾನಿ ತಿಳಿಸಿದರು. ವಿಪಸ್ಸಾನದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, "ಇದು ಸ್ವಯಂ ಅವಲೋಕನದ ಮೂಲಕ ಸ್ವಯಂ ಪರಿವರ್ತನೆಯ ಮಾರ್ಗವಾಗಿದೆ" ಎಂದು ಹೇಳಿದರು.
ಸಾವಿರಾರು ವರ್ಷಗಳ ಹಿಂದೆ ಇದನ್ನು ಪರಿಚಯಿಸಿದಾಗ ಅದು ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದ್ದರೂ, ಇದು ಪ್ರಪಂಚದ ಪ್ರಸ್ತುತ ಸವಾಲುಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿರುವುದರಿಂದ ಇಂದಿನ ಜೀವನದಲ್ಲಿ ಇದು ಹೆಚ್ಚು ಪ್ರಸ್ತುತವಾಗಿದೆ ಎಂಬ ನಂಬಿಕೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಗುರೂಜಿ ಅವರ ಪ್ರಯತ್ನದಿಂದಾಗಿ ವಿಶ್ವದ 80ಕ್ಕೂ ಅಧಿಕ ರಾಷ್ಟ್ರಗಳು ಧ್ಯಾನದ ಮಹತ್ವವನ್ನು ಅರಿತು, ಅದನ್ನು ಅಳವಡಿಸಿಕೊಂಡಿವೆ ಎಂದರು. “ಆಚಾರ್ಯ ಶ್ರೀ ಗೋಯೆಂಕಾ ಮತ್ತೊಮ್ಮೆ ವಿಪಸ್ಸನಕ್ಕೆ ಜಾಗತಿಕ ಹೆಗ್ಗುರುತನ್ನು ನೀಡಿದರು. ಇಂದು ಭಾರತವು ಆ ನಿರ್ಣಯಕ್ಕೆ ಪೂರ್ಣ ಬಲದೊಂದಿಗೆ ಹೊಸ ವಿಸ್ತರಣೆಯನ್ನು ನೀಡುತ್ತಿದೆ”, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಭಾರತದ ಪ್ರಸ್ತಾವನೆಗೆ 190 ಕ್ಕೂ ಅಧಿಕ ದೇಶಗಳ ಬೆಂಬಲವನ್ನು ಸ್ಮರಿಸಿದ ಪ್ರಧಾನಿ, ಆ ಮೂಲಕ ಜಾಗತಿಕವಾಗಿ ಅದನ್ನು ಜೀವನದ ಭಾಗವಾಗಿಸಿಕೊಂಡರು.
ವಿಪಸ್ಸನ ಯೋಗದ ಪ್ರಕ್ರಿಯೆಗಳನ್ನು ಸಂಶೋಧಿಸಿದವರು ಭಾರತದ ಪೂರ್ವಜರೇ ಆಗಿದ್ದರೂ, ಮುಂದಿನ ಪೀಳಿಗೆಗಳು ಅದರ ಮಹತ್ವವನ್ನು ಮರೆತಿರುವ ವಿಪರ್ಯಾಸವನ್ನು ಪ್ರಧಾನಿ ಗಮನ ಸೆಳದರು. "ವಿಪಸ್ಸನ, ಧ್ಯಾನ, ಧಾರಣೆಗಳನ್ನು ಸಾಮಾನ್ಯವಾಗಿ ತ್ಯಾಗ ಮತ್ತು ಜನರ ವಿಷಯಗಳಾಗಿ ಪರಿಗಣಿಸಲಾಗುತ್ತದೆ ಆದರೆ ಅದರ ಪಾತ್ರವನ್ನು ಮರೆತುಬಿಡಲಾಯಿತು’’. ಆಚಾರ್ಯ ಶ್ರೀ ಎಸ್.ಎನ್. ಗೋಯೆಂಕಾ ಅವರಂತಹ ನಾಯಕತ್ವಕ್ಕಾಗಿ ಪ್ರಧಾನಿ ಶ್ಲಾಘಿಸಿದರು.
ಗುರುಜಿ ಅವರನ್ನು ಉಲ್ಲೇಖಿಸಿದ ಪ್ರಧಾನಿ ಅವರು, “ಆರೋಗ್ಯಕರ ಜೀವನ ನಮ್ಮೆಲ್ಲರಿಗೂ ನಮ್ಮ ಬಗ್ಗೆ ದೊಡ್ಡ ಜವಾಬ್ದಾರಿಯಾಗಿದೆ’’ ಎಂದರು. ವಿಪಸ್ಸನದ ಪ್ರಯೋಜನಗಳನ್ನು ಪ್ರಮುಖವಾಗಿ ಉಲ್ಲೇಖಿಸಿದ ಅವರು, ಇಂದಿನ ಯುವಜನತೆ ದುಡಿಯುವುದು ಮತ್ತು ಜೀವನದ ಸಮತೋಲನ, ಸದ್ಯದ ಜೀವನ ಶೈಲಿ ಮತ್ತು ಇತರೆ ವಿಚಾರಗಳಿಂದಾಗಿ ಒತ್ತಡಕ್ಕೆ ಸಂತ್ರಸ್ತರಾಗುರುವ ಇಂದಿನ ಸವಾಲಿನ ಸಮಯದಲ್ಲಿ ವಿಪಸ್ಸನ ಆಚರಣೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಇದು ಅವರಿಗೆ ಮಾತ್ರವಲ್ಲದೆ ವಯಸ್ಸಾದ ಪೋಷಕರು ಹೆಚ್ಚಿನ ಒತ್ತಡದಲ್ಲಿರುವ ಸೂಕ್ಷ್ಮ ಮತ್ತು ವಿಭಕ್ತ ಕುಟುಂಬಗಳ ಸದಸ್ಯರಿಗೂ ಪರಿಹಾರವಾಗಿದೆ ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬರೂ ಇಂತಹ ಉಪಕ್ರಮಗಳೊಂದಿಗೆ ವೃದ್ಧರ ಜತೆ ಸಂಪರ್ಕ ಹೊಂದಿರಬೇಕು ಎಂದು ಅವರು ಕರೆ ನೀಡಿದರು.
