Theme of the meeting: ‘Strengthening Multilateral Dialogue – Striving for Sustainable Peace and Development’.

ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ.ಎಸ್. ಜೈಶಂಕರ್ ಅವರು ಈ ಭಾಷಣ ಓದಿದರು.

ಗೌರವಾನ್ವಿತರೇ

ಭಾರತ 2017 ರಲ್ಲಿ ಕಝಖ್ ಎಸ್.ಸಿ.ಒ ಸದಸ್ಯ ದೇಶವಾಗಿ ಭಾಗವಹಿಸಿದ್ದನ್ನು ಭಾರತ ಸ್ಮರಿಸಿಕೊಳ್ಳುತ್ತಿದೆ. ಅಲ್ಲಿಂದ ಈ ವರೆಗೆ ನಾವು ಎಸ್.ಸಿ.ಒ ಅಧ್ಯಕ್ಷತೆಯ ಒಂದು ಸಂಪೂರ್ಣ ವೃತ್ತವನ್ನು ಪೂರೈಸಿದ್ದೇವೆ. ಭಾರತ 2020 ರಲ್ಲಿ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ ಸಭೆ ಮತ್ತು ಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್ ಸಭೆಯಲ್ಲಿ 2023 ರಲ್ಲಿ ಆಯೋಜಿಸಿತ್ತು. ಎಸ್.ಸಿ.ಒ ನಮ್ಮ ವಿದೇಶಾಂಗ ನೀತಿಯಲ್ಲಿ ಪ್ರಮುಖ ಸ್ಥಾನ  ಪಡೆದುಕೊಂಡಿದೆ.  

ಸಂಘಟನೆಯ ಸದಸ್ಯ ರಾಷ್ಟ್ರವಾಗಿರುವ ಇರಾನ್ ದೇಶ ಸಭೆಯಲ್ಲಿ ಭಾಗವಹಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಅಧ್ಯಕ್ಷರಾದ ರೈಸಿ ಮತ್ತು ಇತರರಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ.

ಸಂಘಟನೆಗೆ ಹೊಸದಾಗಿ ಸೇರ್ಪಡೆಯಾಗಿರುವ ಬೆಲಾರಸ್ ಗೆ ಸ್ವಾಗತ ಮತ್ತು ಅಧ್ಯಕ್ಷರಾದ ಲುಕಶೇಂಕೋ ಅವರನ್ನು ಅಭಿನಂದಿಸುತ್ತೇನೆ.

ಘನತೆವೆತ್ತವರೇ

ಸಂಕ್ರಾಮಿಕದ ಪರಿಣಾಮಗಳ ಹಿನ್ನೆಲೆಯಲ್ಲಿ ನಾವಿಲ್ಲಿ ಸಮಾವೇಶಗೊಂಡಿದ್ದೇವೆ. ಆತಂಕ ಹೆಚ್ಚಾಗುತ್ತಿದ್ದು, ನಂಬಿಕೆಯ ಕೊರತೆ ಎದುರಾಗಿದೆ ಮತ್ತು ಜಗತ್ತಿನಾದ್ಯಂತ ಇಂತಹ ತಾಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಘಟನೆಗಳು ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಗಮನಾರ್ಹ ಒತ್ತಡ ಉಂಟು ಮಾಡಿವೆ. ಜಾಗತೀಕರಣದಿಂದ ಉಂಟಾದ ಕೆಲವು ಸಮಸ್ಯೆಗಳು ಉಲ್ಬಣಗೊಂಡಿವೆ. ನಮ್ಮ ಸಭೆಯು ಈ ಬೆಳವಣಿಗೆಗಳ ಪರಿಣಾಮಗಳನ್ನು ತಗ್ಗಿಸಲು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿದೆ.

ಎಸ್.ಸಿ.ಒ ಒಂದು ತತ್ವಾಧಾರಿತ ಸಂಘಟನೆಯಾಗಿದ್ದು, ಇಲ್ಲಿನ ಒಮ್ಮತವು ಅದರ ಸದಸ್ಯ ರಾಷ್ಟ್ರಗಳ ಕಾರ್ಯವಿಧಾನವನ್ನು ಚಾಲನೆಗೊಳಿಸುತ್ತದೆ. ಈ ಸಮಯದಲ್ಲಿ ವಿದೇಶಿ ನೀತಿಗಳನ್ವಯ ನಾವು ಸಾರ್ವಭೌಮತ್ವ, ಸ್ವಾತಂತ್ರ್ಯ, ಪ್ರಾದೇಶಿಕ ಸಮಗ್ರತೆ, ಸಮಾನತೆ, ಪರಸ್ಪರ ಲಾಭ, ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು, ಬಲವನ್ನು ಬಳಸದಿರುವುದು ಅಥವಾ ಬಲದ ಬಳಕೆಯ ಬೆದರಿಕೆಗೆ ನಮ್ಮ ಆಧಾರವಾಗಿ ಪರಸ್ಪರ ಗೌರವವನ್ನು ಪುನರುಚ್ಚರಿಸುತ್ತಿದ್ದೇವೆ ಎಂಬುದು ವಿಶೇಷವಾಗಿ ಗಮನಾರ್ಹವಾಗಿದೆ. ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳಿಗೆ ವಿರುದ್ಧವಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರಲು ನಾವು ಸಹ ಒಪ್ಪಿಕೊಂಡಿದ್ದೇವೆ.

