ಅಮೆರಿಕದ ತಂತ್ರಜ್ಞಾನ ವಲಯದ ದಿಗ್ಗಜ, ಖ್ಯಾತ ಉದ್ಯಮಿ ಮತ್ತು ಟೆಸ್ಲಾ ಇನ್ ಕಾರ್ಪೊರೇಷನ್ & ಸ್ಪೇಸ್ಎಕ್ಸ್ ಸಿಇಒ, ಸಿಟಿಒ ಮಾಲೀಕ, ಮತ್ತು ಟ್ವಿಟರ್ ಅಧ್ಯಕ್ಷ, ಬೋರಿಂಗ್ ಕಂಪನಿ ಮತ್ತು ಎಕ್ಸ್-ಕಾರ್ಪ್ ಸಂಸ್ಥಾಪಕ, ನ್ಯೂರಾಲಿಂಕ್ ಮತ್ತು ಒಪನ್ಎಐ ಸಹಸಂಸ್ಥಾಪಕ. ಶ್ರೀ ಎಲೋನ್ ಮಸ್ಕ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಯಾರ್ಕ್ ನಲ್ಲಿಂದು ಭೇಟಿಯಾದರು;
ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನವನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವಲ್ಲಿ ಶ್ರೀ ಮಸ್ಕ್ ಅವರು ನಡೆಸಿರುವ ಅನೇಕ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತದಲ್ಲಿ ಇರುವ ವಿಫುಲ ಅವಕಾಶಗಳನ್ನು ಅನ್ವೇಷಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಸ್ಕ್ ಅವರನ್ನು ಆಹ್ವಾನಿಸಿದರು.