ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ಕಾನ್ ಚಲನಚಿತ್ರೋತ್ಸವದಲ್ಲಿ ಭಾರತದ ಭಾಗವಹಿಸುವಿಕೆ ಹಾಗು ಭಾರತ ಮತ್ತು ಫ್ರಾನ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಗಮನ ಸೆಳೆದರು
"ಭಾರತವು ಹೇಳಲು ಬಹಳಷ್ಟು ಕಥೆಗಳನ್ನು ಹೊಂದಿದೆ ಮತ್ತು ದೇಶವು ನಿಜವಾಗಿಯೂ ಪ್ರಪಂಚದ ವಿಷಯಗಳ ಕೇಂದ್ರವಾಗಲು ಅಪಾರ ಸಾಮರ್ಥ್ಯವನ್ನು ಹೊಂದಿದೆ"
"ಚಲನಚಿತ್ರ ವಲಯದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಸರ್ಕಾರವು ತನ್ನ ಬದ್ಧತೆಯಲ್ಲಿ ಅಚಲವಾಗಿದೆ"
ಕಾನ್ ಕ್ಲಾಸಿಕ್ ವಿಭಾಗದಲ್ಲಿ ಮರುಸ್ಥಾಪಿಸಲಾದ ಸತ್ಯಜಿತ್ ರೇ ಚಲನಚಿತ್ರದ ಪ್ರದರ್ಶನದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ
"ಇಂಡಿಯಾ ಪೆವಿಲಿಯನ್ ಭಾರತೀಯ ಸಿನಿಮಾದ ಅಂಶಗಳನ್ನು ಪ್ರದರ್ಶಿಸುತ್ತದೆ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆ ಮತ್ತು ಕಲಿಕೆಗಳನ್ನು ಉತ್ತೇಜಿಸುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ವರ್ಷ ಕಾನ್ ಚಲನಚಿತ್ರೋತ್ಸವದಲ್ಲಿ ಭಾರತವು ‘ಗೌರವದ ರಾಷ್ಟ್ರʼವಾಗಿ ಭಾಗವಹಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಾಚರಣೆ,  ಕಾನ್ ಚಲನಚಿತ್ರೋತ್ಸವದ 75 ನೇ ವಾರ್ಷಿಕೋತ್ಸವ ಮತ್ತು ಭಾರತ ಮತ್ತು ಫ್ರಾನ್ಸ್ ನಡುವಿನ 75 ವರ್ಷಗಳ ರಾಜತಾಂತ್ರಿಕ ಸಂಬಂಧಗಳ ಸಂಭ್ರಮಾಚರಣೆಯ ಮಹತ್ವದ ಸಭೆಯಲ್ಲಿ ಭಾರತದ ಭಾಗವಹಿಸುವಿಕೆಯು ಮಹತ್ವದ್ದು ಎಂದು ಸಂದೇಶದಲ್ಲಿ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.

ಭಾರತವನ್ನು ವಿಶ್ವದಲ್ಲೇ ಅತಿ ಹೆಚ್ಚು ಚಲನಚಿತ್ರ ನಿರ್ಮಾಣ ಮಾಡುವ ರಾಷ್ಟ್ರವಾಗಿ ಗುರುತಿಸಿದ ಪ್ರಧಾನಮಂತ್ರಿಯವರು, ನಮ್ಮ ಚಲನಚಿತ್ರ ಕ್ಷೇತ್ರದ ವೈವಿದ್ಯವು ಗಮನಾರ್ಹವಾಗಿದೆ ಮತ್ತು ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯವು  ನಮ್ಮ ಶಕ್ತಿಯಾಗಿದೆ ಎಂದು ಹೇಳಿದರು. ಭಾರತವು ಹೇಳಲು ಬಹಳಷ್ಟು ಕಥೆಗಳನ್ನು ಹೊಂದಿದೆ ಮತ್ತು ದೇಶವು ನಿಜವಾಗಿಯೂ ಪ್ರಪಂಚದ ವಿಷಯಗಳ ಕೇಂದ್ರ (ಕಂಟೆಂಟ್ ಹಬ್)ವಾಗಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಚಲನಚಿತ್ರ ವಲಯದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀ ನರೇಂದ್ರ ಮೋದಿ ಅವರು, ಅಂತರರಾಷ್ಟ್ರೀಯ ಚಲನಚಿತ್ರ ಸಹ ನಿರ್ಮಾಣವನ್ನು ಸುಗಮಗೊಳಿಸುವುದರಿಂದ ಹಿಡಿದು ದೇಶಾದ್ಯಂತ ಚಿತ್ರೀಕರಣಕ್ಕೆ ಅನುಮತಿಗಾಗಿ ಏಕ ಕಿಂಡಿ   ಅನುಮತಿಯ  ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳುವವರೆಗೆ, ಭಾರತವು ವಿಶ್ವದ ಚಲನಚಿತ್ರ ನಿರ್ಮಾಪಕರಿಗೆ ಅಡೆತಡೆಯಿಲ್ಲದ   ಸಾಧ್ಯತೆಗಳನ್ನು ನೀಡುತ್ತದೆ ಎಂದು ಹೇಳಿದರು.

