Quote"ಕಳೆದ 25 ದಿನಗಳಲ್ಲಿ ನೀವು ಗಳಿಸಿದ ಅನುಭವವು ನಿಮ್ಮ ಕ್ರೀಡಾ ವೃತ್ತಿಜೀವನಕ್ಕೆ ಉತ್ತಮ ಆಸ್ತಿಯಾಗಿದೆ"
Quote"ಯಾವುದೇ ಸಮಾಜದ ಅಭಿವೃದ್ಧಿಗೆ ಕ್ರೀಡೆ ಮತ್ತು ಆಟಗಾರರಿಗೆ ಅಲ್ಲಿ ಪ್ರವರ್ಧಮಾನಕ್ಕೆ ಸಕಾಲಿಕ ಅವಕಾಶ ಸಿಗುವುದು ಮುಖ್ಯ"
Quote"ಇಡೀ ದೇಶವು ಇಂದು ಆಟಗಾರರಂತೆ ಯೋಚಿಸುತ್ತಿದೆ, ರಾಷ್ಟ್ರವನ್ನು ಮೊದಲು ಇರಿಸುತ್ತದೆ"
Quote"ಇಂದಿನ ಜಗತ್ತಿನಲ್ಲಿ ಅನೇಕ ಪ್ರಸಿದ್ಧ ಕ್ರೀಡಾ ಪ್ರತಿಭೆಗಳು ಸಣ್ಣ ಪಟ್ಟಣಗಳಿಂದ ಬಂದವರು"
Quote" ಪ್ರತಿಭಾವಂತ ವ್ಯಕ್ತಿಗಳನ್ನು ಹುಡುಕಿತೆಗೆಯಲು ಮತ್ತು ರಾಷ್ಟ್ರಕ್ಕಾಗಿ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಂಸದ್ ಖೇಲ್ ಪ್ರತಿಯೋಗಿತಾ ಉತ್ತಮ ವೇದಿಕೆಯಾಗಿದೆ"

ಅಮೇಠಿ ಸಂಸದ್ ಖೇಲ್ ಪ್ರತಿಯೋಗಿತಾ 2023 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ  ಭಾಷಣ ಮಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ಅಮೇಠಿ ಸಂಸದ್ ಖೇಲ್ ಪ್ರತಿಯೋಗಿತಾ 2023 ರಲ್ಲಿ ಭಾಗವಹಿಸುವವರೊಂದಿಗೆ ಈ ರೀತಿ ಸಂವಹನ ಸಾಧಿಸುವುದು ನನಗೊಂದು ವಿಶೇಷ ಭಾವನೆಯಾಗಿದೆ. ಭಾರತೀಯ ಆಟಗಾರರು ಏಷ್ಯನ್ ಕ್ರೀಡಾಕೂಟದಲ್ಲಿ ಶತಕ ಪದಕಗಳನ್ನು ಗಳಿಸಿರುವುದರಿಂದ ಈ ತಿಂಗಳು ದೇಶದಲ್ಲಿ ಕ್ರೀಡೆಗಳಿಗೆ ಮಂಗಳಕರವಾಗಿದೆ” ಎಂದು ಹೇಳಿದರು. 

“ಅಮೇಠಿಯ ಅನೇಕ ಆಟಗಾರರು ಅಮೇಠಿ ಸಂಸದ್ ಖೇಲ್ ಪ್ರತಿಯೋಗಿತಾದಲ್ಲಿ ಭಾಗವಹಿಸುವ ಮೂಲಕ ಈ ಕ್ರಡಾಸ್ಪರ್ಧೆಗಳ ನಡುವೆ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.ರು. ಈ ಸ್ಪರ್ಧೆಯಿಂದ ಕ್ರೀಡಾಪಟುಗಳು ಪಡೆದಿರುವ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ಅನುಭವಿಸಬಹುದಾಗಿದ್ದು, ಈ ಉತ್ಸಾಹವನ್ನು ನಿಭಾಯಿಸಲು ಮತ್ತು ಉತ್ತಮ ಫಲಿತಾಂಶಕ್ಕಾಗಿ ಅದನ್ನು ಅಲಂಕರಿಸಲು ಈಗ ಸಮಯ ಪಕ್ವವಾಗಿದೆ. ಕಳೆದ 25 ದಿನಗಳಲ್ಲಿ ನೀವು ಗಳಿಸಿದ ಅನುಭವವು ನಿಮ್ಮ ಕ್ರೀಡಾ ವೃತ್ತಿಜೀವನಕ್ಕೆ ಉತ್ತಮ ಆಸ್ತಿಯಾಗಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

