QuoteSwami Vivekananda's ideas are relevant in present times: PM Modi
QuoteWhole world looks up to India's youth: PM Modi
QuoteCitizenship Act gives citizenship, doesn't take it: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ಇಂದು ಕೋಲ್ಕತ್ತಾದ ಬೇಲೂರು ಮಠಕ್ಕೆ ಭೇಟಿ ನೀಡಿದರು. ಅವರು ಮಠದ ಸನ್ಯಾಸಿಗಳೊಂದಿಗೆ ಸಂವಾದ ನಡೆಸಿದರು.

|

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳು, ದೇಶವಾಸಿಗಳು ಬೇಲೂರು ಮಠದ ಪವಿತ್ರ ಭೂಮಿಗೆ ಭೇಟಿ ನೀಡುವುದು ಯಾವ ಧಾರ್ಮಿಕ ಯಾತ್ರೆಗೂ ಕಡಿಮೆ ಇಲ್ಲ, ಆದರೆ ನನಗೆ ಇದು ಸದಾ ತವರು ಮನೆಗೆ ಆಗಮಿಸಿದಂತೆ, ಈ ಪವಿತ್ರ ಸ್ಥಳದಲ್ಲಿ ರಾತ್ರಿ ಕಳೆಯುವುದು ನನಗೆ ಹೆಮ್ಮೆಯ ಭಾವನೆ ಮೂಡಿಸಿದೆ ಎಂದ ಅವರು, ಸ್ವಾಮಿ ರಾಮಕೃಷ್ಣ ಪರಮಹಂಸ, ಮಾತೆ ಶಾರದಾ ದೇವಿ, ಸ್ವಾಮಿ ಬ್ರಹ್ಮಾನಂದ ಮತ್ತು ಸ್ವಾಮಿ ವಿವೇಕಾನಂದ ಸೇರಿದಂತೆ ಎಲ್ಲ ಗುರುಗಳ ದರ್ಶನ ಇಲ್ಲಿ ಅನುಭವವಾಗುತ್ತದೆ ಎಂದರು.

|

ತಮ್ಮ ಹಿಂದಿನ ಭೇಟಿಯ ವೇಳೆ ಸ್ವಾಮಿ ಆತ್ಮಸ್ಥಾನಂದಜಿ ಅವರ ಆಶೀರ್ವಾದ ಪಡೆದಿದ್ದನ್ನು ಸ್ಮರಿಸಿಕೊಂಡ ಅವರು, ಸ್ವಾಮೀಜಿಗಳು ಹೇಗೆ ಸಾರ್ವಜನಿಕ ಸೇವೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟರು ಎಂದರು.

“ಇಂದು ಭೌತಿಕವಾಗಿ ಅವರು ನಮ್ಮೊಂದಿಗಿಲ್ಲ, ಆದರೆ ಅವರ ಕೆಲಸ, ಅವರು ತೋರಿಸಿದ ಹಾದಿ, ಸದಾ ನಮಗೆ ಮುನ್ನಡೆಯಲು ದಾರಿ ದೀಪವಾಗಲಿದೆ”.

|

ಇಲ್ಲಿ ಇರುವ ಯುವ ಬ್ರಹ್ಮಚಾರಿಗಳ ಜೊತೆ ಕೆಲವು ಕ್ಷಣಗಳನ್ನು ಕಳೆಯುವ ಅವಕಾಶ ನನಗೆ ದೊರೆತ್ತಿತ್ತು ಎಂದ ಅವರು, ಒಮ್ಮೆ ನನಗೂ ಬ್ರಹ್ಮಚಾರ್ಯ ಮನಸ್ಥಿತಿ ಇತ್ತು ಎಂದು ಹೇಳಿಕೊಂಡರು. ಬಹುತೇಕ ಮಂದಿ ಇಲ್ಲಿ ನೆರೆದಿರುವುದು ವಿವೇಕಾನಂದ ಅವರ ಚಿಂತನೆಗಳಿಂದಾಗಿ, ಅವರ ವಾಣಿಯಿಂದಾಗಿ ಮತ್ತು ವಿವೇಕಾನಂದರ ವ್ಯಕ್ತಿತ್ವದಿಂದಾಗಿ, ಆದರೆ ಈ ಪವಿತ್ರ ಸ್ಥಳಕ್ಕೆ ಆಗಮಿಸಿದ ನಂತರ ತಾಯಿ ಶಾರದಾ ದೇವಿ  ನಮಗೆಲ್ಲಾ ಇಲ್ಲಿಯೇ ನೆಲೆಸಲು ತಾಯಿಯ ಪ್ರೀತಿಯನ್ನು ನೀಡುತ್ತಾರೆ.