ಭಾರತ  ಕಲಾಭಿಜ್ಞರ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸತ್ಯಜಿತ್ ರೇ ಚಲನಚಿತ್ರವನ್ನು ಕಾನ್‌  ಕ್ಲಾಸಿಕ್ ವಿಭಾಗದಲ್ಲಿ ಪ್ರದರ್ಶಿಸಲು ಮರುಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು.

ಅನೇಕ ಮೊದಲನೆಯದರಲ್ಲಿ ಒಂದಾದ, ಭಾರತದ ನವೋದ್ಯಮಗಳು  ಸಿನಿ ಜಗತ್ತಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಇಂಡಿಯಾ ಪೆವಿಲಿಯನ್ ಭಾರತೀಯ ಸಿನಿಮಾದ ಅಂಶಗಳನ್ನು ಪ್ರದರ್ಶಿಸುತ್ತದೆ ಮತ್ತು ಅಂತರಾಷ್ಟ್ರೀಯ ಪಾಲುದಾರಿಕೆ ಮತ್ತು ಕಲಿಕೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಹಿನ್ನೆಲೆ:

ಫ್ರಾನ್ಸ್‌ನಲ್ಲಿ ಕಾನ್ ಚಲನಚಿತ್ರೋತ್ಸವದ 75 ನೇ ಆವೃತ್ತಿಯೊಂದಿಗೆ ಆಯೋಜಿಸಲಾದ ಮುಂಬರುವ ಮಾರ್ಚೆ ಡು ಫಿಲ್ಮ್‌ನಲ್ಲಿ ಭಾರತವು ಗೌರವದ ಅಧಿಕೃತ ರಾಷ್ಟ್ರವಾಗಿದೆ. ಗೌರವ ರಾಷ್ಟ್ರದ ಸ್ಥಾನಮಾನವು ಭಾರತ, ಅದರ ಸಿನಿಮಾ, ಅದರ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ  ಕೇಂದ್ರೀಕರಿಸುವುದರೊಂದಿಗೆ ಮೆಜೆಸ್ಟಿಕ್ ಬೀಚ್‌ನಲ್ಲಿ ಆಯೋಜಿಸಲಾದ ಮಾರ್ಚೆ ಡು ಫಿಲ್ಮ್‌ನ ಆರಂಭಿಕ ರಾತ್ರಿಯಲ್ಲಿ ‘ಫೋಕಸ್ ಕಂಟ್ರಿ’ಯಾಗಿ ಭಾರತದ ಉಪಸ್ಥಿತಿಯನ್ನು ಖಚಿತಪಡಿಸುತ್ತದೆ.

ಭಾರತವು “ಕಾನ್‌ ನೆಕ್ಸ್ಟ್‌ನಲ್ಲಿ ಗೌರವದ ದೇಶವಾಗಿದೆ, ಇದರ ಅಡಿಯಲ್ಲಿ 5 ಹೊಸ ನವೋದ್ಯಮ ಗಳಿಗೆ ಶ್ರವಣ-ದೃಶ್ಯೋದ್ಯಮಕ್ಕೆ  ಹೂಡಿಕೆ ಮಾಡಲು ಅವಕಾಶವನ್ನು ನೀಡಲಾಗುತ್ತದೆ. ಅನಿಮೇಷನ್ ಡೇ ನೆಟ್‌ವರ್ಕಿಂಗ್‌ನಲ್ಲಿ ಹತ್ತು ವೃತ್ತಿಪರರು ಭಾಗವಹಿಸಲಿದ್ದಾರೆ. ಕಾನ್ ಚಲನ ಚಿತ್ರೋತ್ಸವದಲ್ಲಿನ ಈ ಆವೃತ್ತಿಯಲ್ಲಿ ಭಾರತದ ಭಾಗವಹಿಸುವಿಕೆಯ ಪ್ರಮುಖ  ಅಂಶವಾಗಿರುವ , ಶ್ರೀ ಆರ್ ಮಾಧವನ್ ನಿರ್ಮಿಸಿದ "ರಾಕೆಟ್ರಿ" ಚಲನಚಿತ್ರದ ವಿಶ್ವ ಪ್ರೀಮಿಯರ್ ಪ್ರದರ್ಶನವನ್ನು 19ನೇ ಮೇ 2022 ರಂದು ಮಾರುಕಟ್ಟೆಯ ಸ್ಕ್ರೀನಿಂಗ್‌ನ  ಪಲೈಸ್ ಡೆಸ್ ಫೆಸ್ಟಿವಲ್‌ಗಳಲ್ಲಿ ಮಾಡಲು   ನಿರ್ಧರಿಸಲಾಗಿದೆ.

ಭಾರತೀಯ ನಿಯೋಗವನ್ನು ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ನೇತೃತ್ವ ವಹಿಸಿದ್ದಾರೆ ಮತ್ತು  ಇದು ಭಾರತದಾದ್ಯಂತದ ಚಲನಚಿತ್ರ ಗಣ್ಯರನ್ನು ಒಳಗೊಂಡಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Double engine govt becoming symbol of good governance, says PM Modi

Media Coverage

Double engine govt becoming symbol of good governance, says PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government