ಪ್ರತಿಯೊಬ್ಬರ ಜೀವನವನ್ನು ಶಾಂತಿಯುತ, ಸಂತೋಷ ಮತ್ತು ಸೌಹಾರ್ದಯುತವಾಗಿಸಲು ಆಚಾರ್ಯ ಗೋಯೆಂಕಾ ಅವರು ಅಭಿಯಾನದ ಮೂಲಕ ನಡೆಸಿದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಭವಿಷ್ಯದ ಪೀಳಿಗೆಗಳು ಈ ಅಭಿಯಾನದ ಪ್ರಯೋಜನಗಳನ್ನು ಪಡೆಯಬೇಕೆಂದು ಅವರು ಬಯಸಿದ್ದರು ಮತ್ತು ಅದಕ್ಕಾಗಿಯೇ ಅವರು ತಮ್ಮ ಜ್ಞಾನವನ್ನು ವಿಸ್ತರಿಸಿದರು. ಅಷ್ಟಕ್ಕೇ ಸುಮ್ಮನಾಗದೆ ನುರಿತ ಶಿಕ್ಷಕರನ್ನೂ ಸೃಷ್ಟಿಸಿದರು. ವಿಪಸ್ಸನ ಬಗ್ಗೆ ಮತ್ತೊಮ್ಮೆ ವಿವರಿಸಿದ ಪ್ರಧಾನಿ, ಇದು ಆತ್ಮದೊಳಗೆ ಒಂದು ಪ್ರಯಾಣ ಮತ್ತು ನಿಮ್ಮೊಳಗೆ ಆಳವಾಗಿ ಇಳಿಯುವ ಮಾರ್ಗವಾಗಿದೆ ಎಂದು ಹೇಳಿದರು. ಆದರೂ, ಇದು ಕೇವಲ ಪ್ರಕಾರವಲ್ಲ ಆದರೆ ಒಂದು ವಿಜ್ಞಾನವಾಗಿದೆ. ಈ ವಿಜ್ಞಾನದ ಫಲಿತಾಂಶಗಳು ನಮಗೆ ತಿಳಿದಿರುವುದರಿಂದ, ನಾವು ಈಗ ಆಧುನಿಕ ವಿಜ್ಞಾನದ ಮಾನದಂಡಗಳ ಪ್ರಕಾರ ಅದರ ಪುರಾವೆಗಳನ್ನು ಜಗತ್ತಿಗೆ ಪ್ರಸ್ತುತಪಡಿಸಬೇಕಾಗಿದೆ ಎಂದು ಅವರು ಹೇಳಿದರು. “ಆ ದಿಸೆಯಲ್ಲಿ ವಿಶ್ವದಾದ್ಯಂತ ಈಗಾಗಲೇ ಬಹಳಷ್ಟು ಮಾಡಲಾಗುತ್ತಿರುವ ಪ್ರಯತ್ನಗಳ ಜತೆಗೆ ಜಗತ್ತಿಗೆ ಹೆಚ್ಚಿನ ಕಲ್ಯಾಣವನ್ನು ತರಲು ಹೊಸ ಸಂಶೋಧನೆಗಳನ್ನು ಬಳಸಿಕೊಂಡು ಅದನ್ನು ಹೆಚ್ಚು ಸ್ವೀಕಾರಾರ್ಹಗೊಳಿಸುವಲ್ಲಿ ಭಾರತವು ಮುಂದಾಳತ್ವ ವಹಿಸಬೇಕಾಗಿದೆ’’ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಆಚಾರ್ಯ ಎಸ್.ಎನ್.ಗೋಯೆಂಕಾ ಅವರ ಜನ್ಮಶತಮಾನೋತ್ಸವದ ಈ ವರ್ಷವು ಎಲ್ಲರಿಗೂ ಸ್ಪೂರ್ತಿದಾಯಕ ಸಮಯ ಎಂದು ಕರೆದರು ಮತ್ತು ಅವರ ಪ್ರಯತ್ನಗಳು ಮಾನವ ಸೇವೆಗಾಗಿ ಮುಂದುವರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.