2003ರಲ್ಲಿ ವಿಪತ್ತು ಸಂಬಂಧಿ ಕಾಯ್ದೆ ಜಾರಿಗೊಳಿಸಿದ ಮೊದಲ ರಾಜ್ಯ ಗುಜರಾತ್
“ವಿಪತ್ತು ನಿರ್ವಹಣೆಯಲ್ಲಿ ಪರಿಹಾರ, ರಕ್ಷಣಾ ಮತ್ತು ಪುನರ್ ವಸತಿಗೆ ಒತ್ತು ನೀಡುವ ಜತೆಗೆ ಸುಧಾರಣೆಗೂ ಆದ್ಯತೆ”
“ವಿಪತ್ತು ನಿರ್ವಹಣೆ ಕೇವಲ ಸರ್ಕಾರದ ಕೆಲಸವಾಗಿ ಉಳಿದಿಲ್ಲ, ಅದು “ಸಬ್ ಕಾ ಪ್ರಯಾಸ್”ಗೆ ಮಾದರಿಯಾಗಿದೆ’’
“ಸ್ವತಂತ್ರ ಭಾರತದ ಕನಸುಗಳನ್ನು ಸಾಕಾರಗೊಳಿಸುವ ಗುರಿ ಹೊಂದಿದ್ದೇವೆ, ಸ್ವಾತಂತ್ರ್ಯದ ನೂರನೇ ವರ್ಷಕ್ಕೂ ಮುನ್ನ ನವಭಾರತವನ್ನು ನಿರ್ಮಿಸುವ ಗುರಿ ನಮ್ಮದಿದೆ’’
“ಸ್ವಾತಂತ್ರ್ಯಾ ನಂತರ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಜತೆಗೆ ಕೆಲವು ಶ್ರೇಷ್ಠ ವ್ಯಕ್ತಿಗಳ ಕೊಡುಗೆಯನ್ನೂ ಸಹ ಅಳಿಸಿ ಹಾಕಲು ಪ್ರಯತ್ನಿಸಿದ್ದು ದುರದೃಷ್ಟಕರ’’
“ಸ್ವಾತಂತ್ರ್ಯ ಸಂಗ್ರಾಮ ಲಕ್ಷಾಂತರ ದೇಶವಾಸಿಗಳ ‘ತಪಸ್ಸು’ ಒಳಗೊಂಡಿದೆ, ಆದರೆ ಅವರ ಇತಿಹಾಸವನ್ನೂ ಸಹ ಸೀಮಿತಗೊಳಿಸುವ ಪ್ರಯತ್ನಗಳು ನಡೆದಿವೆ; ಆದರೆ ಇಂದು ದೇಶ ಆ ತಪ್ಪುಗಳನ್ನು ದಿಟ್ಟವಾಗಿ ಸರಿಪಡಿಸುತ್ತಿದೆ’’
“ನೇತಾಜಿ ಸುಭಾಷರ “ನಾವು ಮಾಡುಬಹುದು, ನಾವು ಮಾಡಲಿದ್ದೇವೆ” ಎಂಬ ಸ್ಫೂರ್ತಿಯ ಮನೋಭಾವದೊಂದಿಗೆ ಮುನ್ನಡೆಯಬೇಕಿದೆ’’

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ನಲ್ಲಿಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ನೇತಾಜಿ ಅವರ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೆ ಈ ಹಾಲೋಗ್ರಾಮ್ ಪ್ರತಿಮೆ ಆ ಸ್ಥಳದಲ್ಲಿರಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಆಚರಣೆ ವರ್ಷವಿಡೀ ನಡೆಯಲಿರುವ ಸ್ಥಳದಲ್ಲೇ ಪ್ರತಿಮೆಯನ್ನು ಅನಾವರಣ ಮಾಡಲಾಯಿತು.

