ಪ್ರಧಾನಮಂತ್ರಿ ಅವರು 2023ರ ಸೆಪ್ಟಂಬರ್ 7ರಂದು ಜಕಾರ್ತಾದಲ್ಲಿ 20ನೇ ಆಸಿಯಾನ್- ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಅದರ ಭವಿಷ್ಯದ ದಿಕ್ಕನ್ನು ರೂಪಿಸುವ ಕುರಿತು ಆಸಿಯಾನ್ ಪಾಲುದಾರರೊಂದಿಗೆ ವಿಸ್ತೃತ ಚರ್ಚೆ ನಡೆಸಿದರು.  ಪ್ರಧಾನಮಂತ್ರಿ ಅವರು, ಇಂಡೋ-ಪೆಸಿಫಿಕ್ ನಲ್ಲಿ ಆಸಿಯಾನ್ ಕೇಂದ್ರೀಯತೆಯನ್ನು ಪುನರುಚ್ಚರಿಸಿದರು ಮತ್ತು ಭಾರತ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಮತ್ತು ಇಂಡೋ-ಪೆಸಿಫಿಕ್ ಕುರಿತು ಆಸಿಯಾನ್ ಆಮಾಯದ ಸಮನ್ವಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಆಸಿಯಾನ್- ಭಾರತ ಎಫ್ ಟಿಎ (ಎಐಟಿಐಜಿಎ) ಯ ಪರಿಶೀಲನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾಸಿದರು.

ಸಂಪರ್ಕ, ಡಿಜಿಟಲ್ ಪರಿವರ್ತನೆ, ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆ, ಸಮಕಾಲೀನ ಸವಾಲುಗಳನ್ನು ಎದುರಿಸುವುದು, ಜನರ ನಡುವಿನ ಸಂಪರ್ಕಗಳು ಮತ್ತು ಆಳವಾದ ಕಾರ್ಯತಂತ್ರದ ಒಪ್ಪಂದ ಒಳಗೊಂಡಿರುವ ಭಾರತ- ಆಸಿಯಾನ್ ಸಹಕಾರವನ್ನು ಬಲವರ್ಧನೆಗೊಳಿಸುವ 12 ಅಂಶಗಳ ಪ್ರಸ್ತಾವನೆಯನ್ನು ಪ್ರಧಾನಿ ಅವರು ಮಂಡಿಸಿದರು.

• ಆಗ್ನೇಯ-ಏಷ್ಯಾ -ಭಾರತ-ಪಶ್ಚಿಮ ಏಷ್ಯಾ- ಯುರೀಪ್ ಅನ್ನು ಸಂಪರ್ಕಿಸುವ ಬಹು-ಮಾದರಿ ಸಂಪರ್ಕ ಮತ್ತು ಆರ್ಥಿಕ ಕಾರಿಡಾರ್ ಸ್ಥಾಪನೆ.

• ಆಸಿಯಾನ್ ಪಾಲುದಾರರೊಂದಿಗೆ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸಂಗ್ರಹವನ್ನು ಹಂಚಿಕೊಳ್ಳಲು ಅವಕಾಶ.

• ಡಿಜಿಟಲ್ ರೂಪಾಂತರ ಮತ್ತು ಹಣಕಾಸು ಸಂಪರ್ಕದಲ್ಲಿ ಸಹಕಾರವನ್ನು ಕೇಂದ್ರೀಕರಿಸುವ ಡಿಜಿಟಲ್ ಭವಿಷ್ಯಕ್ಕಾಗಿ ಆಸಿಯಾನ್-ಭಾರತ ನಿಧಿ ಘೋಷಣೆ

•ನಮ್ಮ ಬಪ್ಪಂದಗಳನ್ನು ವೃದ್ಧಿಸಲು ಜ್ಞಾನ ಪಾಲುದಾರರಾಗಿ ಕಾರ್ಯನಿರ್ವಹಿಸಲು ಆಸಿಯಾನ್ ಮತ್ತು ಪೂರ್ವ ಏಷ್ಯಾದ ಆರ್ಥಿಕ ಮತ್ತು ಸಂಶೋಧನಾ ಸಂಸ್ಥೆ (ಇಆರ್ ಐಎ) ಬೆಂಬಲದ ನವೀಕರಣ ಘೋಷಣೆ.

• ಬಹುಪಕ್ಷೀಯ ವೇದಿಕೆಗಳಲ್ಲಿ ಜಾಗತಿಕ ದಕ್ಷಿಣ ಎದುರಿಸುತ್ತಿರುವ ಸಮಸ್ಯೆಗಳನ್ನು ಸಾಮೂಹಿಕವಾಗಿ ಪ್ರಸ್ತಾಪಿಸಲು ಕರೆ.

• ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಿರುವ ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರಕ್ಕೆ ಸೇರಿಸಲು ಆಸಿಯಾನ್ ದೇಶಗಳಿಗೆ ಆಹ್ವಾನ

•ಮಿಷನ್ ಲೈಫ್ ಗಾಗಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಲು ಕರೆ  

• ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಕೈಗೆಟುವ ದರದಲ್ಲಿ ಮತ್ತು ಗುಣಮಟ್ಟದ ಔಷಧಗಳನ್ನು ಓದಗಿಸುವ ಭಾರತದ ಅನುಭವವನ್ನು ಹಂಚಿಕೊಳ್ಳುವ ಆಫರ್.

• ಭಯೋತ್ಪಾದನೆ, ಉಗ್ರರಿಗೆ ಹಣಕಾಸಿನ ನೆರವು ಮತ್ತು ಸೈಬರ್ ತಪ್ಪು ಮಾಹಿತಿಯ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಕರೆ

• ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಮೈತ್ರಿಕೂಟ ಸೇರಲು ಆಸಿಯಾನ್ ದೇಶಗಳಿಗೆ ಕರೆ .

• ವಿಪ್ಪತ್ತು ನಿರ್ವಹಣೆಯಲ್ಲಿ ಸಹಕಾರಕ್ಕಾಗಿ ಕರೆ

• ಸಾಗರ ಭದ್ರತೆ, ಸುರಕ್ಷತೆ ಮತ್ತು ಡೋಮೇನ್ ಜಾಗೃತಿಯ ಮೇಲೆ ವರ್ಧಿತ ಸಹಕಾರಕ್ಕಾಗಿ ಕರೆ.

ಎರಡು ಜಂಟಿ ಹೇಳಿಕೆಗಳು, ಒಂದು ಸಾಗರ ಸಹಕಾರ ಮತ್ತು ಮತ್ತೊಂದು ಆಹಾರ ಭದ್ರತೆ ಕುರಿತಂತೆ ಅಂಗೀಕರಿಸಲಾಯಿತು.

ಭಾರತ ಮತ್ತು ಆಸಿಯಾನ್ ನಾಯಕರಲ್ಲದೆ, ವೀಕ್ಷಕರಾಗಿ ತಿಮೋರ್ ಲೆಸ್ಟೆ ಅವರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಅವರು, ಇಎಎಸ್ ಕಾರ್ಯವಿಧಾನದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು ಮತ್ತು ಅದನ್ನು ಮತ್ತಷ್ಟು ಬಲಪಡಿಸಲು ತಮ್ಮ ಬೆಂಬಲವನ್ನು ಪುನಃ ಪ್ರತಿಪಾದಿಸಿದರು. ಆಸಿಯಾನ್ ಕೇಂದ್ರೀಕರಣಕ್ಕೆ ಭಾರತದ ಬೆಂಬಲವನ್ನು ಒತ್ತಿ ಹೇಳಿದರು ಮತ್ತು ಮುಕ್ತ ಹಾಗೂ ತೆರೆದ ನಿಯಮಗಳ ಆಧಾರಿತ ಇಂಡೋ-ಪೆಸಿಫಿಕ್ ಅನ್ನು  ಖಾತ್ರಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾರತ ಮತ್ತು ಆಸಿಯಾನ್ ನಡುವಿನ ಇಂಡೋ-ಪೆಸಿಫಿಕ್ ದೂರದೃಷ್ಟಿಯ ಸಮನ್ವಯತೆಯನ್ನು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು ಮತ್ತು ಆಸಿಯಾನ್ ಕ್ವಾಡ್ ನ ದೂರದೃಷ್ಟಿಯ ಕೇಂದ್ರಬಿಂದುವಾಗಿ ಎಂದು ಒತ್ತಿ ಹೇಳಿದರು.

ಭಯೋತ್ಪಾದನೆ, ಹವಾಮಾನ ವೈಪರೀತ್ಯ ಮತ್ತು ಆಹಾರ ಹಾಗೂ ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳು ಚೇತರಿಸಿಕೊಳ್ಳುವ ಪೂರೈಕೆ ಸರಪಳಿಗಳು ಮತ್ತು ಇಂಧನ ಭದ್ರತೆ ಸೇರಿದಂತೆ ಜಾಗತಿಕ ಸವಾಲುಗಳನ್ನು ಎದುರಿಸಲು ಸಹಕಾರಿ ವಿಧಾನಕ್ಕೆ ಪ್ರಧಾನಿ ಕರೆ ನೀಡಿದರು. ಹವಾಮಾನ ಬದಲಾವಣೆಯ ವಲಯದಲ್ಲಿ ಭಾರತದ  ಹೆಜ್ಜೆಗಳು ಮತ್ತು ನಮ್ಮ ಉಪಕ್ರಮಗಳಾದ ಐಎಸ್ಎ, ಸಿಡಿಆರ್ ಐ, ಲೈಫ್ ಮತ್ತು ಒಎಸ್ ಒಡಬ್ಲೂ ಒಜಿ ಅವುಗಳನ್ನು ಪ್ರಮುಖವಾಗಿ ಉಲ್ಲೇಖಿಸಿದರು.

ನಾಯಕರು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

Click here to read full text of speech at 20th ASEAN-India Summit

Click here to read full text of speech at 18th East Asia Summit

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi