ನಮಸ್ಕಾರ,

ಮೊದಲಿಗೆ ನಾನು ಪ್ರೊಫೆಸರ್ ಕ್ಲೌಸ್ ಶ್ವಾಬ್ ಮತ್ತು ವಿಶ್ವ ಆರ್ಥಿಕ ವೇದಿಕೆಯ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸಂಕಷ್ಟದ ಸಮಯದಲ್ಲೂ ಸಹ ನೀವು ವಿಶ್ವ ಆರ್ಥಿಕತೆಯ ಪ್ರಮುಖ ವೇದಿಕೆಯನ್ನು ಜೀವಂತವಾಗಿರಿಸಿದ್ದೀರಿ. ವಿಶ್ವದ ಆರ್ಥಿಕತೆ ಹೇಗೆ ಮುಂದುವರಿಯುತ್ತದೆ ಎಂಬ ಅತಿ ದೊಡ್ಡ ಪ್ರಶ್ನೆ ಉದ್ಭವಿಸಿರುವ ಸಮಯದಲ್ಲಿ ಎಲ್ಲರೂ ಸ್ವಾಭಾವಿಕವಾಗಿ ಈ ವೇದಿಕೆಯತ್ತ ನೋಡುತ್ತಿದ್ದಾರೆ.

ಮಿತ್ರರೇ,

ಈ ಆತಂಕದ ಸಮಯದ ನಡುವೆ ನಾನು 1.3 ಬಿಲಿಯನ್ ಭಾರತೀಯರ ವಿಶ್ವಾಸ, ಸಕಾರಾತ್ಮಕತೆ ಮತ್ತು ಭರವಸೆಯ ಸಂದೇಶವನ್ನು ತಂದಿದ್ದೇನೆ. ಕೊರೊನಾ ಘಟಿಸಿದ ಸಂದರ್ಭದಲ್ಲಿ ಭಾರತದ ಮುಂದೆ ದೊಡ್ಡ ಸವಾಲುಗಳಿದ್ದವು. ಕಳೆದ ವರ್ಷ ಫೆಬ್ರವರಿ – ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ವಿಶ್ವದ ಶ್ರೇಷ್ಠ ಗಣ್ಯರು ಮತ್ತು ಸಂಸ್ಥೆಗಳು ಹೇಳಿದ್ದನ್ನು ನಾನು ನೆನಪಿಸಿ ಕೊಳ್ಳುತ್ತೇನೆ. ವಿಶ್ವದಾದ್ಯಂತ ಭಾರತ ಕೋವಿಡ್-19ನಿಂದ ತೀವ್ರ ಬಾಧಿತವಾಗುತ್ತದೆ ಎಂದು ಅಂದಾಜಿಸಿದ್ದವು. ಭಾರತದಲ್ಲಿ ಕೊರೊನಾ ಸೋಂಕು ಸುನಾಮಿಯಂತೆ ಉಂಟಾಗುತ್ತದೆ ಎಂದು ಹೇಳಲಾಗಿತ್ತು. ಕೆಲವರು ಸುಮಾರು 700 ರಿಂದ 800 ಮಿಲಿಯನ್ ಭಾರತೀಯರಿಗೆ ಸೋಂಕು ತಗುಲಲಿದೆ ಮತ್ತು ಎರಡು ಮಿಲಿಯನ್ ಭಾರತೀಯರು ಸಾವನ್ನಪ್ಪಲಿದ್ದಾರೆ ಎಂದೂ ಸಹ ಹೇಳಿದ್ದರು.

ಆಧುನಿಕ ಆರೋಗ್ಯ ಮೂಲಸೌಕರ್ಯವಿರುವ ವಿಶ್ವದ ಬೃಹತ್ ರಾಷ್ಟ್ರಗಳೇ ಸಂಕಷ್ಟಕ್ಕೆ ಸಿಲುಕಿದ್ದಂತಹ ಸಂದರ್ಭದಲ್ಲಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ಬಗ್ಗೆ ವಿಶ್ವದ ಆತಂಕ ಸಾಮಾನ್ಯವಾಗಿತ್ತು. ನೀವು ನಮ್ಮ ಮನಸ್ಥಿತಿಯನ್ನು ಊಹಿಸಿಕೊಳ್ಳಿ. ಭಾರತ ತನ್ನನ್ನು ತಾನು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ನೋಡಿಕೊಂಡಿತು. ಜೊತೆಗೆ ಭಾರತ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಕ್ರಿಯಾಶೀಲ ಮನೋಭಾವದ ಜೊತೆ ಮುನ್ನಡೆಯಿತು.

