"ಈ ಸಂದರ್ಭವು 75 ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಭಾರತದ ನಾರಿ ಶಕ್ತಿಗೆ ಸಮರ್ಪಣೆ ಎನ್ನುವ ಎರಡು ಕಾರಣಗಳಿಂದ ವಿಶೇಷವಾಗಿದೆ."
"ರಾಷ್ಟ್ರೀಯ ಹೆಣ್ಣುಮಕ್ಕಳ ದಿವಸ, ಭಾರತದ ಹೆಣ್ಣುಮಕ್ಕಳ ಧೈರ್ಯ, ದೃಢತೆ ಮತ್ತು ಸಾಧನೆಗಳ ಆಚರಣೆಯಯಾಗಿದೆ"
"ಜನ ನಾಯಕ ಕರ್ಪೂರಿ ಠಾಕೂರ್ ಅವರ ಸಂಪೂರ್ಣ ಜೀವನವು ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಉನ್ನತಿಗಾಗಿ ಮೀಸಲಾಗಿತ್ತು"
“ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಯಾಣ ಮಾಡುವುದು ಪ್ರತಿಯೊಬ್ಬ ನಾಗರಿಕನಿಗೂ ಹೊಸ ಅನುಭವಗಳನ್ನು ಸೃಷ್ಟಿಸುತ್ತದೆ. ಇದು ಭಾರತದ ವಿಶೇಷತೆ"
"ನಾನು ಜೆನ್ ಝೀ ಯನ್ನು , ಅಮೃತ್ ಜನರೇಷನ್ ಎಂದು ಕರೆಯಲು ಬಯಸುತ್ತೇನೆ"
"ಇದೇ ಸಮಯ, ಸರಿಯಾದ ಸಮಯ, ಇದು ನಿಮ್ಮ ಸಮಯ "
"ಪ್ರೇರಣೆ ಕೆಲವೊಮ್ಮೆ ಕುಂಠಿತವಾಗಬಹುದು, ಆದರೆ ಶಿಸ್ತು ನಿಮ್ಮನ್ನು ಸರಿಯಾದ ಹಾದಿಯಲ್ಲಿ ಇರಿಸುತ್ತದೆ"
“ಯುವಕರು ‘ಮೈ ಯುವ ಭಾರತ್’ ವೇದಿಕೆಯಲ್ಲಿ ‘ಮೈ ಭಾರತ್’ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಬೇಕು”
"ಇಂದಿನ ಯುವ ಪೀಳಿಗೆ ನಮೋ ಆ್ಯಪ್ ಮೂಲಕ ನಿರಂತರವಾಗಿ ನನ್ನೊಂದಿಗೆ ಸಂಪರ್ಕದಲ್ಲಿರಬಹುದು"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎನ್ ಸಿಸಿ  ಕೆಡೆಟ್ ಗಳು ಮತ್ತು ಎನ್ ಎಸ್ ಎಸ್  ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಣಿ ಲಕ್ಷ್ಮಿ ಬಾಯಿಯವರ ಜೀವನವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ಇದು ಇಂದು ಭಾರತದ ಇತಿಹಾಸವನ್ನು ಜೀವಂತಗೊಳಿಸಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಂಡದ ಶ್ರಮವನ್ನು ಶ್ಲಾಘಿಸಿದ ಅವರು ಈಗ ಗಣರಾಜ್ಯೋತ್ಸವ ಪರೇಡ್ ನ ಭಾಗವಾಗಲಿದ್ದಾರೆ ಎಂದು ಹೇಳಿದರು. "ಈ ಸಂದರ್ಭವು 75 ನೇ ಗಣರಾಜ್ಯೋತ್ಸವ ಆಚರಣೆ  ಮತ್ತು ಭಾರತದ ನಾರಿ ಶಕ್ತಿಗೆ ಇದು ಸಮರ್ಪಣೆ ಎನ್ನುವ ಎರಡು ಕಾರಣಗಳಿಂದ ವಿಶೇಷವಾಗಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದಾದ್ಯಂತದ ಭಾಗವಹಿಸುವ ಮಹಿಳೆಯರನ್ನು ಉಲ್ಲೇಖಿಸಿ, ಶ್ರೀ ಮೋದಿ ಅವರು ಇಲ್ಲಿ ಒಬ್ಬಂಟಿಯಾಗಿ ಬಂದಿಲ್ಲ ಜೊತೆಗೆ  ತಮ್ಮ ರಾಜ್ಯಗಳ ಸತ್ವ, ಅವರ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಅವರ ಸಮಾಜಗಳ ಮುಂದಾಲೋಚನೆಯನ್ನು ತಂದಿದ್ದಾರೆ ಎಂದು ಹೇಳಿದರು. ಇಂದಿನ ಮತ್ತೊಂದು ವಿಶೇಷ ಸಂದರ್ಭವನ್ನು ಗಮನಿಸಿದ ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ (ರಾಷ್ಟ್ರೀಯ ಬಾಲಿಕಾ ದಿವಸ್)  ಬಗ್ಗೆ  ಪ್ರಸ್ತಾಪಿಸಿದರು, ಇದು ಅವರ ಧೈರ್ಯ, ದೃಢತೆ ಮತ್ತು ಸಾಧನೆಗಳ ಆಚರಣೆಯಾಗಿದೆ. "ಭಾರತದ ಹೆಣ್ಣುಮಕ್ಕಳು ಒಳ್ಳೆಯದಕ್ಕಾಗಿ ಸಮಾಜವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದ ಪ್ರಧಾನಮಂತ್ರಿಯವರು ಇಂದಿನ ಸಾಂಸ್ಕೃತಿಕ ಪ್ರದರ್ಶನದಲ್ಲಿ  ಕಂಡಂತೆ ವಿವಿಧ ಐತಿಹಾಸಿಕ ಕಾಲಘಟ್ಟಗಳಲ್ಲಿ ಸಮಾಜಕ್ಕೆ ಅಡಿಪಾಯವನ್ನು ಹಾಕುವಲ್ಲಿ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸಿದರು.

