ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 15ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ 2023ರ ಆಗಸ್ಟ್ 23ರಂದು ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಸಿರಿಲ್ ರಾಮಫೋಸಾ ಅವರನ್ನು ಭೇಟಿ ಮಾಡಿದರು.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. ಈ ಇಬ್ಬರೂ ನಾಯಕರು ರಕ್ಷಣೆ, ಕೃಷಿ, ವ್ಯಾಪಾರ ಮತ್ತು ಹೂಡಿಕೆ, ಆರೋಗ್ಯ, ಸಂರಕ್ಷಣೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಉಭಯ ದೇಶಗಳು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಉಭಯ ದೇಶಗಳು ಬಹುಪಕ್ಷೀಯ ಸಂಸ್ಥೆಗಳಲ್ಲಿ ನಿರಂತರ ಸಮನ್ವಯ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಅಧ್ಯಕ್ಷ ರಮಾಫೋಸಾ ಅವರು ಭಾರತದ ಜಿ-20ರ ಅಧ್ಯಕ್ಷತೆಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ, ಆಫ್ರಿಕನ್ ಒಕ್ಕೂಟಕ್ಕೆ ಜಿ-20ರ ಪೂರ್ಣ ಸದಸ್ಯತ್ವವನ್ನು ನೀಡಿದ ಭಾರತದ ಉಪಕ್ರಮವನ್ನು ಶ್ಲಾಘಿಸಿದರು. ಜಿ-20ರ ಶೃಂಗಸಭೆಗಾಗಿ ನವದೆಹಲಿಗೆ ಭೇಟಿ ನೀಡಲು ತಾವು ಉತ್ಸುಕರಾಗಿರುವುದಾಗಿ ಅಧ್ಯಕ್ಷ ರಮಾಫೋಸಾ ಅವರು ತಿಳಿಸಿದರು.
ಬ್ರಿಕ್ಸ್ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ರಮಾಫೋಸಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದರು. ಪರಸ್ಪರ ಅನುಕೂಲಕರವಾದ ದಿನಾಂಕದಂದು ದಕ್ಷಿಣ ಆಫ್ರಿಕಾಕ್ಕೆ ಅಧಿಕೃತ ಭೇಟಿ ನೀಡುವಂತೆ ಅಧ್ಯಕ್ಷ ರಮಾಫೋಸಾ ಅವರ ಆಹ್ವಾನವನ್ನು ಪ್ರಧಾನಮಂತ್ರಿಯವರು ಸ್ವೀಕರಿಸಿದರು.
Had an excellent meeting with President @CyrilRamaphosa. We discussed a wide range of issues aimed at deepening India-South Africa relations. Trade, defence and investment linkages featured prominently in our discussions. We will keep working together to strengthen the voice of… pic.twitter.com/xhxEClr1Dl
— Narendra Modi (@narendramodi) August 23, 2023