ನಾವು ಕೋವಿಡ್ ನಿರ್ದಿಷ್ಟ ಆರೋಗ್ಯ ಮೂಲಸೌಕರ್ಯ ಬಲವರ್ಧನೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾದೆವು. ಸಾಂಕ್ರಾಮಿಕವನ್ನು ಎದುರಿಸಲು ನಮ್ಮ ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಿದೆವು ಮತ್ತು ಸೋಂಕು ಪರೀಕ್ಷೆ ಹಾಗೂ ಪ್ರಕರಣಗಳ ಪತ್ತೆಗೆ ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡೆವು.

ಈ ಸಮರದಲ್ಲಿ ಭಾರತದ ಪ್ರತಿಯೊಬ್ಬರೂ ಅತ್ಯಂತ ಸಂಯಮದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರು ಮತ್ತು ಕೊರೊನಾ ವಿರುದ್ಧದ ಹೋರಾಟವನ್ನು ಜನರ ಚಳವಳಿಯನ್ನಾಗಿ ಬದಲಾಯಿಸಿದರು. ಇಂದು ಭಾರತ ಗರಿಷ್ಠ ಸಂಖ್ಯೆಯಲ್ಲಿ ತನ್ನ ಪ್ರಜೆಗಳ ಜೀವಗಳನ್ನು ಉಳಿಸಿದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಶ್ರೀ ಪ್ರಭು ಅವರು ಹೇಳಿದಂತೆ ಇಂದು ಕೊರೊನಾ ಸೋಂಕಿತರ ಸಂಖ್ಯೆ ಅತ್ಯಂತ ಕಡಿಮೆ ಆಗಿದೆ.

ಮಿತ್ರರೇ,

ಭಾರತದ ಯಶೋಗಾಥೆಯನ್ನು ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿ ಗುರುತಿಸುವುದು ಉಚಿತವಲ್ಲ. ವಿಶ್ವದ ಜನಸಂಖ್ಯೆಯ ಶೇ.18ರಷ್ಟು ಜನರಿರುವ ದೇಶದಲ್ಲಿ ಕೊರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಮೂಲಕ ಭಾರೀ ವಿಪತ್ತು ತಪ್ಪಿಸಿ, ಮನುಕುಲವನ್ನು ಉಳಿಸಲಾಗಿದೆ.

ಕೊರೊನಾ ಸೋಂಕಿನ ಆರಂಭಿಕ ಸಮಯದಲ್ಲಿ ನಾವು ಮಾಸ್ಕ್, ಪಿಪಿಇ ಕಿಟ್ ಮತ್ತು ಪರೀಕ್ಷಾ ಕಿಟ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಇಂದು ನಮ್ಮ ದೇಶೀಯ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ನಾವು ಆ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಇತರೆ ದೇಶಗಳಿಗೂ ಸೇವೆ ಸಲ್ಲಿಸುತ್ತಿದ್ದೇವೆ ಮತ್ತು ಇಂದು ಭಾರತ ವಿಶ್ವದ ಅತಿ ದೊಡ್ಡ ಕೊರೊನಾ ಲಸಿಕೆ ಕಾರ್ಯಕ್ರಮವನ್ನು ಆರಂಭಿಸಿದೆ.