 

ಜನ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ, ಇದು ಸರ್ಕಾರದ ಸೌಭಾಗ್ಯ ಎಂದು ಬಣ್ಣಿಸಿದರು  ಮತ್ತು ಇಂದಿನ ಯುವ ಪೀಳಿಗೆ ಮಹಾನ್ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಕಡು ಬಡತನ ಮತ್ತು ಸಾಮಾಜಿಕ ಅಸಮಾನತೆಯ ನಡುವೆಯೂ ಅವರು ಮುಖ್ಯಮಂತ್ರಿಯಾದರು ಮತ್ತು ಯಾವಾಗಲೂ ತಮ್ಮ ವಿನಮ್ರತೆಯನ್ನು ಕಾಯ್ದುಕೊಂಡರು ಎಂದು ಪ್ರಧಾನ ಮಂತ್ರಿಯವರು ಅವರ  ಬೆಳವಣಿಗೆಯನ್ನು ಸ್ಮರಿಸಿದರು. "ಅವರ ಸಂಪೂರ್ಣ ಜೀವನವು ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ  ವರ್ಗಗಳ ಉನ್ನತಿಗಾಗಿ ಸಮರ್ಪಿತವಾಗಿತ್ತು" ಎಂದು ಪ್ರಧಾನಮಂತ್ರಿಯವರು ಹೇಳಿದರು. ಬಡವರ ಮೇಲೆ ಕೇಂದ್ರೀಕರಿಸುವುದು ಮತ್ತು ಕಟ್ಟಕಡೆಯ ಫಲಾನುಭವಿಯನ್ನು ತಲುಪಲು ವಿಕಸಿತ ಭಾರತ ಸಂಕಲ್ಪ ಯಾತ್ರೆಯಂತಹ ಸರ್ಕಾರದ ಉಪಕ್ರಮಗಳು ಕರ್ಪೂರ್ ಠಾಕೂರ್ ಅವರ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಶ್ರೀ ಮೋದಿ ಹೇಳಿದರು.