ಅಲ್ಲದೆ ಪ್ರಧಾನಮಂತ್ರಿ ಅವರು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ 2019, 2020, 2021 ಮತ್ತು 2022ನೇ ಸಾಲಿನ ಸುಭಾಷ್ ಚಂದ್ರ ಬೋಸ್ ಆಪ್ದಾ ಪ್ರಬಂಧನ್ ಪುರಸ್ಕಾರವನ್ನು ಪ್ರದಾನ ಮಾಡಿದರು. ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ವಿಪತ್ತು ನಿರ್ವಹಣಾ ವಲಯದಲ್ಲಿ ದೇಶದಲ್ಲಿ ಅಮೂಲ್ಯ ಕೊಡುಗೆ ಮತ್ತು ಸ್ವಾರ್ಥರಹಿತ ಸೇವೆ ಸಲ್ಲಿಸಿದ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಗುರುತಿಸಲು ಮತ್ತು ಗೌರವಿಸಲು ಸ್ಥಾಪಿಸಿದೆ.

ಭಾರತ ಮಾತೆಯ ದಿಟ್ಟ ಪುತ್ರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಅಂಗವಾಗಿ ಅವರಿಗೆ ಪ್ರಧಾನಮಂತ್ರಿ ಗೌರವ ನಮನ ಸಲ್ಲಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ನೆಲದಲ್ಲಿ ಮೊದಲ ಸ್ವತಂತ್ರ್ಯ ಸರ್ಕಾರವನ್ನು ಸ್ಥಾಪಿಸಿದ, ಸಾರ್ವಭೌಮ ಮತ್ತು ಬಲಿಷ್ಠ ಭಾರತವನ್ನು ಸಾಧಿಸುವ ವಿಶ್ವಾಸ ನೀಡಿದ ನೇತಾಜಿ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಡಿಜಿಟಲ್ ರೂಪದಲ್ಲಿ ಸ್ಥಾಪಿಸಲಾಗಿದೆ. ಸದ್ಯದಲ್ಲೇ ಈ ಹಾಲೋಗ್ರಾಮ್ ಪ್ರತಿಮೆ ಜಾಗದಲ್ಲಿ ಗ್ರಾನೈಟ್ ಪ್ರತಿಮೆ ಮರು ಸ್ಥಾಪಿಸಲಾಗುವುದು. ಈ ಪ್ರತಿಮೆ ಭವ್ಯ ರಾಷ್ಟ್ರದ ಸ್ವಾತಂತ್ರ್ಯ ನಾಯಕನಿಗೆ ಗೌರವ ಸಲ್ಲಿಸುವುದಾಗಿದೆ ಮತ್ತು ಇದು ನಮ್ಮ ಸಂಸ್ಥೆಗಳಿಗೆ ಹಾಗೂ ಪೀಳಿಗೆಗಳಿಗೆ ರಾಷ್ಟ್ರೀಯ ಕರ್ತವ್ಯದ ಪಾಠವನ್ನು ಸದಾ ನೆನಪಿಸುತ್ತಿರುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿನ ವಿಪತ್ತು ನಿರ್ವಹಣೆ ಬೆಳೆದು ಬಂದ ಐತಿಹಾಸಿಕ ಹಿನ್ನೆಲೆಯನ್ನು ಪ್ರಧಾನಮಂತ್ರಿ ಅವರು ನೆನಪಿಸಿದರು. ಹಲವು ವರ್ಷಗಳವರೆಗೆ ವಿಪತ್ತು ನಿರ್ವಹಣೆ ವಿಷಯ ಕೃಷಿ ಇಲಾಖೆ ಅಡಿಯಲ್ಲಿ ಇತ್ತು ಎಂದು ಅವರು ಹೇಳಿದರು. ಇದಕ್ಕೆ ಮೂಲ ಕಾರಣ ಕೃಷಿ ಸಚಿವಾಲಯ, ಪ್ರವಾಹಗಳು, ಭಾರೀ ಮಳೆ, ಆಲಿಕಲ್ಲು ಇತ್ಯಾದಿಗಳಿಂದ ಸೃಷ್ಟಿಯಾದ ಪರಿಸ್ಥಿತಿಗಳನ್ನು ನಿರ್ವಹಿಸುವ ಹೊಣೆ ನಿಭಾಯಿಸುತ್ತಿದ್ದುದು. ಆದರೆ 2001ರ ಗುಜರಾತ್ ಭೂಕಂಪದ ಬಳಿಕ ವಿಪತ್ತು ನಿರ್ವಹಣೆಯ ವ್ಯಾಖ್ಯಾನ ಬದಲಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. “ನಾವು ಎಲ್ಲ ಇಲಾಖೆಗಳು ಮತ್ತು ಸಚಿವಾಲಯಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಿದ್ದೆವು. ಆ ಸಮಯದ ಅನುಭವಗಳಿಂದ ಪಾಠ ಕಲಿತು 2003ರಲ್ಲಿ ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಅಂತಹ ಕಾನೂನನ್ನು ರೂಪಿಸಿದ ಮೊದಲ ರಾಜ್ಯ ಗುಜರಾತ್ ಆಯಿತು. ನಂತರ  ಗುಜರಾತ್ ಕಾನೂನಿನಿಂದ ಪಾಠ ಕಲಿತ ಕೇಂದ್ರ ಸರ್ಕಾರ 2005ರಲ್ಲಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಅಂತಹುದೇ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಿತು” ಎಂದು ಹೇಳಿದರು.