ಮೊದಲ ಹಂತದಲ್ಲಿ ನಾವು ನಮ್ಮ 30 ಮಿಲಿಯನ್ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿದ್ದೇವೆ. ಎಷ್ಟು ವೇಗದಲ್ಲಿ ಭಾರತ ತನ್ನ ಜನರಿಗೆ ಲಸಿಕೆಯನ್ನು ನೀಡುತ್ತಿದೆ ಎಂಬುದನ್ನು ನೀವು ಊಹಿಸಿಕೊಳ್ಳಿ. ಕೇವಲ 12 ದಿನಗಳಲ್ಲಿ ಭಾರತ 2.3 ಮಿಲಿಯನ್ ಗೂ ಅಧಿಕ ಜನರಿಗೆ ಲಸಿಕೆ ಹಾಕಲಾಗಿದೆ. ಇನ್ನು ಮುಂದಿನ ಕೆಲವೇ ತಿಂಗಳುಗಳಲ್ಲಿ 300 ಮಿಲಿಯನ್ ವೃದ್ಧ ಹಾಗೂ ಅನಾರೋಗ್ಯ ಪೀಡಿತ ರೋಗಿಗಳಿಗೆ ಲಸಿಕೆ ಹಾಕುವ ಗುರಿಯನ್ನು ನಾವು ತಲುಪಲಿದ್ದೇವೆ.

ಮಿತ್ರರೇ,

ಭಾರತ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಜಾಗತಿಕ ಹೊಣೆಗಾರಿಕೆಯನ್ನು ಈಡೇರಿಸಿದೆ. ಅದು ಸಾವಿರಾರು ವರ್ಷಗಳಷ್ಟು ಹಳೆಯದಾದ सर्वे सन्तु निरामया ಸರ್ವ ಸಂತು ನಿರಾಮಯಾಃ, ಪಾಲನೆ ಮಾಡುವ ಮೂಲಕ ಅಂದರೆ ಇಡೀ ಜಗತ್ತು ಆರೋಗ್ಯದಿಂದ ಇರಬೇಕು ಎಂಬುದು. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ವಾಯುಯಾನ ಸ್ಥಗಿತಗೊಂಡಾಗ ಭಾರತ ಒಂದು ಲಕ್ಷಕ್ಕೂ ಅಧಿಕ ಜನರನ್ನು ಅವರ ರಾಷ್ಟ್ರಗಳಿಗೆ ಸಾಗಿಸಿದೆ ಮತ್ತು 150ಕ್ಕೂ ಅಧಿಕ ರಾಷ್ಟ್ರಗಳಿಗೆ ಅಗತ್ಯ ಔಷಧಗಳನ್ನು ಪೂರೈಸಿದೆ. ಭಾರತ ಹಲವು ರಾಷ್ಟ್ರಗಳ ಆರೋಗ್ಯ ಸಿಬ್ಬಂದಿಗೆ ಆನ್ ಲೈನ್ ಮೂಲಕ ತರಬೇತಿ ನೀಡಿದೆ. ಅಲ್ಲದೆ ನಾವು ಜಗತ್ತಿನ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಭಾರತೀಯ ಆಯುರ್ವೇದ ಕುರಿತು ಮಾರ್ಗದರ್ಶನ ನೀಡಿದ್ದೇವೆ. ಇದು ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಭಾರೀ ಪ್ರಮಾಣದಲ್ಲಿ ಸಹಕಾರಿಯಾಗಿದೆ. ಭಾರತ ಇಂದು ಕೋವಿಡ್ ಲಸಿಕೆಗಳನ್ನು ಕಳುಹಿಸುವ ಮೂಲಕ ಮತ್ತು ಅಲ್ಲಿ ಕೋವಿಡ್ ಲಸಿಕಾ ಮೂಲಸೌಕರ್ಯ ಸ್ಥಾಪನೆ ಮೂಲಕ ಹಲವು ದೇಶಗಳ ಪ್ರಜೆಗಳ ಜೀವಗಳನ್ನು ರಕ್ಷಿಸುತ್ತಿದೆ. ಸದ್ಯ ಡಬ್ಲ್ಯೂಇಎಫ್ ನಲ್ಲಿನ ಪ್ರತಿಯೊಬ್ಬರೂ ಕೊರೊನಾಗೆ ಎರಡು ಲಸಿಕೆಗಳನ್ನು ಮೇಡ್ ಇನ್ ಇಂಡಿಯಾ ಮೂಲಕ ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಸಿಕೆಗಳು ಬರಲಿವೆ. ಈ ಲಸಿಕೆಗಳು ಇತರೆ ದೇಶಗಳಿಗೆ ನೆರವು ನೀಡಲು ಹೆಚ್ಚಿನ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ನೆರವು ಲಭ್ಯವಾಗುತ್ತಿದೆ.

