ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜೂನ್ 14ರಂದು ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಉಕ್ರೇನ್ ಅಧ್ಯಕ್ಷ ಘನತೆವೆತ್ತ ಶ್ರೀ ವೊಲೊಡಿಮಿರ್ ಜೆಲೆನ್ಸ್ಕಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮೂರನೇ ಅವಧಿಗೆ ತಾವು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅಧ್ಯಕ್ಷ ಜೆಲೆನ್ಸ್ಕಿ ಅವರು ಆತ್ಮೀಯ ಶುಭಾಶಯಗಳನ್ನು ಕೋರಿದ್ದು, ಅದಕ್ಕಾಗಿ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು.
ಇಬ್ಬರೂ ನಾಯಕರು ಫಲಪ್ರದ ಮಾತುಕತೆ/ಸಭೆ ನಡೆಸಿದರು, ಇದರಲ್ಲಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಉಕ್ರೇನ್ ಪರಿಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್ ಆಯೋಜಿಸಿರುವ ಮುಂಬರುವ ಶಾಂತಿ ಶೃಂಗಸಭೆಯ ಬಗ್ಗೆಯೂ ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಭಾರತ ಪ್ರೋತ್ಸಾಹಿಸುತ್ತದೆ ಎಂದು ಪ್ರಧಾನಿ ತಿಳಿಸಿದರು ಹಾಗು ಶಾಂತಿಯುತ ಪರಿಹಾರವನ್ನು ಬೆಂಬಲಿಸಲು ಭಾರತವು ತನ್ನ ವ್ಯಾಪ್ತಿಯಲ್ಲಿ ಶಕ್ತಿಮೀರಿ ಎಲ್ಲವನ್ನೂ ಮಾಡುವುದನ್ನು ಮುಂದುವರಿಸುತ್ತದೆ ಎಂದವರು ಪುನರುಚ್ಚರಿಸಿದರು.
ಇಬ್ಬರೂ ನಾಯಕರು ಸಂಪರ್ಕದಲ್ಲಿರಲು ಒಪ್ಪಿಕೊಂಡರು.
Had a very productive meeting with President Volodymyr Zelenskyy. India is eager to further cement bilateral relations with Ukraine. Regarding the ongoing hostilities, reiterated that India believes in a human-centric approach and believes that the way to peace is through… pic.twitter.com/XOKA0AHYGs
— Narendra Modi (@narendramodi) June 14, 2024
Провів дуже продуктивну зустріч з Президентом Володимиром Зеленським. Індія прагне і надалі зміцнювати двосторонні відносини з Україною. Зважаючи на триваючі бойові діі, повторив, що Індія вірить у людиноцентричний підхід та вважає, що шлях до миру лежить через діалог та… pic.twitter.com/t9x4VfuuSN
— Narendra Modi (@narendramodi) June 14, 2024