ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರಲ್ ಎಲೆಕ್ಟ್ರಿಕ್‌ನ ಸಿಇಒ ಹೆಚ್. ಲಾರೆನ್ಸ್ ಕಲ್ಪ್ ಜೂನಿಯರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಭಾರತದಲ್ಲಿ ಉತ್ಪಾದನೆಯ ದೀರ್ಘಾವಧಿಯ ಬದ್ಧತೆ ತೋರಿಸುತ್ತಿರುವ ಜನರಲ್ ಎಲೆಕ್ಟ್ರಿಕ್(GE) ಸಂಸ್ಥೆಯನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಭಾರತದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ಜನರಲ್ ಎಲೆಕ್ಟ್ರಿಕ್ ನ ಹೆಚ್ಚಿನ ತಂತ್ರಜ್ಞಾನದ ಸಹಯೋಗದ ಕುರಿತು ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮತ್ತು ಕಲ್ಪ್ ಜೂನಿಯರ್ ಚರ್ಚೆ ನಡೆಸಿದರು.
ಭಾರತದಲ್ಲಿ ವಾಯುಯಾನ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುವಂತೆ ಪ್ರಧಾನಮಂತ್ರಿಯವರು ಇದೇ ವೇಳೆ ಜೆಇಯನ್ನು ಆಹ್ವಾನಿಸಿದರು.
PM @narendramodi held productive discussions with CEO of @generalelectric, H. Lawrence Culp, Jr. They discussed GE’s greater technology collaboration to promote manufacturing in India. pic.twitter.com/v116lzVuaR
— PMO India (@PMOIndia) June 22, 2023