|

“ಈ ಮಹಾನ್ ಕ್ರೀಡಾ ಅಭಿಯಾನಕ್ಕೆ ಶಿಕ್ಷಕ, ತರಬೇತುದಾರ, ಶಾಲೆ ಅಥವಾ ಕಾಲೇಜು ಪ್ರತಿನಿಧಿಗಳು ವಿವಿಧ ಪಾತ್ರಗಳಲ್ಲಿ ಕ್ರೀಡಾಕೂಟದಲ್ಲಿ ಸೇರಿಕೊಳ್ಳುವ ಮೂಲಕ ಈ ಯುವ ಆಟಗಾರರನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ ಅಭಿನಂದಿಸುವ ವಿಶೇಷ ಅವಕಾಶವನ್ನು ಪಡೆದರು. ಒಂದು ಲಕ್ಷಕ್ಕೂ ಹೆಚ್ಚು ಆಟಗಾರರನ್ನು ಒಟ್ಟುಗೂಡಿಸಿರುವುದು ಬಹಳ ದೊಡ್ಡ ವಿಷಯ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಅಮೇಠಿ ಸಂಸದೆ ಶ್ರೀಮತಿ ಸ್ಮೃತಿ ಇರಾನಿ ಜಿ ಅವರು ಕೂಡಾ ವಿಶೇಷವಾಗಿ ಅಭಿನಂದನಾರ್ಹರು. " ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

"ಯಾವುದೇ ಸಮಾಜದ ಅಭಿವೃದ್ಧಿಗೆ ಕ್ರೀಡೆ ಮತ್ತು ಆಟಗಾರರಿಗೆ ಅಲ್ಲಿ ಪ್ರವರ್ಧಮಾನಕ್ಕೆ ಸಕಾಲಿಕ ಅವಕಾಶ ಸಿಗುವುದು ಬಹಳ ಮುಖ್ಯ. ಯುವಕರು ಗುರಿ ಸಾಧಿಸಲು ಶ್ರಮಿಸಿದಾಗ, ಸೋತ ನಂತರ ಮತ್ತೆ ಪ್ರಯತ್ನಿಸಿ ಮತ್ತು ತಂಡವನ್ನು ಸೇರಿಕೊಂಡು ಮುನ್ನಡೆಯುವಾಗ ಕ್ರೀಡೆಯ ಮೂಲಕ ಸಹಜವಾಗಿಯೇ ವ್ಯಕ್ತಿತ್ವ ವಿಕಸನ ಸಂಭವಿಸುತ್ತದೆ. ಪ್ರಸ್ತುತ ಸರ್ಕಾರದ ನೂರಾರು ಸಂಸದರು ತಮ್ಮ ಕ್ಷೇತ್ರಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಹೊಸ ಮಾರ್ಗವನ್ನು ಸಿದ್ಧಪಡಿಸಿದ್ದಾರೆ ಮತ್ತು ಮುಂದಿನ ವರ್ಷಗಳಲ್ಲಿ ಅದರ ಫಲಿತಾಂಶಗಳು ಸ್ಪಷ್ಟವಾಗಿ ಗೋಚರಿಸಲಿದೆ. ಮುಂಬರುವ ವರ್ಷಗಳಲ್ಲಿ ಅಮೇಠಿಯ ಯುವ ಆಟಗಾರರು ಖಂಡಿತವಾಗಿಯೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುತ್ತಾರೆ ಮತ್ತು ಅಂತಹ ಸ್ಪರ್ಧೆಗಳಿಂದ ಗಳಿಸಿದ ಅನುಭವವು ತುಂಬಾ ಉಪಯುಕ್ತವಾಗಲಿದೆ” ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು.