ಅನೇಕರು ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಗಣರಾಜ್ಯೋತ್ಸವ ಆಚರಣೆಗಳಿಗಾಗಿ ತಮ್ಮ ಉತ್ಸಾಹ ಮತ್ತು ಉಲ್ಲಾಸವನ್ನು ಹಂಚಿಕೊಂಡಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ದೆಹಲಿಯಲ್ಲಿನ ತೀವ್ರ ಚಳಿಗಾಲದ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ   ಪ್ರಧಾನಮಂತ್ರಿಯವರು ಪಾಲ್ಗೊಂಡಿರುವ ಅನೇಕರು  ಮೊದಲ ಬಾರಿಗೆ ಇಂತಹ ಹವಾಮಾನವನ್ನು ಅನುಭವಿಸುತ್ತಿದ್ದಾರೆ ಎಂದರು ಮತ್ತು ವಿವಿಧ ಪ್ರದೇಶಗಳಲ್ಲಿನ ಭಾರತದ ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳ ಬಗ್ಗೆ   ಹೇಳಿದರು. ಅಂತಹ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲೂ ಅಭ್ಯಾಸ ಮಾಡುವ ಅವರ ಬದ್ಧತೆಯನ್ನು ಮತ್ತು ಅವರ ಇಂದಿನ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಅವರು ಮನೆಗೆ ಹಿಂದಿರುಗುವಾಗ  ಗಣರಾಜ್ಯೋತ್ಸವದ ಒಂದು ಭಾಗವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಪ್ರಧಾನಮಂತ್ರಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. "ಇದು ಭಾರತದ ವಿಶೇಷತೆ", "ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡುವುದು ಪ್ರತಿಯೊಬ್ಬ ನಾಗರಿಕರಿಗೂ ಹೊಸ ಅನುಭವಗಳನ್ನು ಸೃಷ್ಟಿಸುತ್ತದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.

 

"ಈಗಿನ ಪೀಳಿಗೆಯನ್ನು ಜೆನ್ ಝೀ  ಎಂದು ಉಲ್ಲೇಖಿಸಲಾಗಿದ್ದರೂ ಸಹ, ನಾನು ನಿಮ್ಮನ್ನು ಅಮೃತ್ ಜನರೇಷನ್ ಎಂದು ಕರೆಯಲು ಬಯಸುತ್ತೇನೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಇಂದಿನ ಪೀಳಿಗೆಯ ಶಕ್ತಿಯೇ ಅಮೃತ ಕಾಲದಲ್ಲಿ ರಾಷ್ಟ್ರದ ಪ್ರಗತಿಗೆ ಉತ್ತೇಜನ ನೀಡಲಿದೆ ಎಂದು ಅವರು ಒತ್ತಿ ಹೇಳಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆನ್ನುವ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಇಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಮುಂದಿನ 25 ವರ್ಷಗಳ ಮಹತ್ವವನ್ನು ಒತ್ತಿ ಹೇಳಿದರು. "ಅಮೃತ ಪೀಳಿಗೆಯ ಎಲ್ಲಾ ಕನಸುಗಳನ್ನು ಈಡೇರಿಸುವುದು, ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಅವರ ಹಾದಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವುದು ಸರ್ಕಾರದ ಸಂಕಲ್ಪವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಇಂದಿನ ಪ್ರದರ್ಶನದಲ್ಲಿ ಕಂಡುಬರುವ ಶಿಸ್ತು, ಕೇಂದ್ರೀಕೃತ ಮನಸ್ಥಿತಿ ಮತ್ತು ಸಮನ್ವಯತೆಯು ಅಮೃತ ಕಾಲದ ಕನಸುಗಳನ್ನು ನನಸಾಗಿಸಲು ಬುನಾದಿಯಾಗಿದೆ ಎಂದು ಅವರು ಹೇಳಿದರು.