|

“ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ದೇಶದ ಪ್ರತಿಯೊಬ್ಬ ಯುವಕರೂ ವಿವೇಕಾನಂದ ನಿಶ್ಚಯಗಳ ಭಾಗವಾಗಿದ್ದಾರೆ. ಕಾಲ ಬದಲಾಗಿದೆ, ದಶಕಗಳು ಉರುಳಿವೆ ಮತ್ತು ಶತಮಾನಗಳು ಕಳೆದಿವೆ, ಆದರೂ ಸ್ವಾಮೀಜಿಯ ಸ್ಫೂರ್ತಿಯಾಗಿದ್ದಾರೆ ಮತ್ತು ಯುವಕರನ್ನು ಸದಾ ಎಚ್ಚರಗೊಳಿಸುತ್ತಿದ್ದಾರೆ. ಅವರ ಈ ಪ್ರಯತ್ನ ಮುಂದುವರಿಯಲಿದೆ ಮತ್ತು ಮುಂದಿನ ತಲೆಮಾರುಗಳಿಗೂ ಸ್ಫೂರ್ತಿಯಾಗಲಿದೆ”.

|

ಒಬ್ಬರಿಂದ ಮಾತ್ರ ಜಗತ್ತು ಬದಲಾಗುವುದಿಲ್ಲ ಎಂಬ ಮನೋಭಾವ ಹೊಂದಿರುವ ಯುವಕರಿಗೆ, “ನಾವೆಂದೂ ಒಬ್ಬಂಟಿಯಲ್ಲ” ಎಂಬ ಒಂದು ಸರಳ ಮಂತ್ರವನ್ನು ಪ್ರಧಾನಮಂತ್ರಿ ನೀಡಿದರು.

21ನೇ ಶತಮಾನದಲ್ಲಿ ನವ ಭಾರತವನ್ನು ನಿರ್ಮಿಸಲು ಸರ್ಕಾರ ಮಾತ್ರವಲ್ಲ, ದೇಶದ 130 ಕೋಟಿ ಜನರು ಮತ್ತು ದೇಶದ ಯುವ ಜನತೆ ಹಲವು ನಿರ್ಣಯಗಳನ್ನು ಮತ್ತು ಶ್ರೇಷ್ಠ ಬದ್ಧತೆಗಳನ್ನು ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

|

ಪ್ರಧಾನಮಂತ್ರಿ ಅವರು, ಕಳೆದ 5 ವರ್ಷಗಳಿಂದೀಚೆಗೆ ಯುವಕರ ಸಂಪರ್ಕದಿಂದ ದೇಶದಲ್ಲಿ ಅಭಿಯಾನ ಕೈಗೊಂಡರೆ ಅದು ಖಂಡಿತ ಯಶಸ್ವಿಯಾಗುತ್ತದೆ ಎಂಬ ಅನುಭವ ತನಗಾಗಿದೆ ಎಂದರು. ಕಳೆದ 5 ವರ್ಷಗಳ ಹಿಂದೆ, ಭಾರತ ಸ್ವಚ್ಛವಾಗುವುದೇ ಇಲ್ಲವೇ ಎಂಬ ನಿರಾಸೆ ಇತ್ತು ಮತ್ತು ಭಾರತದಲ್ಲಿ ಡಿಜಿಟಲ್ ಪಾವತಿ ವ್ಯಾಪ್ತಿ ಹೆಚ್ಚಳವಾಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಯೂ ಇತ್ತು. ಆದರೆ, ದೇಶದ ಯುವಜನತೆ ತಾವೇ ಮುಂದಾಳತ್ವ ವಹಿಸಿಕೊಂಡು ಇಡೀ ದೃಷ್ಟಿಯನ್ನು ಬದಲಾಯಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