"ಆಟಗಾರರು ಮೈದಾನಕ್ಕೆ ಪ್ರವೇಶಿಸಿದಾಗ, ಅವರು ಒಂದೇ ಗುರಿಯನ್ನು ಹೊಂದಿರುತ್ತಾರೆ - ತಮ್ಮನ್ನು ಮತ್ತು ತಂಡವನ್ನು ವಿಜಯಶಾಲಿಯಾಗಿಸುವುದು. ಕಾಲಬದಲಾಗಿದೆ, ಇಡೀ ದೇಶವೇ ಇಂದು ಆಟಗಾರರಂತೆ ಯೋಚಿಸುತ್ತಿದ್ದು, ರಾಷ್ಟ್ರಕ್ಕೆ ಮೊದಲ ಸ್ಥಾನ ನೀಡುತ್ತಿದೆ. ಆಟಗಾರರು  ಎಲ್ಲವನ್ನೂ ಪಣಕ್ಕಿಟ್ಟು ದೇಶಕ್ಕಾಗಿ ಆಡುತ್ತಾರೆ ಮತ್ತು ಈ ಸಮಯದಲ್ಲಿ ದೇಶವು ಇವರಿಂದ ಇನ್ನೂ ದೊಡ್ಡ ಗುರಿಯನ್ನು ನಿರೀಕ್ಷಿಸುತ್ತದೆ ಮತ್ತು ಬಯಸುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

“ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ದೇಶದ ಪ್ರತಿಯೊಂದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕನ ಪಾತ್ರವಿದೆ. ಇದಕ್ಕಾಗಿ ಪ್ರತಿಯೊಂದು ಕ್ಷೇತ್ರವೂ ಒಂದೇ ಭಾವನೆ, ಒಂದು ಗುರಿ ಮತ್ತು ಒಂದು ಸಂಕಲ್ಪದೊಂದಿಗೆ ಮುನ್ನಡೆಯಬೇಕು. ಯುವಕರಿಗಾಗಿ “ಟಾಪ್ಸ್” ಮತ್ತು “ಖೇಲೋ ಇಂಡಿಯಾ ಗೇಮ್ಸ್”ನಂತಹ ಯೋಜನೆಗಳಿವೆ.  ಟಾಪ್ಸ್ ಯೋಜನೆಯಡಿ ದೇಶ-ವಿದೇಶಗಳಲ್ಲಿ ನೂರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಿ ತರಬೇತಿ ನೀಡಿ ಕೋಟ್ಯಂತರ ರೂಪಾಯಿಗಳ ನೆರವು ನೀಡಲಾಗುತ್ತಿದೆ.  ಖೇಲೋ ಇಂಡಿಯಾ ಗೇಮ್ಸ್ ಅಡಿಯಲ್ಲಿ 3 ಸಾವಿರಕ್ಕೂ ಹೆಚ್ಚು ಆಟಗಾರರಿಗೆ ತಿಂಗಳಿಗೆ 50,000 ರೂ.ಗಳ ಸಹಾಯವನ್ನು ನೀಡಲಾಗುತ್ತಿದೆ. ಇದು ಕ್ರೀಡಾಪಟುಗಳಿಗೆ ತಮ್ಮ ಸೂಕ್ತ ತರಬೇತಿ, ಆಹಾರ, ತರಬೇತಿ, ಕಿಟ್, ಅಗತ್ಯ ಉಪಕರಣಗಳು ಮತ್ತು ಇತರ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡುತ್ತದೆ.” ಎಂದು ಪ್ರಧಾನಮಂತ್ರಿಯವರು ಹೇಳಿದರು.

 