‘Nation First’ ‘ದೇಶ ಮೊದಲು’ ಎನ್ನುವುದು ಅಮೃತ ಪೀಳಿಗೆಯ ಮಾರ್ಗದರ್ಶಿ ಸೂತ್ರವಾಗಬೇಕು ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಯುವ ಸಭಿಕರಿಗೆ ತಮ್ಮ ಜೀವನದಲ್ಲಿ ಹತಾಶೆಗೆ ಅವಕಾಶ ಎಂದಿಗೂ ಕೊಡಬೇಡಿ ಎಂದು ಪ್ರಧಾನಮಂತ್ರಿಯವರು ಹೇಳಿದರು. ಜೀವನದ ಪ್ರತಿ ಸಣ್ಣ ಕೊಡುಗೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಮೋದಿ, " ಇದೇ ಸಮಯ ಇದೇ ಸರಿಯಾದ ಸಮಯ, ಇದು ನಿಮ್ಮ ಸಮಯ" ಎಂದು ಒತ್ತಿ ಹೇಳಿದರು. ಪ್ರಸ್ತುತ ಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ವಿಕಸಿತ ಭಾರತ ಗುರಿಯನ್ನು ಸಾಧಿಸುವ ತಮ್ಮ ಸಂಕಲ್ಪಕ್ಕೆ ಶಕ್ತಿಯನ್ನು ನೀಡುವಂತೆ ಯುವಕರನ್ನು ಕೇಳಿಕೊಂಡರು. ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಲು ಹೇಳಿದರು ಇದರಿಂದ ಭಾರತೀಯ ಪ್ರತಿಭೆಗಳು ಜಗತ್ತಿಗೆ ಹೊಸ ದಿಕ್ಕನ್ನು ನೀಡಬಹುದು ಮತ್ತು ಹೊಸ ಸಾಮರ್ಥ್ಯಗಳನ್ನು ಗಳಿಸಬಹುದು ಇದರಿಂದ ಭಾರತವು ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಬಹುದು. ಯುವಕರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಹೊಸ ಮಾರ್ಗಗಳನ್ನು ಸೃಷ್ಟಿಸುವ ಹಂತಗಳನ್ನು ಅವರು ವಿವರಿಸಿದರು ಮತ್ತು ಹೊಸದಾಗಿ ತೆರೆದ ವಲಯಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ಬಗ್ಗೆ ಪ್ರಸ್ತಾಪಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವುದು, ವ್ಯಾಪಾರ ಮತ್ತು ವಾಣಿಜ್ಯವನ್ನು ಸುಗಮಗೊಳಿಸುವುದು, ರಕ್ಷಣಾ ಉದ್ಯಮದಲ್ಲಿ ಖಾಸಗಿ ವಲಯವನ್ನು ರಚಿಸುವುದು, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸುವುದು ಮತ್ತು 21 ನೇ ಶತಮಾನವನ್ನು ಪೂರೈಸಲು ಆಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ನಿರ್ಮಿಸುವ ಉದಾಹರಣೆಗಳನ್ನು ಶ್ರೀ ಮೋದಿ ಉಲ್ಲೇಖಿಸಿದರು. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ನಿರ್ದಿಷ್ಟ ಸ್ಟ್ರೀಮ್ ಅಥವಾ ವಿಷಯಕ್ಕೆ ಸೀಮಿತರಾಗದೇ ಇರಲು ಅನುಮತಿಸುವ ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆಯೂ ಪ್ರಧಾನಮಂತ್ರಿಯವರು ತಿಳಿಸಿದರು. ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಲು ಯುವಜನರನ್ನು ಉತ್ತೇಜಿಸಿದ ಪ್ರಧಾನಮಂತ್ರಿಯವರು ಸೃಜನಶೀಲತೆ ಮತ್ತು ನಾವೀನ್ಯತೆಗೆ ಪ್ರೇರಣೆ ನೀಡುವ ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಬಗ್ಗೆ ಹೇಳಿದರು . ಸೇನೆಗೆ ಸೇರುವ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ವಿದ್ಯಾರ್ಥಿನಿಯರಿಗೆ ಸರ್ಕಾರ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಒತ್ತಿ ಹೇಳಿದರು. "ಈಗ, ವಿದ್ಯಾರ್ಥಿನಿಯರನ್ನು ವಿವಿಧ ಸೈನಿಕ ಶಾಲೆಗಳಿಗೆ ಸೇರಿಸಬಹುದು" ಎಂದು ಹೇಳಿ ಪೂರ್ಣ ಆತ್ಮವಿಶ್ವಾಸದಿಂದ ಮುಂದುವರಿಯುವಂತೆ ಪ್ರಧಾನಮಂತ್ರಿಯವರು ಅವರಿಗೆ ತಿಳಿಸಿದರು. "ನಿಮ್ಮ ಪ್ರಯತ್ನಗಳು, ನಿಮ್ಮಗುರಿ, ನಿಮ್ಮ ಸಾಮರ್ಥ್ಯವು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ" ಎಂದು ಅವರು ಹೇಳಿದರು.