21ನೇ ಶತಮಾನದ ಈ ದಶಕದಲ್ಲಿ ಭಾರತ ಪರಿವರ್ತನೆಗೊಳ್ಳಲು ದೇಶದ ಯುವಜನರ ಉತ್ಸಾಹ ಮತ್ತು ಶಕ್ತಿಯೇ ಕಾರಣ ಎಂದು ಅವರು ಹೇಳಿದರು. ಯುವಕರು ಸಮಸ್ಯೆಗಳಿಗೆ ಎದುರಾಗುತ್ತಾರೆ, ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಸವಾಲುಗಳನ್ನೇ ಎದುರಿಸಿ, ಮೆಟ್ಟಿ ನಿಲ್ಲುತ್ತಾರೆ ಎಂದರು. ಈ ಚಿಂತನೆಯೊಂದಿಗೆ ಕೇಂದ್ರ ಸರ್ಕಾರ ಹಲವು ದಶಕಗಳಿಂದ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

|

ರಾಷ್ಟ್ರೀಯ ಯುವ ದಿನವಾದ ಇಂದು ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ದೇಶದ ಯುವ ಜನರ ಮನವೊಲಿಸುವುದು, ಅವರನ್ನು ತೃಪ್ತಿಪಡಿಸುವುದು ಮತ್ತು ಅವರ ಮನಸ್ಸಿನಲ್ಲಿರುವ ಗೊಂದಲಗಳನ್ನು ನಿವಾರಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ ಯಾವೊಬ್ಬ ನಾಗರಿಕರ ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆಯಲ್ಲ, ಅದು ಪೌರತ್ವವನ್ನು ನೀಡುವ ಕಾನೂನು ಎಂದು ಅವರು ಸ್ಪಷ್ಟಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ, ಪಾಕಿಸ್ತಾನ ವಿಭಜನೆಯ ನಂತರ ಧಾರ್ಮಿಕ ನಂಬಿಕೆಯಿಂದಾಗಿ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾದವರಿಗೆ ಭಾರತೀಯ ಪೌರತ್ವ ನೀಡಲು ಸಹಕರಿಸುವ ಒಂದು ತಿದ್ದುಪಡಿಯಷ್ಟೇ ಎಂದರು. ಇದನ್ನು ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ನಾಯಕರು ಬೆಂಬಲಿಸಿದ್ದರು. ಇದಲ್ಲದೆ ಇಂದಿಗೂ ಯಾವುದೇ ಧರ್ಮದ ಯಾವುದೇ ವ್ಯಕ್ತಿ, ಆತ ದೇವರಲ್ಲಿ ನಂಬಿಕೆ ಹೊಂದಿರಬಹುದು, ಇಲ್ಲದಿರಬಹುದು ಯಾರು ಭಾರತೀಯ ಸಂವಿಧಾನದಲ್ಲಿ ನಂಬಿಕೆ ಹೊಂದಿರುತ್ತಾರೋ ಅಂತಹವರು ನಿಗದಿತ ನಿಯಮಗಳನ್ನು ಪಾಲಿಸಿ, ಭಾರತೀಯ ಪೌರತ್ವವನ್ನು ಪಡೆದುಕೊಳ್ಳಬಹುದು.  ಕಾಯ್ದೆಯಿಂದ ಈಶಾನ್ಯ ರಾಜ್ಯಗಳ ಜನಸಂಖ್ಯೆ ಮೇಲಾಗುವ ಅಡ್ಡ ಪರಿಣಾಮಗಳನ್ನು ತಡೆಯಲೂ ಕೂಡ ತಮ್ಮ ಸರ್ಕಾರ ಕೆಲವು ಅಂಶಗಳನ್ನು ಸೇರಿಸಿದೆ ಎಂದು ಅವರು ಹೇಳಿದರು. ಕಾಯ್ದೆಯ ಬಗ್ಗೆ ಸ್ಪಷ್ಟತೆ ಇದ್ದರೂ ಸಹ ಕೆಲವು ವ್ಯಕ್ತಿಗಳು ನಿರಂತರವಾಗಿ ತಮ್ಮ ರಾಜಕೀಯ ಕಾರಣಗಳಿಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು. ಈ ತಿದ್ದುಪಡಿ ಕಾಯ್ದೆಯ ವಿವಾದ ಭುಗಿಲೇಳೆದೆ ಇದ್ದಿದ್ದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಅಪರಾಧಗಳು, ಜಗತ್ತಿಗೆ ಗೊತ್ತಾಗುತ್ತಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಅಲ್ಲಿ ಹೇಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದೂ ತಿಳಿಯುತ್ತಿರಲಿಲ್ಲ. ಇದೀಗ ನಮ್ಮ ಕ್ರಮದ ಫಲವಾಗಿ ಪಾಕಿಸ್ತಾನ 70 ವರ್ಷ ನಿರಂತರವಾಗಿ ಅಲ್ಪಸಂಖ್ಯಾತರ ಮೇಲೆ ನಡೆಸಿದ ದೌರ್ಜನ್ಯಗಳಿಗೆ ಉತ್ತರ ನೀಡಬೇಕಾದ ಸ್ಥಿತಿ ಎದುರಾಗಿದೆ ಎಂದು ಪ್ರಧಾನಿ ಹೇಳಿದರು.