ಪರಿಹಾರ, ರಕ್ಷಣೆ ಮತ್ತು ಪುನರ್ ವಸತಿಗೆ ಒತ್ತು ನೀಡುವ ಜತೆಗೆ ಸುಧಾರಣೆಗೂ ಆದ್ಯತೆ ನೀಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ನಾವು ಎನ್ ಡಿಆರ್ ಎಫ್ ಅನ್ನು ಬಲವರ್ಧನೆಗೊಳಿಸಿದ್ದೇವೆ, ಆಧುನೀಕರಿಸಿದ್ದೇವೆ ಮತ್ತು ದೇಶಾದ್ಯಂತ ವಿಸ್ತರಿಸಿದ್ದೇವೆ. ಬಾಹ್ಯಾಕಾಶ ತಂತ್ರಜ್ಞಾನದಿಂದ ಹಿಡಿದು, ಯೋಜನೆ ಮತ್ತು ನಿರ್ವಹಣೆವರೆಗೆ ಅತ್ಯುತ್ತಮ ಸಾಧ್ಯವಾದ ಎಲ್ಲ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಎನ್ ಡಿಎಂಎನ ‘ಆಪ್ದಾ ಮಿತ್ರ’ ಮತ್ತಿತರ ಯೋಜನೆಗಳಲ್ಲಿ ಯುವಕರು ಮುಂದೆ ಬರುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಯಾವುದೇ ಸಂದರ್ಭದಲ್ಲಿ ವಿಪತ್ತು ಎದುರಾದರು ಜನರು ಸಂತ್ರಸ್ತರಾಗಿ ಉಳಿಯುವಂತಿಲ್ಲ. ಅವರು ಸ್ವಯಂಪ್ರೇರಿತರಾಗಿ ವಿಪತ್ತು ವಿರುದ್ಧ ಹೋರಾಡುತ್ತಾರೆ. ಹಾಗಾಗಿ ವಿಪತ್ತು ನಿರ್ವಹಣೆ ಕೇವಲ ಸರ್ಕಾರದ ಕರ್ತವ್ಯವಾಗಿ ಉಳಿದಿಲ್ಲ ಅದು ‘ಸಬ್ ಕಾ ಪ್ರಯಾಸ್’ನ ಮಾದರಿಯಾಗಿದೆ.