ಎಸ್.ಸಿ.ಒ ನ ನೈಜ ಗುರಿಗಳಲ್ಲಿ ಒಂದೆಂದರೆ ಅದು ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಸಹಜತೆಯನ್ನು ಕಾಯ್ದುಕೊಳ್ಳುವುದು ನಮ್ಮ ಪರಮೋಚ್ಛ ಆದ್ಯತೆಯಾಗಿದೆ. ನಮ್ಮಲ್ಲಿ ಅನೇಕರು ನಮ್ಮ ಅನುಭವಗಳನ್ನು ಹೊಂದಿದ್ದೇವೆ, ಆಗಾಗ್ಗೆ ನಮ್ಮ ಗಡಿಯನ್ನು ಮೀರಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಪರಿಶೀಲಿಸದೇ ಬಿಟ್ಟರೆ, ಅದು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಬಹುದು ಎಂಬುದನ್ನು ನಾವು ಸ್ಪಷ್ಟಪಡಿಸೋಣ. ಯಾವುದೇ ರೂಪದಲ್ಲಿ ಅಥವಾ ಅಭಿವ್ಯಕ್ತಿಯಲ್ಲಿ ಭಯೋತ್ಪಾದನೆಯನ್ನು ಸಮರ್ಥಿಸಲು ಅಥವಾ ಕ್ಷಮಿಸಲು ಸಾಧ್ಯವಿಲ್ಲ. ಭಯೋತ್ಪಾದಕರಿಗೆ ಆಶ್ರಯ ನೀಡುವ, ಸುರಕ್ಷಿತ ನೆಲೆಗಳನ್ನು ಒದಗಿಸುವ ಮತ್ತು ಭಯೋತ್ಪಾದನೆಯನ್ನು ಕ್ಷಮಿಸುವ ದೇಶಗಳನ್ನು ಅಂತರರಾಷ್ಟ್ರೀಯ ಸಮುದಾಯವು ಪ್ರತ್ಯೇಕಿಸಿ ಮತ್ತು ಬಹಿರಂಗಪಡಿಸಬೇಕು. ಗಡಿಯಾಚೆಯ ಭಯೋತ್ಪಾದನೆಗೆ ನಿರ್ಣಾಯಕ ಸ್ಪಂದನೆ ಅಗತ್ಯವಾಗಿದೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ನೇಮಕಾತಿ ಮಾಡಿಕೊಳ್ಳುವುದನ್ನು ಬೇರು ಸಮೇತ ಕಿತ್ತೊಗೆಯಬೇಕು. ನಮ್ಮ ಯುವ ಸಮೂಹದಲ್ಲಿ ಇಂತಹ ವಿಚಾರಗಳು ಆಮೂಲಾಗ್ರವಾಗಿ ಹರಡುವಿಕೆಯನ್ನು ತಡೆಗಟ್ಟಲು ನಾವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ವಿಷಯದ ಕುರಿತು ಕಳೆದ ವರ್ಷ ಭಾರತದ ಅಧ್ಯಕ್ಷರ ಅವಧಿಯಲ್ಲಿ ನೀಡಲಾದ ಜಂಟಿ ಹೇಳಿಕೆಯು ನಮ್ಮ ಹಂಚಿಕೆಯ ಬದ್ಧತೆಯನ್ನು ಒತ್ತಿಹೇಳುತ್ತದೆ.

