ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನ್ಯೂಯಾರ್ಕ್ನಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಖ್ಯಾತ ಶಿಕ್ಷಣ ತಜ್ಞರ ಗುಂಪಿನ ಜತೆ ಮಾತುಕತೆ ನಡೆಸಿದರು. ಕೃಷಿ, ಮಾರುಕಟ್ಟೆ, ಇಂಜಿನಿಯರಿಂಗ್, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಿಂದ ಶಿಕ್ಷಣತಜ್ಞರು ಇದರಲ್ಲಿದ್ದರು.
ಭಾರತದ ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಸಂಶೋಧನಾ ಸಹಯೋಗಗಳನ್ನು ಮತ್ತು ಶೈಕ್ಷಣಿಕ ವಿನಿಮಯ ಹೆಚ್ಚಿಸುವ ಸಾಧ್ಯತೆಗಳ ಕುರಿತು ಚರ್ಚಿಸಿದರು.
ಶಿಕ್ಷಣ ತಜ್ಞರು ತಮ್ಮ ಪರಿಣತಿಯ ಕ್ಷೇತ್ರಗಳ ದೃಷ್ಟಿಕೋನಗಳು ಮತ್ತು ಅನುಭವಗಳನ್ನು ಪ್ರಧಾನಮಂತ್ರಿ ಅವರೊಂದಿಗೆ ಹಂಚಿಕೊಂಡರು.
ಸಂವಾದದಲ್ಲಿ ಭಾಗವಹಿಸಿದ ಶಿಕ್ಷಣ ತಜ್ಞರ ವಿವರಗಳು ಈ ಕೆಳಗಿನಂತಿವೆ:
* ಶ್ರೀಮತಿ ಚಂದ್ರಿಕಾ ಟಂಡನ್, ಮಂಡಳಿಯ ಅಧ್ಯಕ್ಷರು, NYU ಟಂಡನ್ ಸ್ಕೂಲ್ ಆಫ್ ಇಂಜಿನಿಯರಿಂಗ್
* ಡಾ.ನೀಲಿ ಬೆಂಡಪುಡಿ, ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಅಧ್ಯಕ್ಷೆ
* ಡಾ. ಪ್ರದೀಪ್ ಖೋಸ್ಲಾ, ಕುಲಪತಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್ ಡಿಯಾಗೋ
* ಡಾ. ಸತೀಶ್ ತ್ರಿಪಾಠಿ, ಬಫಲೋ ವಿಶ್ವವಿದ್ಯಾಲಯದ ಅಧ್ಯಕ್ಷ
* ಪ್ರೊಫೆಸರ್ ಜಗಮೋಹನ್ ರಾಜು, ಮಾರ್ಕೆಟಿಂಗ್ ಪ್ರೊಫೆಸರ್, ವಾರ್ಟನ್ ಸ್ಕೂಲ್ ಆಫ್ ಬಿಸಿನೆಸ್, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ
* ಡಾ. ಮಾಧವ್ ವಿ. ರಾಜನ್, ಡೀನ್, ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್, ಷಿಕಾಗೋ ವಿಶ್ವವಿದ್ಯಾಲಯ
* ಪ್ರೊಫೆಸರ್ ರತ್ತನ್ ಲಾಲ್, ಯುನಿವರ್ಸಿಟಿ ಪ್ರೊಫೆಸರ್ ಆಫ್ ಸಾಯಿಲ್ ಸೈನ್ಸ್; ನಿರ್ದೇಶಕ, CFAES ರಟ್ಟನ್ ಲಾಲ್ ಸೆಂಟರ್ ಫಾರ್ ಕಾರ್ಬನ್ ಮ್ಯಾನೇಜ್ಮೆಂಟ್ ಮತ್ತು ಸೀಕ್ವೆಸ್ಟ್ರೇಶನ್, ಓಹಿಯೋ ಯೂನಿವರ್ಸಿಟಿ
* ಡಾ. ಅನುರಾಗ್ ಮೈರಾಲ್, ಕಾರ್ಡಿಯೋ ವಾಸ್ಕುಲರ್ ಮೆಡಿಸಿನ್ನ ಅಡ್ಜಂಕ್ಟ್ ಪ್ರೊಫೆಸರ್, ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿ ಮತ್ತು ಫ್ಯಾಕಲ್ಟಿ ಫೆಲೋ ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಇನ್ನೋವೇಶನ್ ಮತ್ತು ಗ್ಲೋಬಲ್ ಹೆಲ್ತ್ ಸೆಂಟರ್ನಲ್ಲಿ ಟೆಕ್ನಾಲಜಿ ಇನ್ನೋವೇಶನ್ ಮತ್ತು ಇಂಪ್ಯಾಕ್ಟ್ ಮುಖ್ಯಸ್ಥರು.