ವಿಪತ್ತುಗಳನ್ನು ಎದುರಿಸಲು ಸಂಸ್ಥೆಗಳನ್ನು ಬಲವರ್ಧನೆಗೊಳಿಸುವ ಮೂಲಕ ಸಾಮರ್ಥ್ಯವನ್ನು ಸುಧಾರಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಅವರು ಒಡಿಶಾ, ಪಶ್ಚಿಮ ಬಂಗಾಳ, ಗೋವಾ, ಮಹಾರಾಷ್ಟ್ರ, ಗುಜರಾತ್ ಚಂಡಮಾರುಗಳ ಉದಾಹರಣೆಯನ್ನು ನೀಡಿ, ಹೊಸ ಬಗೆಯ ಸಿದ್ಧತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಇತ್ತೀಚಿನ ದಿನಗಳು ಈ ವಿಪತ್ತುಗಳಿಂದ ಅತಿ ಕಡಿಮೆ ಪ್ರಮಾಣದ ಹಾನಿ ಸಂಭವಿಸಿದೆ ಎಂದರು. ದೇಶ ಮೊದಲಿನಿಂದ ಕೊನೆಯವರೆಗೆ ಚಂಡಮಾರುತ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಮುಂಚಿತವಾಗಿಯೇ ಮುನ್ನೆಚ್ಚರಿಕೆ ನೀಡುವ ಉತ್ತಮ ವ್ಯವಸ್ಥೆ ಹೊಂದಿದೆ ಮತ್ತು ವಿಪತ್ತು ಅಪಾಯ ವಿಶ್ಲೇಷಿಸುವ  ಮತ್ತು ವಿಪತ್ತು ಅಪಾಯ ನಿರ್ವಹಣಾ ಸಾಧನಗಳನ್ನು ಹೊಂದಿದೆ ಎಂದು  ಅವರು ಹೇಳಿದರು.

ವಿಪತ್ತು ನಿರ್ವಹಣೆಯ ಇಂದಿನ ಆಡಳಿತದ ಪ್ರತಿಯೊಂದು ಕ್ಷೇತ್ರದಲ್ಲೂ ಚಿಂತನೆಯ ವಿಶಿಷ್ಟ ಲಕ್ಷಣವಾದ ಸಮಗ್ರ ವಿಧಾನವನ್ನು ಪ್ರಧಾನಮಂತ್ರಿ ವಿವರಿಸಿದರು.  ಇಂದು ವಿಪತ್ತು ನಿರ್ವಹಣೆ, ಸಿವಿಲ್ ಇಂಜಿನಿಯರಿಂಗ ಮತ್ತು ಆರ್ಕಿಟೆಕ್ಚರ್ ಕೋರ್ಸ್ ಗಳ ಭಾಗವಾಗಿದೆ ಮತ್ತು ಅಣೆಕಟ್ಟೆ ಸುರಕ್ಷತೆ ಕಾನೂನು ಕೂಡ ಜಾರಿಯಲ್ಲಿದೆ. ಅಂತೆಯೇ ಮುಂಬರುವ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ವಿಪತ್ತು ಸ್ಥಿತಿಸ್ಥಾಪಕತ್ವ ಎದುರಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪಿಎಂ-ಆವಾಸ್ ಯೋಜನೆ ಮನೆಗಳ ನಿರ್ಮಾಣ, ಚಾರ್ ಧಾಮ್ ನಲ್ಲಿ ಮಹಾ ಪರಿಯೋಜನೆ, ಉತ್ತರ ಪ್ರದೇಶದಲ್ಲಿ ಎಕ್ಸ್ ಪ್ರೆಸ್ ವೇ ಮತ್ತಿತರ ಯೋಜನೆಗಳಲ್ಲಿ ವಿಪತ್ತು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇವು ನವಭಾರತದ ದೂರದೃಷ್ಟಿ ಮತ್ತು ಚಿಂತನೆಗೆ ಉದಾಹರಣೆಗಳಾಗಿವೆ ಎಂದು ಅವರು ಹೇಳಿದರು.

