ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕದ ಖ್ಯಾತ ಖಗೋಳ ಭೌತಶಾಸ್ತ್ರಜ್ಞ, ಲೇಖಕ ಮತ್ತು ವಿಜ್ಞಾನ ಸಂವಹನಕಾರ ಶ್ರೀ ನೀಲ್ ಡಿ ಗ್ರಾಸ್ ಟೈಸನ್ ಅವರನ್ನು ನ್ಯೂಯಾರ್ಕ್ ನಲ್ಲಿಂದು ಭೇಟಿಯಾದರು.
ಯುವಕರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕುರಿತು ಪ್ರಧಾನ ಮಂತ್ರಿ ಮೋದಿ ಮತ್ತು ಶ್ರೀ ಟೈಸನ್ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತವು ಕೈಗೊಳ್ಳುತ್ತಿರುವ ವಿವಿಧ ಬಾಹ್ಯಾಕಾಶ ಪರಿಶೋಧನಾ ಕಾರ್ಯಾಚರಣೆಗಳು ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ತ್ವರಿತ ಪ್ರಗತಿ ಕುರಿತು ಅವರು ಸುದೀರ್ಘವಾಗಿ ಚರ್ಚಿಸಿದರು.
ಭಾರತದಲ್ಲಿ ಹೊಸದಾಗಿ ಪ್ರಾರಂಭಿಸಲಾದ ರಾಷ್ಟ್ರೀಯ ಬಾಹ್ಯಾಕಾಶ ನೀತಿಯ ಅಡಿ, ಖಾಸಗಿ ಮತ್ತು ಶೈಕ್ಷಣಿಕ ವಲಯದ ಸಹಭಾಗಿತ್ವಕ್ಕೆ ಇರುವ ಅವಕಾಶಗಳ ಕುರಿತು ಪ್ರಧಾನ ಮಂತ್ರಿ ಮತ್ತು ಶ್ರೀ ಟೈಸನ್ ಅವರು ಚರ್ಚಿಸಿದರು.
Talked space, science and related issues with @neiltyson. Highlighted steps India is taking to reform the space sector and draw more youngsters towards science as well as innovation. pic.twitter.com/aeOuXEjEau
— Narendra Modi (@narendramodi) June 21, 2023