|

“ಇಂದಿನ ಬದಲಾಗುತ್ತಿರುವ ಭಾರತದಲ್ಲಿ, ಸಣ್ಣ ಪಟ್ಟಣಗಳ ಪ್ರತಿಭೆಗಳು ಮುಕ್ತವಾಗಿ ಮುಂದೆ ಬರಲು ಅವಕಾಶವನ್ನು ಪಡೆಯುತ್ತಿದ್ದಾರೆ, ಮತ್ತು ಭಾರತವನ್ನು ಸ್ಟಾರ್ಟ್ಅಪ್ ಹಬ್ ಮಾಡುವಲ್ಲಿ ಸಣ್ಣ ಪಟ್ಟಣಗಳ ಕೊಡುಗೆಗಳೇ ಹೆಚ್ಚಾಗಿದೆ. ಇಂದಿನ ಪ್ರಪಂಚದ ಅನೇಕ ಪ್ರಸಿದ್ಧ ಕ್ರೀಡಾ ಪ್ರತಿಭೆಗಳು ಸಣ್ಣ ಪಟ್ಟಣಗಳಿಂದ ಬಂದವರು. ಸರ್ಕಾರದ ಪಾರದರ್ಶಕ ಕ್ರೀಡಾವಿಧಾನ-ವ್ಯವಸ್ಥೆಗಳ ಮೂಲಕ ಯುವಕರು ಮುಂದೆ ಬಂದು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯಬೇಕು, ಏಷ್ಯನ್ ಗೇಮ್ಸ್ ನಲ್ಲಿ ಪದಕಗಳನ್ನು ಗೆದ್ದ ಹೆಚ್ಚಿನ ಕ್ರೀಡಾಪಟುಗಳು ಸಣ್ಣ ನಗರಗಳಿಗೆ ಸೇರಿದವರು. ಅವರ ಪ್ರತಿಭೆಯನ್ನು ಗೌರವಿಸಿ, ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಿದ ಪರಿಣಾಮ ಇಂದು ಕಾಣಬಹುದಾಗಿದೆ.  ನಮ್ಮ ಗ್ರಾಮೀಣ ಕ್ರೀಡಾಪಟುಗಳು ಉತ್ತಮ ಫಲಿತಾಂಶವನ್ನು ನೀಡಿದ್ದಾರೆ. ಉತ್ತರ ಪ್ರದೇಶದ ಅನ್ನು ರಾಣಿ, ಪಾರುಲ್ ಚೌಧರಿ ಮತ್ತು ಸುಧಾ ಸಿಂಗ್ ಮುಂತಾದವರ ಸಾಧನೆಗಳು ಇದಕ್ಕೆ ಉದಾಹರಣೆಯಾಗಿದೆ. ಸಂಸದ್ ಖೇಲ್ ಪ್ರತಿಯೋಗಿತಾ ಅಂತಹ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಲು ಮತ್ತು ರಾಷ್ಟ್ರಕ್ಕಾಗಿ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಉತ್ತಮ ವೇದಿಕೆಯಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಎಲ್ಲಾ ಕ್ರೀಡಾಪಟುಗಳ ಕಠಿಣ ಪರಿಶ್ರಮವು ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ತೋರಿಸಲು ಪ್ರಾರಂಭಿಸಲಿದೆ ಮತ್ತು ಅನೇಕ ಕ್ರೀಡಾಪಟುಗಳು ದೇಶಕ್ಕೆ ಮತ್ತು ತ್ರಿವರ್ಣ ಧ್ವಜಕ್ಕೆ ಕೀರ್ತಿ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • shrawan Kumar March 31, 2024

    जय श्री राम
  • Mahendra singh Solanki Loksabha Sansad Dewas Shajapur mp November 07, 2023

    नमो नमो नमो नमो नमो नमो नमो
  • Gopal Manna October 18, 2023

    jay shree ram
  • Jayakumar G October 16, 2023

    🌺Support Modiji BJP Double Sarkaar System🙏 #RajasthanwithModiji #MizoramwithModiji @BJP4MP @BJP4CGState @kishanreddybjp
  • Rahul Bhalla October 16, 2023

    jai shri ram
  • Babaji Namdeo Palve October 16, 2023

    Jai Hind Jai Bharat Bharat Mata Kee Jai
  • Tapan Kumar Santra. October 16, 2023

    Nomo Nomo Nomo
  • Sudhir Kumar Shukla October 16, 2023

    नमो नमो नमो नमो
  • Sudhir Kumar Shukla October 16, 2023

    नमो नमो नमो
  • Sudhir Kumar Shukla October 16, 2023

    नमो नमो
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian startups raise $1.65 bn in February, median valuation at $83.2 mn

Media Coverage

Indian startups raise $1.65 bn in February, median valuation at $83.2 mn
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಮಾರ್ಚ್ 2025
March 04, 2025

Appreciation for PM Modi’s Leadership: Driving Self-Reliance and Resilience