ನಮ್ಮ ಸಂಸ್ಕೃತಿ ಮತ್ತು ಸಂವಿಧಾನ ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕೆಂದು ಬಯಸುತ್ತವೆ ಮತ್ತು ನಮ್ಮ ಬಾಧ್ಯತೆಗಳನ್ನು  ಪ್ರಾಮಾಣಿಕ ಮತ್ತು ಬದ್ಧತೆಯಿಂದ ಮಾಡಬೇಕಿದೆ. ಪ್ರತಿಯೊಬ್ಬ ಭಾರತೀಯನ ಕರ್ತವ್ಯವೂ ಕೂಡ ಸಮಾನ ಪ್ರಾಮುಖ್ಯತೆ ಹೊಂದಿದೆ. ಈ ಮಾರ್ಗವನ್ನು ಅನುಸರಿಸುವುದರಿಂದ ನಾವು ವಿಶ್ವದ ವೇದಿಕೆಯಲ್ಲಿ ಭಾರತಕ್ಕೆ ಸಹಜವಾಗಿ ಅಗ್ರ ಸ್ಥಾನ ದೊರೆತಿರುವುದನ್ನು ನಾವು ಕಾಣಬಹುದಾಗಿದೆ. ಸ್ವಾಮಿ ವಿವೇಕಾನಂದರೂ ಕೂಡ ಪ್ರತಿಯೊಬ್ಬ ಭಾರತೀಯನಿಂದಲೂ ಇದನ್ನೇ ಬಯಸಿದ್ದರು ಮತ್ತು ಈ ಸಂಸ್ಥೆಯ ಮುಖ್ಯ ಉದ್ದೇಶವೂ ಕೂಡ ಅದೇ ಆಗಿದೆ. ಅವರ ಕನಸುಗಳನ್ನು ನನಸು ಮಾಡುವ ಬದ್ಧತೆಯನ್ನು ನಾವೆಲ್ಲರೂ ಇಂದು ಕೈಗೊಳ್ಳೋಣ ಎಂದು ಪ್ರಧಾನಮಂತ್ರಿ ಭಾಷಣವನ್ನು ಮುಗಿಸಿದರು.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Average Electricity Supply Rises: 22.6 Hours In Rural Areas, 23.4 Hours in Urban Areas

Media Coverage

India’s Average Electricity Supply Rises: 22.6 Hours In Rural Areas, 23.4 Hours in Urban Areas
NM on the go

Nm on the go

Always be the first to hear from the PM. Get the App Now!
...
PM pays tributes to revered Shri Kushabhau Thackeray in Bhopal
February 23, 2025

Prime Minister Shri Narendra Modi paid tributes to the statue of revered Shri Kushabhau Thackeray in Bhopal today.

In a post on X, he wrote:

“भोपाल में श्रद्धेय कुशाभाऊ ठाकरे जी की प्रतिमा पर श्रद्धा-सुमन अर्पित किए। उनका जीवन देशभर के भाजपा कार्यकर्ताओं को प्रेरित करता रहा है। सार्वजनिक जीवन में भी उनका योगदान सदैव स्मरणीय रहेगा।”