ವಿಪತ್ತು ನಿರ್ವಹಣೆ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ನಾಯಕತ್ವವನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿ – ಸಿಡಿಆರ್ ಐ ಮೂಲಕ ಭಾರತ ದೊಡ್ಡ ಚಿಂತನೆಯನ್ನು ನೀಡಿದೆ ಮತ್ತು ಅದು ಜಾಗತಿಕ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಿದ್ದು, ಯುನೈಟೆಡ್ ಕಿಂಗ್ ಡಮ್ ಸೇರಿದಂತೆ 35 ದೇಶಗಳು ಈಗಾಗಲೇ ಆ ಮೈತ್ರಿಯ ಭಾಗವಾಗಿವೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸೇನೆಗಳ ನಡುವೆ ಜಂಟಿ ಮಿಲಿಟರಿ ಸಮರಾಭ್ಯಾಸಗಳು ಸಾಮಾನ್ಯವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ಇದೇ ಮೊದಲ ಬಾರಿಗೆ ವಿಪತ್ತು ನಿರ್ವಹಣೆ ಕುರಿತಂತೆ ಭಾರತ ಜಂಟಿ ಪಥಸಂಚಲನ ಪರಂಪರೆಯನ್ನು ಆರಂಭಿಸಿದೆ.  

‘ಸ್ವತಂತ್ರ ಭಾರತದ ಕನಸಿನಲ್ಲಿ ಎಂದಿಗೂ ನಂಬಿಕೆ ಕಳದುಕೊಳ್ಳಬೇಡಿ, ಭಾರತವನ್ನು ಅಲುಗಾಡಿಸುವಂತಹ ಯಾವ ಶಕ್ತಿ ಜಗತ್ತಿನಲ್ಲಿ ಎಲ್ಲೂ ಇಲ್ಲ’  ಎಂದು ಪ್ರಧಾನಮಂತ್ರಿ ನೇತಾಜಿ ಅವರ ಮಾತನನ್ನು ಉಲ್ಲೇಖಿಸಿ ಹೇಳಿದರು. ಇಂದು ಸ್ವತಂತ್ರ ಭಾರತದ ಕನಸುಗಳನ್ನು ಸಾಕಾರಗೊಳಿಸುವ ಗುರಿ ಹೊಂದಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾತಂತ್ರ್ಯೋತ್ಸವದ ಶತಮಾನಕ್ಕೂ ಮುನ್ನ ನವಭಾರತವನ್ನು ನಿರ್ಮಿಸುವ ಗುರಿ ಇದೆ ಎಂದರು.

ಆಜಾದಿ ಕಾ ಅಮೃತ ಮಹೋತ್ಸವದ ವೇಳೆ ಭಾರತ ತನ್ನ ಗುರುತು ಮತ್ತು ಆಶೋತ್ತರಗಳನ್ನು ಪುನರುಜ್ಜೀವನಗೊಳಿಸುವ ಭವ್ಯ ಸಂಕಲ್ಪವನ್ನು ಮಾಡಬೇಕಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾತಂತ್ರ್ಯಾ ನಂತರ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಜತೆಗೆ ಕೆಲವು ಶ್ರೇಷ್ಠ ವ್ಯಕ್ತಿಗಳ ಕೊಡುಗೆಯನ್ನು ಅಳಿಸಿ ಹಾಕಿರುವುದು ದುರದೃಷ್ಟಕರ ಎಂದು ಪ್ರಧಾನಮಂತ್ರಿ ಹೇಳಿದರು.

