ಕೈರೋ ರಾಷ್ಟ್ರ ಪ್ರವಾಸಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಜಿಫ್ಟ್‌ನ ಪ್ರಧಾನಮಂತ್ರಿ ನೇತೃತ್ವದ ಈಜಿಫ್ಟ್ ಸಂಪುಟದ “ಭಾರತೀಯ ಘಟಕ’ವನ್ನು 2023ರ ಜೂನ್ 24ರಂದು ಭೇಟಿ ಮಾಡಿದ್ದರು. 2023ರ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಈಜಿಫ್ಟ್‌ ಅಧ್ಯಕ್ಷ ಘನತೆವೆತ್ತ ಶ್ರೀ ಅಬ್ದೆಲ್‌ ಫತ್ಹಾ ಇಲ್ ಸಿಸಿ ಅವರು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ನಂತರ ಈ ಭಾರತೀಯ ಘಟಕವನ್ನು ಸ್ಥಾಪಿಸಿದ್ದರು. ಈ ಭಾರತೀಯ ಘಟಕದ ನೇತೃತ್ವವನ್ನು ಈಜಿಫ್ಟ್‌ ಪ್ರಧಾನಮಂತ್ರಿ ಗೌರವಾನ್ವಿತ ಮುಸ್ತಾಫಾ ಮಡ್ ಬೌಲಿ ವಹಿಸಿದ್ದು, ಅದರಲ್ಲಿ ಹಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳಿದ್ದಾರೆ. 

ಪ್ರಧಾನಮಂತ್ರಿ ಮಡ್ ಬೌಲಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಭಾರತ ಘಟಕ ಕೈಗೊಂಡಿರುವ ಚಟುವಟಿಕೆಗಳನ್ನು ಮತ್ತು ಉದ್ದೇಶಿತ ಹೊಸ ಸಹಕಾರ ವಲಯಗಳ ಕುರಿತು ವಿವರಿಸಿದರು. ಭಾರತೀಯ ಸಹವರ್ತಿಗಳಿಂದ ಸಾಕಾರಾತ್ಮಕ ಸ್ಪಂದನೆಯನ್ನು ಶ್ಲಾಘಿಸಿದ ಅವರು, ಹಲವು ವಲಯಗಳಲ್ಲಿ ಭಾರತ-ಈಜಿಫ್ಟ್ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದರು. 

ಪ್ರಧಾನಮಂತ್ರಿ ಅವರು ಭಾರತೀಯ ಘಟಕವನ್ನು ಸ್ಥಾಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭಾರತೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸಲು ಈ “ಸಮಗ್ರ ಸರ್ಕಾರದ ವಿಧಾನವನ್ನು’’ ಸ್ವಾಗತಿಸಿದರು ಮತ್ತು ಪರಸ್ಪರ ಆಸಕ್ತಿಯ ನಾನಾ ಕ್ಷೇತ್ರಗಳಲ್ಲಿ ಈಜಿಫ್ಟ್ ನೊಂದಿಗೆ ವ್ಯಾಪಾರ ಮತ್ತು ಹೂಡಿಕೆ, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್‌, ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಪಾವತಿ ವೇದಿಕೆ, ಫಾರ್ಮಾ ಮತ್ತು ಜನರ ನಡುವಿನ ಸಂಪರ್ಕ ಸಂಬಂಧಗಳಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲವರ್ಧನೆಗೊಳಿಸುವ ಮಾರ್ಗೋಪಾಯಗಳ ಕುರಿತು ಚರ್ಚೆ ನಡೆದವು. 
 
ಪ್ರಧಾನಮಂತ್ರಿ ಮಡ್ ಬೌಲಿ ಅವರಲ್ಲದೆ, ಈಜಿಫ್ಟ್ ಸಂಪುಟದ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಅವರಲ್ಲಿ ಈ ಕೆಳಗಿನವರು ಸೇರಿದ್ದಾರೆ.

ಗೌರವಾನ್ವಿತ ಡಾ.ಮೊಹಮ್ಮದ್ ಶೇಖರ್ ಎಲ್ ಮರ್ಕಬಿ, ಇಂಧನ ಮತ್ತು ನವೀಕರಿಸಬಹುದಾದ ಇಂಧನ ಸಚಿವರು 

ಗೌರವಾನ್ವಿತ ಶ್ರೀ ಸಮೇಹ್ ಶೌಕ್ರಿ, ವಿದೇಶಾಂಗ ವ್ಯವಹಾರಗಳ ಸಚಿವರು

ಗೌರವಾನ್ವಿತ ಡಾ. ಹಲಾ ಅಲ್-ಸೈದಗ್, ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವರು

ಗೌರವಾನ್ವಿತ ಡಾ. ರಾನಿಯಾ ಅಲ್ ಮಶತ್ , ಅಂತಾರಾಷ್ಟ್ರೀಯ ಸಹಕಾರ ಸಚಿವರು

ಗೌರವಾನ್ವಿತ ಡಾ. ಮೊಹಮದ್ ಮೈತ್, ಹಣಕಾಸು ಸಚಿವರು

ಗೌರವಾನ್ವಿತ ಡಾ. ಅಮರ್ ತಲಾತ್, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ 

ಗೌರವಾನ್ವತ ಅಹಮದ್ ಸಮೀರ್, ಕೈಗಾರಿಕೆ ಮತ್ತು ವ್ಯಾಪಾರ ಸಚಿವರು  

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's manufacturing sector showed robust job creation, December PMI at 56.4

Media Coverage

India's manufacturing sector showed robust job creation, December PMI at 56.4
NM on the go

Nm on the go

Always be the first to hear from the PM. Get the App Now!
...
Prime Minister greets on the occasion of Urs of Khwaja Moinuddin Chishti
January 02, 2025

The Prime Minister, Shri Narendra Modi today greeted on the occasion of Urs of Khwaja Moinuddin Chishti.

Responding to a post by Shri Kiren Rijiju on X, Shri Modi wrote:

“Greetings on the Urs of Khwaja Moinuddin Chishti. May this occasion bring happiness and peace into everyone’s lives.