Quoteಚಿಕ್ಕವಯಸ್ಸಿನಲ್ಲಿಯೇ ರಾಷ್ಟ್ರೀಯ ಹಿತಾಸಕ್ತಿಯ ವಿಷಯ ಅರ್ಥ ಮಾಡಿಕೊಂಡ ವಿದ್ಯಾರ್ಥಿಯಿಂದ ಪ್ರಭಾವಿತರಾಗಿ ಡೆಹ್ರಾಡೂನ್ ವಿದ್ಯಾರ್ಥಿ ಅನುರಾಗ್ ರಾಮೋಲಾಗೆ ಪತ್ರ ಬರೆದ ಪ್ರಧಾನಮಂತ್ರಿ
Quote“ಮುಂಬರುವ ವರ್ಷಗಳಲ್ಲಿ ಬಲಿಷ್ಠ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸುವಲ್ಲಿ ನಮ್ಮ ಯುವಪೀಳಿಗೆಯ ಕೊಡುಗೆ ನಿರ್ಣಾಯಕವಾಗಲಿದೆ”

ದೇಶದ ಯುವ ಪೀಳಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಜೊತೆಗೆ ನಿರಂತರವಾಗಿ ಸಂವಾದಗಳನ್ನು ನಡೆಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ವಿದ್ಯಾರ್ಥಿಗಳ ನೈತಿಕ ಸ್ಥೈರ್ಯ ಉತ್ತೇಜಿಸುವ ಕಾರ್ಯವನ್ನು ಸದಾ ಮಾಡುತ್ತಲೇ ಇದ್ದಾರೆ. ಅದು ‘ಮನ್ ಕಿ ಬಾತ್’, ‘ಪರೀಕ್ಷಾ ಪೇ ಚರ್ಚಾ’ ಅಥವಾ ವೈಯಕ್ತಿಕ ಸಮಾಲೋಚನೆ ಆಗಿರಬಹುದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುವಜನರ ಕಾಳಜಿ ಮತ್ತು ಕುತೂಹಲವನ್ನು ನಾನಾ ಮಾಧ್ಯಮಗಳ ಮೂಲಕ ಅರ್ಥಮಾಡಿಕೊಂಡು ಸದಾ ಪ್ರೋತ್ಸಾಹಿಸುತ್ತಿದ್ದಾರೆ. ಅದರ ಭಾಗವಾಗಿ ಡೆಹ್ರಾಡೂನ್‌ನ 11ನೇ ತರಗತಿಯ ವಿದ್ಯಾರ್ಥಿ ಅನುರಾಗ್ ರಾಮೋಲಾ ಅವರ ಪತ್ರಕ್ಕೆ ಉತ್ತರಿಸುವ ಮೂಲಕ ಅವರ ಕಲೆ ಮತ್ತು ಆಲೋಚನೆಗಳ ಬಗ್ಗೆ ಪ್ರಧಾನಮಂತ್ರಿ ಮತ್ತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನುರಾಗ್ ಅವರ ಚಿಂತನೆಗಳಿಂದ ಪ್ರಭಾವಿತರಾದ ಪ್ರಧಾನಮಂತ್ರಿ ಅವರು ಪತ್ರದಲ್ಲಿ ಹೀಗೆ “ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ” ದ ಚಿತ್ರಕಲೆಗೆ ಆಯ್ಕೆ ಮಾಡಿದ್ದು ಮತ್ತು ಘೋಷಣೆಯಲ್ಲಿರುವ ನಿಮ್ಮ ಮಾತು ನಿಮ್ಮ ಸೈದ್ಧಾಂತಿಕ ಪ್ರಬುದ್ಧತೆ ಪ್ರತಿಬಿಂಬಿಸುತ್ತದೆ. ಹದಿಹರೆಯದಿಂದಲೂ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಏನಿರಬೇಕು ಎಂಬುದು ನಿಮಗೆ ತಿಳಿದಿರುವುದಕ್ಕೆನನಗೆ ಹರ್ಷವಾಗುತ್ತಿದೆ “ಎಂದು ಹೇಳಿದ್ದಾರೆ.

ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಎಲ್ಲ ದೇಶವಾಸಿಗಳ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು ಮುಂದುವರಿದು ಹೀಗೆ ಬರೆದಿದ್ದಾರೆ, “ಸ್ವಾತಂತ್ರ್ಯೋತ್ಸವದ ಈ ಅಮೃತ ಕಾಲದಲ್ಲಿ ದೇಶವು ಸಾಮೂಹಿಕ ಒಗ್ಗಟ್ಟಿನ ಶಕ್ತಿಯೊಂದಿಗೆ ಮತ್ತು  ‘ಸಬ್ ಕಾ ಪ್ರಯಾಸ್’ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಮುಂಬರುವ ವರ್ಷಗಳಲ್ಲಿ ಬಲಿಷ್ಠ ಮತ್ತು ಸಮೃದ್ಧ ಭಾರತವನ್ನು ನಿರ್ಮಾಣ ಮಾಡುವಲ್ಲಿ ನಮ್ಮ ಯುವಪೀಳಿಗೆಯ ಕೊಡುಗೆ ಅತ್ಯಂತ ನಿರ್ಣಾಯಕವಾಗಲಿದೆ”ಎಂದು ಹೇಳಿದ್ದಾರೆ.

ಅನುರಾಗ್ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಅವರು ಅರ್ಹ ಯಶಸ್ಸಿನೊಂದಿಗೆ ಜೊತೆಗೆ ಸೃಜನಶೀಲವಾಗಿ ಜೀವನದಲ್ಲಿ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅನುರಾಗ್‌ಗೆ ಸ್ಫೂರ್ತಿ ತುಂಬಲು ನರೇಂದ್ರ ಮೋದಿ ಆ್ಯಪ್ ಮತ್ತು narendramodi.in ವೆಬ್‌ಸೈಟ್‌ನಲ್ಲಿ ಈ ಪೇಂಟಿಂಗ್ ಅನ್ನು ಅಪ್‌ಲೋಡ್ ಮಾಡಲಾಗಿದೆ.

|

ಅನುರಾಗ್ ಈ ಹಿಂದೆ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ಮೆಚ್ಚುಗೆ ಸೂಚಿಸಲು ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಗುರಿಯತ್ತ ಸಾಗುತ್ತಿರುವ ಹಾಗೂ ಎಲ್ಲರನ್ನೂ ತಮ್ಮೊಂದಿಗೆ ಕರೆದೊಯ್ಯುತ್ತಿರುವ ಪ್ರಧಾನಮಂತ್ರಿ ಅವರಿಂದ ಸ್ಫೂರ್ತಿ ಪಡೆಯುತ್ತಿರುವುದಾಗಿ ಅನುರಾಗ್ ಪತ್ರದಲ್ಲಿ ಬರೆದಿದ್ದರು.

ಟಿಪ್ಪಣಿ; ಅನುರಾಗ್ ರಾಮೋಲಾಗೆ ಕಲೆ ಮತ್ತು ಸಂಸ್ಕೃತಿಗಾಗಿ 2021ರ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ  ನೀಡಿ ಗೌರವಿಸಲಾಗಿದೆ.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
UER-II Inauguration: Developers See Big Boost For Dwarka Expressway, NCR Realty

Media Coverage

UER-II Inauguration: Developers See Big Boost For Dwarka Expressway, NCR Realty
NM on the go

Nm on the go

Always be the first to hear from the PM. Get the App Now!
...
Madhya Pradesh Chief Minister meets PM Modi
August 18, 2025