ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆ ಕುರಿತಂತೆ ಖುದ್ದು ಪರಾಮರ್ಶಿಸುವ ಸಲುವಾಗಿ ತಮ್ಮ ಮೂರು ನಗರಗಳ ಭೇಟಿಯ ಭಾಗವಾಗಿ ಹೈದ್ರಾಬಾದ್ ನ ಭಾರತ್ ಬಯೋಟೆಕ್ ಸೌಲಭ್ಯಕ್ಕೆ ಭೇಟಿ ನೀಡಿದರು.
"ಹೈದ್ರಾಬಾದ್ ಭಾರತ್ ಬಯೋಟೆಕ್ ಸೌಲಭ್ಯದಲ್ಲಿ, ನನಗೆ ದೇಶೀಯ ಕೋವಿಡ್-19 ಲಸಿಕೆಯ ಬಗ್ಗೆ ವಿವರಿಸಲಾಯಿತು. ಈವರೆಗೆ ಮಾಡಲಾಗಿರುವ ಪ್ರಯೋಗಕ್ಕಾಗಿ ವಿಜ್ಞಾನಿಗಳನ್ನು ಅಭಿನಂದಿಸಿದೆ. ಆ ತಂಡ ತ್ವರಿತ ಪ್ರಗತಿಗಾಗಿ ಐಸಿಎಂಆರ್ ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ." ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರು ಬೆಳಗ್ಗೆ ಅಹಮದಾಬಾದ್ ನ ಜೈಡುಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಿದ್ದರು.
At the Bharat Biotech facility in Hyderabad, was briefed about their indigenous COVID-19 vaccine. Congratulated the scientists for their progress in the trials so far. Their team is closely working with ICMR to facilitate speedy progress. pic.twitter.com/C6kkfKQlbl
— Narendra Modi (@narendramodi) November 28, 2020