ನೂತನ ಸಂಸತ್ ಭವನ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳೊಂದಿಗೆ ಪ್ರಧಾನಿ ಸಂವಾದ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ನೂತನ ಸಂಸತ್ ಭವನದ  ರಾಷ್ಟ್ರೀಯ ಲಾಂಛನ ಅನಾವರಣಗೊಳಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:
"ಇಂದು ಬೆಳಗ್ಗೆ ನೂತನ ಸಂಸತ್ ಭವನದ  ರಾಷ್ಟ್ರೀಯ ಲಾಂಛನ ಅನಾವರಣಗೊಳಿಸುವ ಗೌರವ ನನಗೆ ಲಭಿಸಿತು."

ನೂತನ ಸಂಸತ್ ಭವನದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಸೇರಿದಂತೆ ನಾನಾ ಶ್ರಮಜೀವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು.

“ನೂತನ ಸಂಸತ್ ಭವನ  ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳೊಂದಿಗೆ ನಾನು ಅದ್ಭುತ ಸಂವಾದ ನಡೆಸಿದ್ದೇನೆ. ಅವರ ಅವಿರತ ಪ್ರಯತ್ನಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ನಮ್ಮ ದೇಶಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಸದಾ ಸ್ಮರಿಸುತ್ತೇವೆ.

ಕಂಚಿನಿಂದ ತಯಾರಿಸಿರುವ ರಾಷ್ಟ್ರೀಯ ಲಾಂಛನವು ಒಟ್ಟು 9,500 ಕೆಜಿ ತೂಕ ಮತ್ತು 6.5 ಮೀಟರ್ ಎತ್ತರವಿದೆ. ಹೊಸ ಸಂಸತ್ ಭವನ ಕಟ್ಟಡದ ಕೇಂದ್ರದಲ್ಲಿ ನಿರ್ಮಾಣವಾಗಿರುವ ವಿರಾಮ ಕೊಠಡಿ(ಪ್ರೇಕ್ಷಕರ ಗ್ಯಾಲರಿ)ಯ ಮೇಲ್ಭಾಗದಲ್ಲಿ ರಾಷ್ಟ್ರೀಯ ಲಾಂಛನವನ್ನು ಸ್ಥಾಪಿಸಲಾಗಿದೆ. ಕಟ್ಟಡದ ಮೇಲೆ ಲಾಂಛನವನ್ನು ಸದೃಢವಾಗಿ ನಿಲ್ಲಿಸಲು ಸುಮಾರು 6,500 ಕೆ.ಜಿ ತೂಕದ ಉಕ್ಕಿನ ಪೋಷಕ ಸಂರಚನೆ ಬಳಸಲಾಗಿದೆ. 

 

ನೂತನ ಸಂಸತ್ ಭವನ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನ ಸ್ಥಾಪಿಸುವ ಪರಿಕಲ್ಪನೆಯನ್ನು ಒಟ್ಟು 8 ವಿಭಿನ್ನ ಹಂತದ ತಯಾರಿಕೆಯಿಂದ ನಿರ್ಮಿಸಲಾಗಿದೆ. ರೇಖಾಚಿತ್ರ ತಯಾರಿಕೆಯಿಂದ ಹಿಡಿದು ಕಂಪ್ಯೂಟರ್ ಗ್ರಾಫಿಕ್ಸ್, ಜೇಡಿಮಣ್ಣಿನ ಮಾದರಿಗೆ ಕಂಚಿನ ಎರಕ ಹೊಯ್ದು ಪಾಲಿಶ್ ಮಾಡುವ ತನಕ ಇದನ್ನು ವಿಭಿನ್ನ ಹಂತಗಳಲ್ಲಿ ತಯಾರಿಸಲಾಗಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India has the maths talent to lead frontier AI research: Satya Nadell

Media Coverage

India has the maths talent to lead frontier AI research: Satya Nadell
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಜನವರಿ 2025
January 09, 2025

Appreciation for Modi Governments Support and Engagement to Indians Around the World