ನಮ್ಮ ಮುಂದಿರುವ ಮತ್ತೊಂದು ಪ್ರಮುಖ ಕಳವಳವೆಂದರೆ ಹವಾಮಾನ ಬದಲಾವಣೆ. ಪರ್ಯಾಯ ಇಂಧನಗಳಿಗೆ ಪರಿವರ್ತನೆ, ವಿದ್ಯುನ್ಮಾನ ವಾಹನಗಳ ಅಳವಡಿಕೆ ಮತ್ತು ಹವಾಮಾನ-ಸ್ಥಿತಿಸ್ಥಾಪಕದ ಮೂಲಸೌಕರ್ಯಗಳನ್ನು ನಿರ್ಮಿಸುವುದು ಸೇರಿದಂತೆ ಇಂಗಾಲ ಹೊರಸೂಸುವಿಕೆಯಲ್ಲಿ ಕಡಿತವನ್ನು ಸಾಧಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ, ಭಾರತದ ಎಸ್‌ಸಿಒ ಅಧ್ಯಕ್ಷರ ಅವಧಿಯಲ್ಲಿ, ಬೆಳವಣಿಗೆಯಾಗುತ್ತಿರುವ ಇಂಧನಗಳ ಕುರಿತು ಜಂಟಿ ಹೇಳಿಕೆ ಮತ್ತು ಸಾರಿಗೆ ವಲಯದಲ್ಲಿ ನವೀಕರಿಸಬಹುದಾದ ಇಂಧನದೊಂದಿಗೆ ನಮ್ಮ ಸಸ್ಯಗಳನ್ನು ಪೂರೈಸುವ ಕುರಿತ ಪರಿಕಲ್ಪನೆಯ ಕಾಗದಪತ್ರಗಳಿಗೆ ಅನುಮೋದನೆ ನೀಡಲಾಯಿತು.

ಘನತೆವೆತ್ತವರೇ

ಆರ್ಥಿಕಾಭಿವೃದ್ಧಿಗೆ ದೃಢವಾದ ಸಂಪರ್ಕದ ಅಗತ್ಯವಿದೆ. ಅದು ನಮ್ಮ ಸಮಾಜಗಳ ನಡುವೆ ಸಹಕಾರ ಮತ್ತು ವಿಶ್ವಾಸಕ್ಕೆ ದಾರಿ ಮಾಡಿಕೊಡಬಹುದು. ಸಂಪರ್ಕ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಅಗತ್ಯ. ಹಾಗೆಯೇ ತಾರತಮ್ಯವಿಲ್ಲದ ವ್ಯಾಪಾರ ಹಕ್ಕುಗಳು ಮತ್ತು ಸಾರಿಗೆ ಆಡಳಿತಗಳ ಕುರಿತು ಎಸ್.ಸಿ.ಒದಲ್ಲಿ ಈ ಅಂಶಗಳ ಬಗ್ಗೆ ಗಂಭೀರವಾಗಿ ಚರ್ಚಿಸಬೇಕಾಗಿದೆ.

21 ನೇ ಶತಮಾನ ತಂತ್ರಜ್ಞಾನದ ಶತಮಾನವಾಗಿದೆ. ತಂತ್ರಜ್ಞಾನ ಕ್ರಿಯಾತ್ಮಕವಾಗಿರಬೇಕು ಮತ್ತು ಅದು ಕಲ್ಯಾಣ ಕಾರ್ಯಗಳಿಗೆ ಅನ್ವಯವಾಗಬೇಕು ಹಾಗೂ ನಮ್ಮ ಸಮಾಜದ ಪ್ರಗತಿಗೆ ಪೂರಕವಾಗಿರಬೇಕು. ಕೃತಕ ಬುದ್ದಿಮತ್ತೆಗಾಗಿ ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಲಾಗಿದೆ ಮತ್ತು ಎಐ ಅಭಿಯಾನವನ್ನು ಆರಂಭಿಸಿದೆ. ನಮ್ಮ ಬದ್ಧತೆ “ಎಲ್ಲರಿಗೂ ಎಐ” ಆಗಿದ್ದು, ಎಸ್.ಸಿ.ಒ ಚೌಕಟ್ಟಿನ ಕಾರ್ಯನಿರ್ವಹಣೆಯಲ್ಲಿ ಇದರ ಪ್ರತಿಫಲನವಾಗಿದೆ. ಎಐ ನೀಲನಕ್ಷೆಗೆ ಸಹಕಾರ ಬಯಸುತ್ತೇವೆ.

ಈ ವಲಯದ ನಾಗರಿಕತೆಯೊಂದಿಗೆ ಆಳವಾದ ಬಾಂಧವ್ಯವನ್ನು ಭಾರತ ಹೊಂದಿದೆ. ಎಸ್.ಸಿ.ಒಗೆ ಮಧ್ಯ ಏಷ್ಯಾದ ಕೇಂದ್ರೀಯತೆಯನ್ನು ಗುರುತಿಸಿ, ನಾವು ಅವರ ಆಸಕ್ತಿಗಳು ಮತ್ತು ಆಕಾಂಕ್ಷೆಗಳಿಗೆ ಆದ್ಯತೆ ನೀಡಿದ್ದೇವೆ. ಇದು ಅವರೊಂದಿಗೆ ಹೆಚ್ಚಿನ ವಿನಿಮಯ, ಯೋಜನೆಗಳು ಮತ್ತು ಚಟುವಟಿಕೆಗಳಲ್ಲಿ ಇದು ಪ್ರತಿಫಲಿಸುತ್ತದೆ.

ಎಸ್.ಸಿ.ಒದಲ್ಲಿ ಸಹಕಾರ ಎಂಬುದು ನಮಗೆ ಜನಕೇಂದ್ರಿತ ವಿಚಾರವಾಗಿದೆ. ಭಾರತ ಎಸ್.ಸಿ.ಒದಲ್ಲಿ ಸಿರಿಧಾನ್ಯ ಉತ್ಸವ, ಎಸ್.ಸಿ.ಒ ಚಲನಚಿತ್ರೋತ್ಸವ, ಎಸ್.ಸಿ.ಒ ಸೂರಜ್ ಕುಂಡ್ ಕರಕುಶಲ ಮೇಳ, ಎಸ್.ಸಿ.ಒ ಚಿಂತಕರ ಸಮ್ಮೇಳನಗಳು ಮತ್ತು ತನ್ನ ಅಧ್ಯಕ್ಷತೆಯಲ್ಲಿ ಬೌದ್ಧಪರಂಪರೆಯ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು. ನಾವು ಇತರರ ಇಂತಹ ಪ್ರಯತ್ನಗಳನ್ನು ಸಹಜವಾಗಿಯೇ ಬೆಂಬಲಿಸುತ್ತೇವೆ.

ನವದೆಹಲಿಯ ಎಸ್.ಸಿ.ಒ ಸಚಿವಾಲಯದಲ್ಲಿ ಕಳೆದ ವರ್ಷದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿರುವುದಕ್ಕೆ ಸಂತಸವಾಗುತ್ತಿದೆ. ಇದರಲ್ಲಿ 2024ರಲ್ಲಿ 10 ನೇ ಅಂತರರಾಷ್ಟ್ರೀಯ ಯೋಗ ದಿನವೂ ಸಹ ಸೇರಿದೆ.

ಘನತೆವೆತ್ತವರೇ

'ಜಗತ್ತು ಒಂದು ಕುಟುಂಬ' ಅಂದರೆ ವಸುಧೈವ ಕುಟುಂಬಕಂನ ಸಹಸ್ರಮಾನಗಳ ಹಳೆಯ ತತ್ವವನ್ನು ಅಭ್ಯಾಸ ಮಾಡುವ ಮೂಲಕ ಜನರನ್ನು ಒಂದುಗೂಡಿಸಲು, ಸಹಯೋಗ ಹೊಂದಲು, ಪ್ರಗತಿ ಮತ್ತು ಒಟ್ಟಿಗೆ ಅಭಿವೃದ್ಧಿ ಹೊಂದಲು ಎಸ್.ಸಿ.ಒ ನಮಗೆ ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ ಎಂದು ನಾನು ಒತ್ತಿಹೇಳಲು ಬಯಸುತ್ತೇನೆ. ಅಂದರೆ. ನಾವು ಈ ಭಾವನೆಗಳನ್ನು ಪ್ರಾಯೋಗಿಕ ಸಹಕಾರಕ್ಕೆ ನಿರಂತರವಾಗಿರಬೇಕು.  ಇಂದು ನಾವು ತೆಗೆದುಕೊಳ್ಳಲಿರುವ ಪ್ರಮುಖ ನಿರ್ಧಾರಗಳನ್ನು ನಾನು ಸ್ವಾಗತಿಸುತ್ತೇನೆ.

ಎಸ್‌ಸಿಒ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಕಝಕ್ ತಂಡವನ್ನು ಅಭಿನಂದಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದೇನೆ ಮತ್ತು ಎಸ್‌ಸಿಒದ ಮುಂದಿನ ಅಧ್ಯಕ್ಷ ಸ್ಥಾನಕ್ಕಾಗಿ ಚೀನಾಕ್ಕೆ ನಮ್ಮ ಶುಭಾಶಯಗಳನ್ನು ತಿಳಿಸುತ್ತೇನೆ.

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India Delivers': UN Climate Chief Simon Stiell Hails India As A 'Solar Superpower'

Media Coverage

'India Delivers': UN Climate Chief Simon Stiell Hails India As A 'Solar Superpower'
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”