ಪ್ರಧಾನಮಂತ್ರಿಯವರು ಇಂದು ಜಾರ್ಜ್‌ಟೌನ್‌ನ ಸ್ಮಾರಕ ಉದ್ಯಾನದಲ್ಲಿರುವ ಭಾರತೀಯ ಸ್ಮಾರಕಕ್ಕೆ ಭೇಟಿ ನೀಡಿದರು.
ಅವರ ಜೊತೆಗೆ ಗಯಾನಾ ಪ್ರಧಾನಿ ಬ್ರಿಗೇಡಿಯರ್ (ನಿವೃತ್ತ) ಮಾರ್ಕ್ ಫಿಲಿಪ್ಸ್ ಇದ್ದರು. ಈ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಮಂತ್ರಿ ಅವರನ್ನು ಟಾಸ್ಸಾ ಡ್ರಮ್ಸ್‌ನ ಮೇಳ ಸ್ವಾಗತಿಸಿತು.
ಸ್ಮಾರಕಕ್ಕೆ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, ಭಾರತೀಯ ವಲಸಿಗರ ಹೋರಾಟ ಮತ್ತು ತ್ಯಾಗ ಮತ್ತು ಗಯಾನಾದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಅವರ ಪ್ರಮುಖ ಕೊಡುಗೆಯನ್ನು ಸ್ಮರಿಸಿದರು. ಸ್ಮಾರಕದಲ್ಲಿ ಬಿಲ್ವ ಪತ್ರ ಸಸಿ ನೆಟ್ಟರು.
ಭಾರತದಿಂದ ವಲಸಿಗರನ್ನು ಕರೆತರಲಾಗಿದ್ದು, ಸ್ಮಾರಕವು 1838ರಲ್ಲಿ ಗಯಾನಾಕ್ಕೆ ಆಗಮಿಸಿದ ಮೊದಲ ಹಡಗಿನ ಪ್ರತಿಕೃತಿಯಾಗಿದೆ. ಇದನ್ನು ಭಾರತವು 1991ರಲ್ಲಿ ಗಯಾನಾದ ಜನರಿಗೆ ಉಡುಗೊರೆಯಾಗಿ ನೀಡಿದೆ.