 

ಎಲ್ಲಾ ಸ್ವಯಂಸೇವಕರು ತಮ್ಮ ಶಕ್ತಿಯನ್ನು  ಸರಿಯಾದ ಸ್ಥಳದಲ್ಲಿ ಕೊಂಡೊಯ್ಯುತ್ತಿದ್ದಾರೆ  ಎಂದು ಪ್ರಧಾನಮಂತ್ರಿಯವರು ಹರ್ಷ ವ್ಯಕ್ತಪಡಿಸಿದರು. ಶಿಸ್ತಿನ ಪ್ರಜ್ಞೆಯುಳ್ಳ, ದೇಶದಲ್ಲಿ ಸಾಕಷ್ಟು ಪ್ರವಾಸ ಮಾಡುವ ಮತ್ತು ವಿವಿಧ ಭಾಷೆಗಳನ್ನು ಮಾತನಾಡುವ ವಿವಿಧ ಪ್ರದೇಶಗಳ ಸ್ನೇಹಿತರನ್ನು ಹೊಂದಿರುವ ವ್ಯಕ್ತಿಗೆ ವ್ಯಕ್ತಿತ್ವ ವಿಕಸನವಾಗುವುದ ಸಹಜ ಎಂದು ಅವರು ಹೇಳಿದರು.

"ಇದನ್ನು ಕಡಿಮೆ ಅಂದಾಜು ಮಾಡಬಾರದು" ಇದು ಜೀವನದ ಒಂದು ಪ್ರಮುಖ ಭಾಗವಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿದರು.  ಸದೃಢವಾಗಿರುವುದಕ್ಕೆ ಮೊದಲ ಆದ್ಯತೆ ನೀಡುವಂತೆಯೂ ಅವರು ಒತ್ತಾಯಿಸಿದರು. ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಶಿಸ್ತಿನ ಅಗತ್ಯದ ಬಗ್ಗೆ ಒತ್ತಿ ಹೇಳಿದರು . "ಪ್ರೇರಣೆಯು ಕೆಲವೊಮ್ಮೆ ಕುಂಠಿತವಾಗಬಹುದು, ಆದರೆ ಶಿಸ್ತು ನಿಮ್ಮನ್ನು ಸರಿಯಾದ ಹಾದಿಯಲ್ಲಿ ಇರಿಸುತ್ತದೆ." ಶಿಸ್ತೇ ಪ್ರೇರಣೆಯಾದರೆ ಪ್ರತಿಯೊಂದು ಕ್ಷೇತ್ರದಲ್ಲೂ ಗೆಲುವು ಖಚಿತ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಎನ್ ಸಿಸಿಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡತ್ತಾ ಪ್ರಧಾನಮಂತ್ರಿಯವರು, ಎನ್ ಸಿಸಿ, ಎನ್ಎಸ್ಎಸ್ ಅಥವಾ ಸಾಂಸ್ಕೃತಿಕ ಶಿಬಿರಗಳಂತಹ ಸಂಸ್ಥೆಗಳು ಯುವಜನರಿಗೆ ಸಮಾಜ ಮತ್ತು ನಾಗರಿಕ ಕರ್ತವ್ಯಗಳ ಬಗ್ಗೆ ಶಿಕ್ಷಣ ನೀಡುತ್ತವೆ ಎಂದು ಹೇಳಿದರು. ‘ಮೈ ಯುವ ಭಾರತ್’ಎನ್ನುವ ಸಂಸ್ಥೆಯನ್ನು ರಚಿಸಿರುವ ಕುರಿತು ಮಾಹಿತಿ ನೀಡಿದ ಅವರು, ಯುವಕರು ‘ಮೈ ಭಾರತ್ʼನಲ್ಲಿ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳುವಂತೆ ಒತ್ತಾಯಿಸಿದರು.

