ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೈವ್ ನಲ್ಲಿ ಯುಕ್ರೇನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ವೊಲೊಡಿಮಿರ್ ಜೆಲೆನ್ಸ್ಕಿಯವರನ್ನು ಭೇಟಿ ಮಾಡಿದರು. ಮೇರಿನ್ಸ್ಕಿ ಅರಮನೆಗೆ ಆಗಮಿಸಿದ ಪ್ರಧಾನಿಯವರನ್ನು ಯುಕ್ರೇನ್ ಅಧ್ಯಕ್ಷರಾದ ಜೆಲೆನ್ಸ್ಕಿಯವರು ಸ್ವಾಗತಿಸಿದರು.
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ವ್ಯಾಪ್ತಿಯ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿದರು. ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಈ ಸಭೆಯ ನಂತರ, ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಹೇಳಿಕೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಈ ಭೇಟಿಯ ಸಂದರ್ಭದಲ್ಲಿ ಉಭಯ ನಾಯಕರು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದರು. ಅವುಗಳೆಂದರೆ, (i) ಕೃಷಿ ಮತ್ತು ಆಹಾರ ಕೈಗಾರಿಕಾ ಕ್ಷೇತ್ರದಲ್ಲಿ ಸಹಕಾರದ ಒಪ್ಪಂದ; (ii) ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳಿವಳಿಕಾ ಒಪ್ಪಂದ; (iii) ಹೆಚ್ಚಿನ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಭಾರತೀಯ ಮಾನವೀಯ ಅನುದಾನ ನೆರವು ಕುರಿತಾದ ತಿಳುವಳಿಕಾ ಒಡಂಬಡಿಕೆ; ಮತ್ತು (iv) 2024-2028ನೇ ಸಾಲಿನ ಸಾಂಸ್ಕೃತಿಕ ಸಹಕಾರ ಕಾರ್ಯಕ್ರಮ.