ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೈಜೀರಿಯಾ ಗಣರಾಜ್ಯ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಬೋಲಾ ಅಹ್ಮದ್ ತಿನುಬು ಅವರೊಂದಿಗೆ ಜಿ-20 ಶೃಂಗಸಭೆ ಅಂಗವಾಗಿ ನವದೆಹಲಿಯಲ್ಲಿ 2023 ಸೆಪ್ಟೆಂಬರ್ 10 ರಂದು ಸಭೆ ನಡೆಸಿದರು.
ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದ ಪ್ರಧಾನಮಂತ್ರಿ ಅವರನ್ನು ಅಧ್ಯಕ್ಷ ಶ್ರೀ ತಿನುಬು ಅಭಿನಂದಿಸಿದರು. ಜಿ-20 ಒಕ್ಕೂಟದಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವ ಕಲ್ಪಿಸಲು ಖಾತರಿ ನೀಡಿರುವ ಮತ್ತು ಜಾಗತಿಕ ದಕ್ಷಿಣ ಭಾಗದ ಹಿತಾಸಕ್ತಿಗೆ ಉತ್ತೇಜನ ನೀಡುತ್ತಿರುವ ಪ್ರಧಾನಮಂತ್ರಿಯವರಿಗೆ ಅವರು ಧನ್ಯವಾದ ಸಲ್ಲಿಸಿದರು.
ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ಕೃಷಿ, ಸಿರಿಧಾನ್ಯ, ಹಣಕಾಸು ತಂತ್ರಜ್ಞಾನ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ವಿವಿಧ ವಲಯಗಳಲ್ಲಿ ಉಭಯ ನಾಯಕರು ವಿಸ್ತೃತವಾಗಿ ಫಲಪ್ರದ ಮಾತುಕತೆ ನಡೆಸಿದರು.
It was a delight to meet President Bola Tinubu earlier today. Our talks were fruitful and will surely add momentum to the strong relations between India and Nigeria. Our key focus areas are trade and cultural exchanges. @officialABAT @NGRPresident pic.twitter.com/yDs5ZJk2cA
— Narendra Modi (@narendramodi) September 10, 2023