ಈ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ವಿವಿಧ ಕಾರ್ಯಕ್ರಮಗಳನ್ನು ನೋಡಲು, ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಮತ್ತು ತಜ್ಞರನ್ನು ಭೇಟಿ ಮಾಡಲು  ಇರುವ ಹಲವಾರು ಅವಕಾಶಗಳ ಬಗ್ಗೆ ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. “ಇದು ನಿಮ್ಮ ಜೀವನದುದ್ದಕ್ಕೂ ನೀವು ನೆನಪಿನಲ್ಲಿಟ್ಟುಕೊಳ್ಳುವ ಅನುಭವವಾಗಿರುತ್ತದೆ. ಪ್ರತಿ ವರ್ಷ ನೀವು ಗಣರಾಜ್ಯೋತ್ಸವದ ಪರೇಡ್ ಅನ್ನು ವೀಕ್ಷಿಸಿದಾಗ, ನೀವು ಈ ದಿನಗಳನ್ನು ನೆನಪಿಸಿಕೊಳ್ಳುತ್ತೀರಿ ಮತ್ತು ನಾನು ಇದನ್ನು ನಿಮಗೆ ಹೇಳಿದ್ದೆ ಎನ್ನುವುದನ್ನು ಎಂದು ನೀವು ನೆನೆಯುತ್ತೀರಿ” ಎಂದು ಶ್ರೀ ಮೋದಿ ಹೇಳಿದರು.  ಗಣರಾಜ್ಯೋತ್ಸವದ ಆಚರಣೆಯಿಂದಾಗುವ ಅನುಭವಗಳು ಮತ್ತು ಕಲಿಕೆಗಳನ್ನು ದಾಖಲಿಸಲು ಅವರು ಒತ್ತಾಯಿಸಿದರು, ಅದನ್ನು ನಮೋ ಅಪ್ಲಿಕೇಶನ್ ನಲ್ಲಿ ಲಿಖಿತರೂಪದಲ್ಲಿ ಅಥವಾ ವೀಡಿಯೊ ರೆಕಾರ್ಡಿಂಗ್ ನಲ್ಲಿ ತಮ್ಮೊಡನೆ  ಹಂಚಿಕೊಳ್ಳಬಹುದು. "ಇಂದಿನ ಯುವ ಪೀಳಿಗೆಯು ನಮೋ ಆ್ಯಪ್ ಮೂಲಕ ನಿರಂತರವಾಗಿ ನನ್ನೊಂದಿಗೆ ಸಂಪರ್ಕದಲ್ಲಿರಬಹುದು" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

 

ಭಾಷಣದ ಕೊನೆಯಲ್ಲಿ, ಪ್ರಧಾನಮಂತ್ರಿಯವರು ಯುವಕರ ಶಕ್ತಿಯಲ್ಲಿ ವಿಶ್ವಾಸ ಮತ್ತು ನಂಬಿಕೆಯನ್ನು ವ್ಯಕ್ತಪಡಿಸಿದರು. ಶ್ರಮವಹಿಸಿ ಅಧ್ಯಯನ ಮಾಡಿ, ಪ್ರಜ್ಞಾವಂತ ನಾಗರೀಕರಾಗಿ, ಪರಿಸರ ಸಂರಕ್ಷಿಸಿ, ದುಶ್ಚಟಗಳಿಂದ ದೂರವಿದ್ದು, ದೇಶದ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು ಎಂದು ಮನವಿ ಮಾಡಿದರು. ""ನಿಮಗೆ ನನ್ನ ಆಶೀರ್ವಾದಗಳು,  ನನ್ನ ಶುಭ ಹಾರೈಕೆಗಳು" ಎಂದು ಹೇಳುವ ಮೂಲಕ ಶ್ರೀ ಮೋದಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಮತ್ತಿತರರು ಉಪಸ್ಥಿತರಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mann Ki Baat: Who are Kari Kashyap and Punem Sanna? PM Modi was impressed by their story of struggle, narrated the story in Mann Ki Baat

Media Coverage

Mann Ki Baat: Who are Kari Kashyap and Punem Sanna? PM Modi was impressed by their story of struggle, narrated the story in Mann Ki Baat
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಡಿಸೆಂಬರ್ 2024
December 30, 2024

Citizens Appreciate PM Modis efforts to ensure India is on the path towards Viksit Bharat