ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕದ ನ್ಯೂಯಾರ್ಕ್ ನಲ್ಲಿ ಅಮೆರಿಕದ ಬೌದ್ಧ ವಿದ್ವಾಂಸ, ಲೇಖಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ರಾಬರ್ಟ್ ಥುರ್ಮನ್ ಅವರನ್ನು ಭೇಟಿ ಮಾಡಿದರು.
ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಬೌದ್ಧ ಮೌಲ್ಯಗಳು ಹೇಗೆ ಮಾರ್ಗದರ್ಶಿ ಬೆಳಕಾಗಿ ಕಾರ್ಯನಿರ್ವಹಿಸಬಹುದು ಎಂಬುದರ ಕುರಿತು ಪ್ರಧಾನಿ ಮತ್ತು ಪ್ರೊಫೆಸರ್ ಥುರ್ಮನ್ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡರು. ಅವರು ಭಾರತದ ಬೌದ್ಧ ಸಂಪರ್ಕ ಮತ್ತು ಬೌದ್ಧ ಪರಂಪರೆಯ ಸಂರಕ್ಷಣೆಗಾಗಿ ಭಾರತವು ಮಾಡುತ್ತಿರುವ ಪ್ರಯತ್ನಗಳ ಬಗ್ಗೆಯೂ ಚರ್ಚಿಸಿದರು.
The interaction with @BobThurman was outstanding. I admire his passion towards research and scholarship on aspects relating to Buddhism. I highlighted India’s Buddhist heritage and how Buddhism can help overcome many challenges our world faces. pic.twitter.com/Bpsee2oYOy
— Narendra Modi (@narendramodi) June 21, 2023