ಆಸ್ಟ್ರಿಯಾದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಯೆನ್ನಾದಲ್ಲಿ ಸಭೆ ನಡೆಸಿದರು. ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಆಸ್ಟ್ರಿಯಾದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರು ಅಭಿನಂದಿಸಿದರು.
ಉಭಯ ದೇಶಗಳು ತಮ್ಮ ರಾಜತಾಂತ್ರಿಕ ಬಾಂಧವ್ಯದ 75 ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಆಸ್ಟ್ರಿಯಾ ಭೇಟಿಯು ಐತಿಹಾಸಿಕ ಮತ್ತು ಅತ್ಯಂತ ವಿಶೇಷವಾಗಿದೆ. ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಪರಿಸರ ಸುಸ್ಥಿರತೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧದ ಆಲೋಚನೆಗಳನ್ನು ಉಭಯ ನಾಯಕರು ಹಂಚಿಕೊಂಡರು. ಈ ನಿಟ್ಟಿನಲ್ಲಿ, ಉಭಯ ನಾಯಕರು ನವೀಕರಿಸಬಹುದಾದ ಶಕ್ತಿ, ವಿಶೇಷವಾಗಿ ಸೌರ, ಜಲ ಮತ್ತು ಜೈವಿಕ ಇಂಧನಗಳಂತಹ ಕ್ಷೇತ್ರಗಳಲ್ಲಿ ಪರಸ್ಪರ ಪ್ರಯೋಜನಕಾರಿ ಅವಕಾಶಗಳ ಕುರಿತು ಚರ್ಚಿಸಿದರು.
ತಮ್ಮ ಅನುಕೂಲಕ್ಕೆ ತಕ್ಕಂತೆ ಲಭ್ಯ ಸಮಯಾನುಸಾರವಾಗಿ ಭಾರತಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಶ್ರೀ ವ್ಯಾನ್ ಡೆರ್ ಬೆಲ್ಲೆನ್ ಅವರಿಗೆ ಪ್ರಧಾನಮಂತ್ರಿಯವರು ಆಹ್ವಾನವನ್ನು ಪುನರುಚ್ಚರಿಸಿದರು.
Had a very good meeting with Federal President Alexander Van der Bellen and discussed ways to expand India-Austria cooperation. @vanderbellen pic.twitter.com/mrCtr0mg28
— Narendra Modi (@narendramodi) July 10, 2024
Hatte ein sehr gutes Treffen mit Bundespräsident Alexander Van der Bellen und wir diskutierten über die Möglichkeiten zum Ausbau der indisch-österreichischen Zusammenarbeit. @vanderbellen pic.twitter.com/ZWJgxeDT1z
— Narendra Modi (@narendramodi) July 10, 2024