ಭಾರತದ ಯಶಸ್ಸು ಮತ್ತು ಸಾಮರ್ಥ್ಯ ಕುರಿತ ಈ ಚಿತ್ರಣದೊಂದಿಗೆ ನಾನು ಆರ್ಥಿಕ ವಿಚಾರಗಳಲ್ಲಿ ಅತ್ಯಂತ ಕ್ಷಿಪ್ರವಾಗಿ ಬದಲಾವಣೆಗಳಾಗುತ್ತಿವೆ ಎಂದು ವಿಶ್ವದ ಆರ್ಥಿಕತೆಗೆ ನಾನು ಭರವಸೆ ನೀಡಲು ಬಯಸುತ್ತೇನೆ. ಭಾರತ ಬಿಲಿಯನ್ ಗಟ್ಟಲೆ ಮೌಲ್ಯದ ಹಲವು ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಿದೆ ಮತ್ತು ಕೊರೊನಾ ಸಮಯದಲ್ಲೂ ಸಹ ಹಲವು ಉದ್ಯೋಗ ಯೋಜನೆಗಳನ್ನು ನಡೆಸಿದೆ. ನಮ್ಮ ಆದ್ಯತೆ ಎಂದರೆ ಪ್ರತಿಯೊಂದು ಜೀವವನ್ನೂ ಸಹ ಉಳಿಸುವುದು. ಇದೀಗ ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ಸಹ ದೇಶದ ಪ್ರಗತಿಗೆ ಬದ್ಧರಾಗಿದ್ದಾರೆ.

ಇದೀಗ ಸ್ವಾವಲಂಬನೆಯಾಗುವ ನಿಟ್ಟಿನಲ್ಲಿ ಭಾರತ ಸಂಕಲ್ಪ ತೊಟ್ಟು ಮುನ್ನಡೆಯುತ್ತಿದೆ. ಭಾರತದ ಸ್ವಾವಲಂಬನೆ ಜಾಗತೀಕರಣವನ್ನು ನವೀಕರಿಸುವ ಆಶೋತ್ತರವನ್ನು ಹೊಂದಿದೆ ಮತ್ತು ಈ ಅಭಿಯಾನದಿಂದಾಗಿ ಕೈಗಾರಿಕೆಗಳು 4.0ಗೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಲಿದೆ ಎಂದು ನನಗೆ ಮನವರಿಕೆಯಾಗಿದೆ. ಅದಕ್ಕೂ ಮತ್ತು ಈ ವಿಶ್ವಾಸದ ಹಿಂದಿರುವುದಕ್ಕೂ ಒಂದು ಕಾರಣವಿದೆ.

ಮಿತ್ರರೇ,

ತಜ್ಞರು ಉದ್ಯಮ 4.0ಗೆ ನಾಲ್ಕು ಪ್ರಮುಖಾಂಶಗಳು ಇವೆ ಎಂದು ಹೇಳಿದ್ದಾರೆ. ಅವುಗಳೆಂದರೆ ಸಂಪರ್ಕ, ಆಟೋಮೋಷನ್, ಕೃತಕ ಬುದ್ಧಿಮತ್ತೆ ಅಥವಾ ಮಿಷಿನ್ ಕಲಿಕೆ ಮತ್ತು ರಿಯಲ್ ಟೈಮ್ ಡಾಟಾ. ಇಂದು ಅತ್ಯಂತ ಕಡಿಮೆ ದರದಲ್ಲಿ ಡಾಟಾ ಲಭ್ಯವಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಕುಗ್ರಾಮ ಪ್ರದೇಶಗಳಲ್ಲೂ ಮೊಬೈಲ್ ಸಂಪರ್ಕ ಮತ್ತು ಸ್ಮಾರ್ಟ್ ಫೋನ್ ಸಂಪರ್ಕ ಲಭ್ಯವಾಗುತ್ತಿದೆ. ಭಾರತದ ಆಟೋ ಮೋಷನ್ ವಿನ್ಯಾಸ ಪ್ರತಿಭಾವಂತರ ತಂಡ ಅತಿ ದೊಡ್ಡದಿದೆ ಮತ್ತು ಬಹುತೇಕ ಜಾಗತಿಕ ಕಂಪನಿಗಳು ಭಾರತದಲ್ಲಿ ಇಂಜಿನಿಯರಿಂಗ್ ಕೇಂದ್ರಗಳನ್ನು ಹೊಂದಿವೆ. ಭಾರತದ ಸಾಫ್ಟ್ ವೇರ್ ಇಂಜಿನಿಯರ್ ಗಳು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ತಮ್ಮ ಸಾಮರ್ಥ್ಯಗಳನ್ನು ತೋರುತ್ತಿದ್ದಾರೆ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಮಿಷನ್ ಕಲಿಕೆ ಕುರಿತ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಮಿತ್ರರೇ,