ಸ್ವಾತಂತ್ರ್ಯ ಹೋರಾಟ ಲಕ್ಷಾಂತರ ದೇಶವಾಸಿಗಳ ‘ತಪಸ್ಸು’ ಒಳಗೊಂಡಿದೆ. ಆದರೆ ಅದನ್ನು ಇತಿಹಾಸಕ್ಕೆ ಅಷ್ಟೇ ಸೀಮಿತಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ಇಂದು ಸ್ವಾತಂತ್ರ್ಯದ ಹಲವು ದಶಕಗಳ ಬಳಿಕ ದೇಶ ಅತ್ಯಂತ ದಿಟ್ಟವಾಗಿ ಅಂತಹ ತಪ್ಪುಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದೆ. ಬಾಬಾ ಸಾಹೇಬ್ ಅವರಿಗೆ ಸಂಬಂಧಿಸಿದ ಪಂಚತೀರ್ಥ, ಸರ್ದಾರ್ ಪಟೇಲ್ ಅವರ ಕೊಡುಗೆಯನ್ನು ಗುರುತಿಸುವ ಏಕತಾ ಮೂರ್ತಿ, ಭಗವಾನ್ ಬಿರ್ಸಾ ಮುಂಡಾ ಅವರನ್ನು ಗೌರವಿಸುವ ಜಂಜಾತಿಯ ಗೌರವ ದಿನ, ಬುಡಕಟ್ಟು ಸಮುದಾಯದ ಶ್ರೇಷ್ಠ ಕೊಡುಗೆಗಳನ್ನು ಸ್ಮರಿಸುವ ಬುಡಕಟ್ಟು ಮ್ಯೂಸಿಯಂಗಳು, ಅಂಡಮಾನ್ ದ್ವೀಪದಲ್ಲಿ ತ್ರಿವರ್ಣ ಧ್ವಜಹಾರಿಸಿದ 75ನೇ ವರ್ಷಾಚರಣೆ ಅಂಗವಾಗಿ ಅಂಡಮಾನ್ ನ ದ್ವೀಪಕ್ಕೆ ನೇತಾಜಿ ಹೆಸರಿಟ್ಟಿದ್ದು ಮತ್ತು ಐಎನ್ಎ ಹಾಗೂ ನೇತಾಜಿ ಗೌರವಾರ್ಥ ಅಂಡಮಾನ್ ನಲ್ಲಿ ಸಂಕಲ್ಪ ಸಂಪರ್ಕ ಸ್ಥಾಪನೆ, ಹಿಂದಿನ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೈಗೊಂಡ ಕೆಲವು ಪ್ರಮುಖ ಕ್ರಮಗಳಾಗಿವೆ ಎಂದು ಅವರು ಹೇಳಿದರು. ಕಳೆದ ವರ್ಷ ಪರಾಕ್ರಮ ದಿನದಂದು ಕೋಲ್ಕತ್ತಾದಲ್ಲಿನ  ನೇತಾಜಿ ಅವರ ಪೂರ್ವಜರ ನಿವಾಸಕ್ಕೆ ಭೇಟಿ ಕೊಟ್ಟಾಗ ಉಂಟಾದ ಭಾವನೆಗಳನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. ಆಜಾದ್ ಹಿಂದ್ ಸರ್ಕಾರ 75ನೇ ವರ್ಷ ಪೂರ್ಣಗೊಳಿಸಿದ 2018ರ ಅಕ್ಟೋಬರ್ 21ನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. “ಕೆಂಪುಕೋಟೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಆಜಾದ್ ಹಿಂದ್ ಫೌಜ್ ಸಂಘಟನೆಯ ಟೋಪಿ ಧರಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿದ್ದೆನು. ಆ ಕ್ಷಣ   ಅತ್ಯದ್ಭುತವಾಗಿತ್ತು ಮತ್ತು ಅವಿಸ್ಮರಣೀಯವಾಗಿತ್ತು” ಎಂದು ಹೇಳಿದರು.

ನೇತಾಜಿ ಸುಭಾಷ್ ಅವರು ಯಾವುದಾದರೊಂದು ಕೆಲಸ ಮಾಡಲು ನಿಶ್ಚಯಿಸಿದರೆ ಅವರನ್ನು ತಡೆಯುವ ಯಾವುದೇ ಶಕ್ತಿ ಇರಲಿಲ್ಲ. ನೇತಾಜಿ ಸುಭಾಷ್ ರ “ನಾವು ಮಾಡಬಹುದು, ನಾವು ಮಾಡಬಲ್ಲೆವು’’ ಎಂಬ ಸ್ಫೂರ್ತಿಯ ಮನೋಭಾವದೊಂದಿಗೆ ಮುನ್ನಡೆಯಬೇಕಿದೆ ಎಂದು ಪ್ರಧಾನಿ ಹೇಳಿದರು.

 

 

 

 

 

 

 

 

 

 

 

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi