ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜವನ್ನು ಹೊಂದಿರುವಂತೆ ಬದಲಾಯಿಸುಕೊಳ್ಳುವಂತೆ ನಾಗರಿಕರನ್ನು ಕೋರಿದ್ದಾರೆ. ಸ್ವಾತಂತ್ರ್ಯ ದಿನ ಆಚರಿಸಲು ಶ್ರೀ ಮೋದಿ ಅವರು ತಮ್ಮ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿದ್ದಾರೆ. ಹರ್ ಘರ್ ತಿರಂಗಾ ಆಂದೋಲನವನ್ನು ಸ್ಮರಣೀಯ ಜನಾಂದೋಲನವನ್ನಾಗಿ ಮಾಡಲು ಪ್ರತಿಯೊಬ್ಬರೂ ಅದೇ ರೀತಿ ಮಾಡಬೇಕೆಂದು ಅವರು ತಿಳಿಸಿದ್ದಾರೆ.
harghartiranga.com ನಲ್ಲಿ ತ್ರಿವರ್ಣ ಧ್ವಜದೊಂದಿಗಿನ ಸೆಲ್ಫಿ ಹಂಚಿಕೊಳ್ಳುವಂತೆ ಶ್ರೀ ಮೋದಿ ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತೇನೆ.
ಈ ಬಗ್ಗೆ X ಪೋಸ್ಟ್ ನಲ್ಲಿ ಪ್ರಧಾನ ಮಂತ್ರಿಯವರು ಹೀಗೆ ಹೇಳಿದ್ದಾರೆ;
"ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ, #HarGharTiranga ವನ್ನು ನಾವು ಮತ್ತೊಮ್ಮೆ ಸ್ಮರಣೀಯ ಜನಾಂದೋಲನವನ್ನಾಗಿ ಮಾಡೋಣ. ನಾನು ನನ್ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸುತ್ತಿದ್ದೇನೆ ಮತ್ತು ನೀವೆಲ್ಲರೂ ಸಹ ಅದೇ ರೀತಿ ಮಾಡುವ ಮೂಲಕ ನಮ್ಮ ತ್ರಿವರ್ಣ ಧ್ವಜವನ್ನು ಸಂಭ್ರಮಿಸಲು ನನ್ನೊಂದಿಗೆ ಸೇರುವಂತೆ ನಾನು ನಿಮ್ಮೆಲ್ಲರನ್ನೂ ಪ್ರೇರೇಪಿಸುತ್ತೇನೆ. ಮತ್ತು ಹೌದು, ಹಾಗೇ ನಿಮ್ಮ ಸೆಲ್ಫಿಗಳನ್ನು harghartiranga.com ನಲ್ಲಿ ಹಂಚಿಕೊಳ್ಳಿ".
As this year’s Independence Day approaches, let’s again make #HarGharTiranga a memorable mass movement. I am changing my profile picture and I urge you all to join me in celebrating our Tricolour by doing the same. And yes, do share your selfies on https://t.co/0CtV8SCePz
— Narendra Modi (@narendramodi) August 9, 2024