ಭಾರತದಲ್ಲಿ ಕಳೆದ ಆರು ವರ್ಷಗಳಿಂದೀಚೆಗೆ ಡಿಜಿಟಲ್ ಮೂಲಸೌಕರ್ಯ ಪ್ರಗತಿ ಸಾಧಿಸಿರುವುದು ವಿಶ್ವ ಆರ್ಥಿಕ ವೇದಿಕೆಯ ತಜ್ಞರಿಗೆ ಅಧ್ಯಯನ ಸಾಮಗ್ರಿಯಾಗಲಿದೆ. ಈ ಮೂಲಸೌಕರ್ಯದಿಂದಾಗಿ ಭಾರತದ ಜನರ ದೈನಂದಿನ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಇಂದು 1.3 ಬಿಲಿಯನ್ ಗೂ ಅಧಿಕ ಭಾರತೀಯರು ಸಾಮೂಹಿಕ ಗುರುತಿನ ಚೀಟಿ – ಆಧಾರ್ ಕಾರ್ಡ್ ಹೊಂದಿದ್ದಾರೆ. ಜನರು ಬ್ಯಾಂಕ್ ವಿವರಗಳನ್ನು ಪಡೆದು, ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ಅವರ ಮೊಬೈಲ್ ಫೋನ್ ನಂಬರ್ ನೊಂದಿಗೆ ಸಂಯೋಜಿಸಲಾಗಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಭಾರತ ಯುಪಿಐ ಮೂಲಕ ನಾಲ್ಕು ಟ್ರಿಲಿಯನ್ ಆರ್ಥಿಕತೆ ಸಾಧಿಸಿದೆ. ಬ್ಯಾಂಕಿಂಗ್ ವಲಯವನ್ನು ಚೆನ್ನಾಗಿ ತಿಳಿದಿರುವವರು ಭಾರತ ಅಭಿವೃದ್ಧಿಪಡಿಸಿರುವ ಯುಪಿಐ ವ್ಯವಸ್ಥೆಯ ತದ್ರೂಪಿಯನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ.

