ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಅವರ 151 ನೇ ಜಯಂತಿಯ ಸ್ಮರಣಾರ್ಥ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ‘ಶಾಂತಿ ಪ್ರತಿಮೆ’ ಅನಾವರಣಗೊಳಿಸಿದರು. ಜೈನಾಚಾರ್ಯರ ಗೌರವಾರ್ಥವಾಗಿ ಅನಾವರಣಗೊಳಿಸಿದ ಈ ಪ್ರತಿಮೆಗೆ ‘ಶಾಂತಿ ಪ್ರತಿಮೆ’ ಎಂದು ಹೆಸರಿಸಲಾಗಿದೆ. 151 ಇಂಚು ಎತ್ತರದ ಪ್ರತಿಮೆಯನ್ನು ಅಷ್ಟಾಧಾತು ಅಂದರೆ ಅಷ್ಟ ಲೋಹಗಳಿಂದ ತಯಾರಿಸಲಾಗಿದ್ದು, ತಾಮ್ರವನ್ನು ಪ್ರಮುಖವಾಗಿ ಬಳಸಲಾಗಿದೆ. ರಾಜಸ್ಥಾನದ ಪಾಲಿಯಲ್ಲಿರುವ ಜೆತ್ಪುರದ ವಿಜಯ ವಲ್ಲಭ ಸಾಧನಾ ಕೇಂದ್ರದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಿಯವರು ಜೈನಾಚಾರ್ಯರು ಮತ್ತು ಆಧ್ಯಾತ್ಮಿಕ ನಾಯಕರಿಗೆ ಗೌರವ ಸಲ್ಲಿಸಿದರು. ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಮತ್ತು ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ್ ಜಿ ಮಹಾರಾಜ್ ಎಂಬ ಎರಡು 'ವಲ್ಲಭ'ಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆ ಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ನಂತರ, ಈಗ ಜೈನಾಚಾರ್ಯ ಶ್ರೀ ವಿಜಯ ವಲ್ಲಭ್ ಅವರ ಶಾಂತಿ ಪ್ರತಿಮೆಯನ್ನು ಅನಾವರಣಗೊಳಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯವಾಗಿದೆ ಎಂದು ಹೇಳಿದರು.
‘ಸ್ಥಳೀಯತೆಗೆ ಆದ್ಯತೆ’ಯ ಬಗ್ಗೆ ಪುನರುಚ್ಚರಿಸಿದ ಶ್ರೀ ಮೋದಿಯವರು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನಡೆದಂತೆ, ಎಲ್ಲಾ ಆಧ್ಯಾತ್ಮಿಕ ನಾಯಕರು ಆತ್ಮ ನಿರ್ಭರ ಸಂದೇಶವನ್ನು ನೀಡಬೇಕು ಮತ್ತು ‘ಸ್ಥಳೀಯತೆಗೆ ಆದ್ಯತೆ’ ಯ ಪ್ರಯೋಜನಗಳ ಬಗ್ಗೆ ಬೋಧಿಸಬೇಕು ಎಂದರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶವು ಸ್ಥಳೀಯ ಉತ್ಪನ್ನಗಳಿಗೆ ನೀಡಿದ ಬೆಂಬಲವು ಶಕ್ತಿ ತುಂಬಿದೆ ಎಂದು ಅವರು ಹೇಳಿದರು.
ಭಾರತವು ಯಾವಾಗಲೂ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸ್ನೇಹದ ಹಾದಿಯನ್ನು ತೋರಿಸಿದೆ ಎಂದು ಪ್ರಧಾನಿ ಹೇಳಿದರು. ಇಂದು ಜಗತ್ತು ಇದೇ ರೀತಿಯ ಮಾರ್ಗದರ್ಶನಕ್ಕಾಗಿ ಭಾರತದತ್ತ ನೋಡುತ್ತಿದೆ. ನೀವು ಭಾರತದ ಇತಿಹಾಸವನ್ನು ನೋಡಿದರೆ, ಅಗತ್ಯವಿದ್ದಾಗಲೆಲ್ಲಾ, ಸಮಾಜಕ್ಕೆ ಮಾರ್ಗದರ್ಶನ ನೀಡಲು ಕೆಲವು ಸಂತರು ಜನಿಸಿದ್ದಾರೆ. ಆಚಾರ್ಯ ವಿಜಯ ವಲ್ಲಭ್ ಅಂತಹ ಒಬ್ಬ ಸಂತ ಎಂದು ಹೇಳಿದರು. ಜೈನಾಚಾರ್ಯರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಪಂಜಾಬ್, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಭಾರತೀಯ ಮೌಲ್ಯಗಳಿಂದ ಕೂಡಿದ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿ, ಶಿಕ್ಷಣ ಕ್ಷೇತ್ರದಲ್ಲಿ ದೇಶವನ್ನು ಆತ್ಮನಿರ್ಭರ ಮಾಡಲು ಅವರ ಪಟ್ಟ ಪ್ರಯತ್ನವನ್ನು ಶ್ಲಾಘಿಸಿದರು. ಈ ಸಂಸ್ಥೆಗಳು ರಾಷ್ಟ್ರಕ್ಕೆ ಅನೇಕ ಕೈಗಾರಿಕೋದ್ಯಮಿಗಳು, ನ್ಯಾಯಾಧೀಶರು, ವೈದ್ಯರು ಮತ್ತು ಎಂಜಿನಿಯರ್‌ಗಳನ್ನು ನೀಡಿವೆ ಎಂದು ಪ್ರಧಾನಿ ಹೇಳಿದರು.
ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆಗಳು ನೀಡಿದ ಕೊಡುಗೆಯ ಬಗ್ಗೆ ಒತ್ತಿಹೇಳಿದ ಪ್ರಧಾನಿಯವರು, ಈ ಸಂಸ್ಥೆಗಳು ಕಷ್ಟ ಕಾಲದಲ್ಲೂ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದವು. ಜೈನಾಚಾರ್ಯರು ಹೆಣ್ಣು ಮಕ್ಕಳಿಗಾಗಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು ಮತ್ತು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದರು. ಆಚಾರ್ಯ ವಿಜಯ ವಲ್ಲಭ್ ಅವರ ಜೀವನವು ದಯೆ, ಸಹಾನುಭೂತಿ ಮತ್ತು ಎಲ್ಲ ಜೀವಿಗಳ ಮೇಲಿನ ಪ್ರೀತಿಯಿಂದ ತುಂಬಿತ್ತು ಎಂದು ಅವರು ಹೇಳಿದರು. ಅವರ ಆಶೀರ್ವಾದದಿಂದ, ಇಂದು ದೇಶದಲ್ಲಿ ಪಕ್ಷಿ ಆಸ್ಪತ್ರೆ ಮತ್ತು ಅನೇಕ ಗೋಶಾಲೆಗಳು ನಡೆಯುತ್ತಿವೆ. ಇವು ಸಾಮಾನ್ಯ ಸಂಸ್ಥೆಗಳಲ್ಲ. ಇವು ಭಾರತದ ಚೈತನ್ಯ, ಅನನ್ಯತೆ ಮತ್ತು ಭಾರತೀಯ ಮೌಲ್ಯಗಳ ಸಾಕಾರವಾಗಿವೆ ಎಂದು ಪ್ರಧಾನಿ ತಿಳಿಸಿದರು.
मेरा सौभाग्य है कि मुझे देश ने सरदार वल्लभ भाई पटेल की विश्व की सबसे ऊंची ‘स्टेचू ऑफ यूनिटी’ के लोकार्पण का अवसर दिया था,
— PMO India (@PMOIndia) November 16, 2020
और आज जैनाचार्य विजय वल्लभ जी की भी ‘स्टेचू ऑफ पीस’ के अनावरण का सौभाग्य मुझे मिल रहा है: PM
भारत ने हमेशा पूरे विश्व को, मानवता को, शांति, अहिंसा और बंधुत्व का मार्ग दिखाया है।
— PMO India (@PMOIndia) November 16, 2020
ये वो संदेश हैं जिनकी प्रेरणा विश्व को भारत से मिलती है।
इसी मार्गदर्शन के लिए दुनिया आज एक बार फिर भारत की ओर देख रही है: PM
भारत का इतिहास आप देखें तो आप महसूस करेंगे, जब भी भारत को आंतरिक प्रकाश की जरूरत हुई है, संत परंपरा से कोई न कोई सूर्य उदय हुआ है।
— PMO India (@PMOIndia) November 16, 2020
कोई न कोई बड़ा संत हर कालखंड में हमारे देश में रहा है, जिसने उस कालखंड को देखते हुए समाज को दिशा दी है।
आचार्य विजय वल्लभ जी ऐसे ही संत थे: PM
एक तरह से आचार्य विजयवल्लभ जी ने शिक्षा के क्षेत्र में भारत को आत्मनिर्भर बनाने का अभियान शुरू किया था।
— PMO India (@PMOIndia) November 16, 2020
उन्होंने पंजाब, राजस्थान, गुजरात, महाराष्ट्र उत्तर प्रदेश जैसे कई राज्यों में भारतीय संस्कारों वाले बहुत से शिक्षण संस्थाओं की आधारशिला रखी: PM
आचार्य जी के ये शिक्षण संस्थान आज एक उपवन की तरह हैं।
— PMO India (@PMOIndia) November 16, 2020
सौ सालों से अधिक की इस यात्रा में कितने ही प्रतिभाशाली युवा इन संस्थानों से निकले हैं।
कितने ही उद्योगपतियों, न्यायाधीशों, डॉक्टर्स, और इंजीनियर्स ने इन संस्थानों से निकलकर देश के लिए अभूतपूर्व योगदान किया है: PM
स्त्री शिक्षा के क्षेत्र में इन संस्थानों ने जो योगदान दिया है, देश आज उसका ऋणि है।
— PMO India (@PMOIndia) November 16, 2020
उन्होंने उस कठिन समय में भी स्त्री शिक्षा की अलख जगाई।
अनेक बालिकाश्रम स्थापित करवाए, और महिलाओं को मुख्यधारा से जोड़ा: PM
आचार्य विजयवल्लभ जी का जीवन हर जीव के लिए दया, करुणा और प्रेम से ओत-प्रोत था।
— PMO India (@PMOIndia) November 16, 2020
उनके आशीर्वाद से आज जीवदया के लिए पक्षी हॉस्पिटल और अनेक गौशालाएं देश में चल रहीं हैं।
ये कोई सामान्य संस्थान नहीं हैं। ये भारत की भावना के अनुष्ठान हैं।
ये भारत और भारतीय मूल्यों की पहचान हैं: PM