ಮಿತ್ರರೇ,

ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವರು ತಮ್ಮ ಪ್ರಜೆಗಳಿಗೆ ಹೇಗೆ ನೇರ ಆರ್ಥಿಕ ನೆರವು ಒದಗಿಸುವುದು ಎಂಬ ಬಗ್ಗೆ ಆತಂಕಗೊಂಡಿದ್ದನ್ನು ನಾವು ಕಂಡಿದ್ದೇವೆ. ನಿಮಗೆ ಆಶ್ಚರ್ಯವಾಗಬಹುದು, ಕೊರೊನಾದ ಸಮಯದಲ್ಲಿ 760 ಮಿಲಿಯನ್ ಗೂ ಅಧಿಕ ಜನರ ಬ್ಯಾಂಕ್ ಖಾತೆಗಳಿಗೆ 1.8 ಟ್ರಿಲಿಯನ್ ರೂ. ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ. ಇದು ಭಾರತ ಡಿಜಿಟಲ್ ಮೂಲಸೌಕರ್ಯದಲ್ಲಿ ಬಲಾಢ್ಯವಾಗಿರುವುದರ ಉದಾಹರಣೆಯಾಗಿದೆ. ನಮ್ಮ ಡಿಜಿಟಲ್ ಮೂಲಸೌಕರ್ಯದಿಂದಾಗಿ ಸಾರ್ವಜನಿಕ ಸೇವಾ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿ ಹಾಗೂ ಪಾರದರ್ಶಕಗೊಳಿಸಿದೆ. ಭಾರತ ಇದೀಗ ತನ್ನ ಎಲ್ಲಾ 1.3 ಬಿಲಿಯನ್ ಪ್ರಜೆಗಳಿಗೆ ಸುಲಭವಾಗಿ ಆರೋಗ್ಯ ರಕ್ಷಣೆ ನೀಡಲು ಸಾರ್ವತ್ರಿಕ ಆರೋಗ್ಯ ಗುರುತಿನ ಚೀಟಿಯನ್ನು ವಿತರಿಸುವ ಅಭಿಯಾನವನ್ನು ಆರಂಭಿಸಲಿದೆ.

ಮತ್ತು ಮಿತ್ರರೇ,

ನಾನು ಭಾರತದ ಪ್ರತಿಯೊಂದು ಯಶಸ್ಸು ಇಡೀ ಜಗತ್ತಿನ ಯಶಸ್ಸಿಗೆ ಸಹಾಯಕವಾಗುತ್ತಿದೆ ಎಂದು ನಾನು ಈ ಪ್ರತಿಷ್ಠಿತ ವೇದಿಕೆಯಿಂದ ಪ್ರತಿಯೊಬ್ಬರಿಗೂ ಭರವಸೆ ನೀಡುತ್ತಿದ್ದೇನೆ. ಇಂದು ನಾವು ನಡೆಸುತ್ತಿರುವ ಆತ್ಮನಿರ್ಭರ ಭಾರತ ಅಭಿಯಾನ ಸಂಪೂರ್ಣವಾಗಿ ಜಾಗತಿಕ ಒಳಿತಿಗೆ ಮತ್ತು ಜಾಗತಿಕ ಪೂರೈಕೆ ಸರಣಿ ಬಲವರ್ಧನೆಗೆ ಸಂಪೂರ್ಣ ಬದ್ಧವಾಗಿದೆ. ಭಾರತಕ್ಕೆ ತನ್ನ ಸಾಮರ್ಥ್ಯ ಮತ್ತು ಸಂಭವನೀಯತೆ ಬಲವರ್ಧನೆಗೆ ಜಾಗತಿಕ ಪೂರೈಕೆ ಸರಣಿ ಮತ್ತು ಅತ್ಯಂತ ಪ್ರಮುಖವಾಗಿ ವಿಶ್ವಾಸಾರ್ಹತೆ ಉಳಿಸಿಕೊಳ್ಳಲಾಗಿದೆ. ಭಾರತಕ್ಕೆ ಇಂದು ಅತಿ ದೊಡ್ಡ ಗ್ರಾಹಕರ ಮೂಲವಿದೆ ಮತ್ತು ಅದು ವಿಸ್ತರಣೆಯಾದಷ್ಟೂ ಜಾಗತಿಕ ಆರ್ಥಿಕತೆಯೂ ಸಹ ಲಾಭ ಪಡೆಯಲಿದೆ.

ಮಿತ್ರರೇ,

ಪ್ರೋ. ಕ್ಲೌಸ್ ಶ್ವಾಬ್, ಒಮ್ಮೆ ಹೀಗೆ ಹೇಳಿದ್ದರು “ಭಾರತ ಸಂಪೂರ್ಣ ಅವಕಾಶಗಳಿರುವ ಜಾಗತಿಕ ಶಕ್ತಿಯಾಗಿದೆ’ ಎಂದು. ನಾನು ಇಂದು ಭಾರತ ಸಂಪೂರ್ಣ ವಿಶ್ವಾಸದಿಂದಿದೆ. ಹೊಸ ಶಕ್ತಿಯೊಂದಿಗೆ ಎಲ್ಲಾ ಸಾಧ್ಯತೆಗಳನ್ನು ಸಾಬೀತು ಮಾಡಿದೆ. ಕೆಲವು ವರ್ಷಗಳಿಂದೀಚೆಗೆ ಭಾರತ ಸುಧಾರಣೆಗಳು ಮತ್ತು ಪ್ರೋತ್ಸಾಹಕ ಆಧರಿಸಿದ ಸಂಕಷ್ಟ ಪ್ಯಾಕೇಜ್ ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಕೊರೊನಾ ಸಮಯದಲ್ಲೂ ಸಹ ಭಾರತ ಬಹುತೇಕ ಎಲ್ಲ ವಲಯಗಳಲ್ಲಿ ಸಾಂಸ್ಥಿಕ ಸುಧಾರಣೆಗಳಿಗೆ ವೇಗ ನೀಡಲಾಗಿದೆ. ಈ ಸುಧಾರಣೆಗಳನ್ನು ಉತ್ಪಾದನೆ ಆಧಾರಿತ ಪ್ರೋತ್ಸಾಹ ಬೆಂಬಲದೊಂದಿಗೆ ಮಾಡಲಾಗುತ್ತಿದೆ. ಭಾರತ ಸಂಭವನೀಯತೆಯನ್ನು ಗುರುತಿಸುವ ದೇಶವಾಗಿದ್ದು, ಸ್ನೇಹಮಯ ವಾತಾವರಣ ಹಾಗೂ ಎಫ್ ಡಿಐ ನಿಯಮದಿಂದ ತೆರಿಗೆ ಪದ್ಧತಿವರೆಗೆ ಸರಳೀಕರಣಗೊಳಿಸಲಾಗಿದೆ.

ನಾವು ಭಾರತದಲ್ಲಿ ವ್ಯಾಪಾರವನ್ನು ಸುಗಮಗೊಳಿಸಲು ಪೂರಕ ವಾತಾವರಣ ಸುಧಾರಣೆ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ. ಮತ್ತೊಂದು ಪ್ರಮುಖ ಸಂಗತಿ ಎಂದರೆ ಹವಾಮಾನ ಬದಲಾವಣೆಯ ಕ್ಷಿಪ್ರ ಗುರಿಯೊಂದಿಗೆ ಭಾರತವೂ ಕೂಡ ತನ್ನ ಪ್ರಗತಿಯ ವೇಗವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.

ಮಿತ್ರರೇ,

ಕೈಗಾರಿಕೆಗಳು 4.0 ಬಗ್ಗೆ ಸಮಾಲೋಚನೆಗಳ ನಡುವೆಯೇ ನಾವೆಲ್ಲರೂ ಮತ್ತೊಂದು ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಕೊರೊನಾ ಬಿಕ್ಕಟ್ಟು ನಮಗೆ ಮಾನವೀಯತೆಯ ಮೌಲ್ಯವನ್ನು ಮತ್ತೆ ತಿಳಿಸಿಕೊಟ್ಟಿದೆ. ನಾವು ಕೈಗಾರಿಕೆಗಳು 4.0 ರೋಬೋಟ್ ಗಳಿಗಲ್ಲ, ಆದರೆ ಮಾನವರಿಗೆ ಎಂಬುದನ್ನು ಮರೆಯಬಾರದು. ನಾವು ತಂತ್ರಜ್ಞಾನವನ್ನು ಜೀವನವನ್ನು ಸುಗಮಗೊಳಿಸುವ ಅಸ್ತ್ರವನ್ನಾಗಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಆದರೆ ಸಿಲುಕಿಸಲಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದರೊಂದಿಗೆ ಇಡೀ ವಿಶ್ವ ಒಟ್ಟಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ಭರವಸೆ ನನಗಿದೆ.

ಈ ವಿಶ್ವಾಸದೊಂದಿಗೆ ನಾನು ಪ್ರಶ್ನೋತ್ತರ ಅಧಿವೇಶನದತ್ತ ಸಾಗಲು ಬಯಸುತ್ತೇನೆ.

ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.