ಪ್ರಧಾನಮಂತ್ರಿ ನರೇಂದ್ರ ಮೋದಿ ಡಿ.13–14ರಂದು ವಾರಾಣಸಿಗೆ ಭೇಟಿ ನೀಡಲಿದ್ದಾರೆ. ಡಿ.13ರಂದು ಮಧ್ಯಾಹ್ನ ಒಂದು ಗಂಟೆಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಶ್ರೀ ಕಾಶಿ ವಿಶ್ವನಾಥ ಧಾಮ್ ನ ಮೊದಲ ಹಂತದ ಯೋಜನೆಯನ್ನು 339 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.
ಇದು ಪ್ರಧಾನಮಂತ್ರಿ ಅವರ ದೂರದೃಷ್ಟಿಯ ಪರಿಣಾಮವಾಗಿದೆ. ಬಾಬಾ ವಿಶ್ವನಾಥ್ ದೇವರ ಭಕ್ತರಿಗೆ, ದರ್ಶನಾರ್ಥರಿಗೆ ಇದೊಂದು ಸಣ್ಣ ಸೇವೆಯಾಗಿದೆ. ಇಷ್ಟು ವರ್ಷಗಳ ಕಾಲವೂ ಇಕ್ಕಟ್ಟಿನ ರಸ್ತೆಗಳು, ನೈರ್ಮಲ್ಯವಿಲ್ಲದ ರಸ್ತೆಗಳು, ಮುಪ್ಪಾವಸ್ಥೆಯಲ್ಲಿ ಪವಿತ್ರ ಗಂಗೆಯಲ್ಲಿ ಮುಳುಗು ಹಾಕಿ, ಗಂಗಾಜಲವನ್ನು ತೆಗೆದುಕೊಂಡು ದೇವರ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿತ್ತು. ಈ ಸಮಸ್ಯೆಗಳೀಗೆ ಪರಿಹಾರಾರ್ಥವಾಗಿ ಶ್ರೀ ಕಾಶಿ ವಿಶ್ವನಾಥ ಧಾಮ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರಲಾಯಿತು. ಈ ಇಕ್ಕಟ್ಟಿನಿಂದ ಆಚೆ ಬರಲು, ಕಾಶಿ ವಿಶ್ವನಾಥ ದೇಗುಲ ಹಾಗೂ ಗಂಗೆಯ ತಟದ ನಡುವೆ ನಿರಾತಂಕವಾದ ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ಈ ಮಹತ್ವದ ಯೋಜನೆಗೆ ಮಾರ್ಚ್ 8ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿದ್ದರು.
ಈ ಯೋಜನೆಯ ಅನುಷ್ಠಾನದಲ್ಲಿ ಪ್ರಧಾನಮಂತ್ರಿಯವರು ಖುದ್ದಾಗಿ ತಾವೇ ಆಸಕ್ತಿ ವಹಿಸಿದ್ದರು. ನಿರಂತರವಾಗಿ ಯೋಜನೆಯ ಕುರಿತು ಮಾಹಿತಿ ಪಡೆಯುವುದು, ಪುನರ್ ವಿಮರ್ಶೆ ಮಾಡುವುದು, ಪುನರ್ ಪರಿಶೀಲನೆ, ಹಾಗೂ ನಿರಂತರವಾದ ನಿಗರಾಣಿ ಮಾಡುತ್ತಿದ್ದರು. ಮತ್ತು ನಿರಂತರವಾಗಿ ಅವರು ಈ ಯೋಜನೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಮಾಹಿತಿ, ಸಲಹೆ ಹಾಗೂ ಸೂಚನೆಗಳನ್ನೂ ನೀಡುತ್ತಿದ್ದರು. ಒಟ್ಟಿನಲ್ಲಿ ದರ್ಶನಾರ್ಥಿಗಳಿಗೆ ಭಕ್ತರಿಗೆ, ಅಂಗವಿಕಲ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಯೋಜನೆಯನ್ನು ಸಿದ್ಧಪಡಿಸಲಾಯಿತು. ದೇವರ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲದಂತೆ ಅಂಗವಿಕಲ ವ್ಯಕ್ತಿಗಳಿಗೆ ರ್‍ಯಾಂಪ್‌ಗಳ ನಿರ್ಮಾಣ, ಎಸ್ಕಲೇಟರ್‌ಗಳಂಥ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಈ ಯೋಜನೆಯ ಮೊದಲ ಹಂತದಲ್ಲಿ 23 ಕಟ್ಟಡಗಳನ್ನು ಉದ್ಘಾಟಿಸಲಾಗುವುದು. ಕಾಶಿ ವಿಶ್ವನಾಥ ದೇವಸ್ಥಾನದ ಭಕ್ತರಿಗೆ ಅಗತ್ಯ ಇರುವ ಸೌಲಭ್ಯಗಳನ್ನೂ ನೀಡಲಿದೆ. ಯಾತ್ರಿ ಸುವಿಧಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರವಾಸೋದ್ಯಮಕ್ಕ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ಭೋಗಶಾಲಾ, ಸಿಟಿ ಸಂಗ್ರಹಾಲಯ, ವೀಕ್ಷಕರ ಗ್ಯಾಲರಿ, ಆಹಾರ ಮಳಿಗೆಗಳ ಸಾಲು ಮುಂತಾದ ಅನುಕೂಲಗಳನ್ನು ನಿರ್ಮಿಸಲಾಗಿದೆ.
ಈ ಇಡೀ ಯೋಜನೆಯನ್ನು ಕಾರ್ಯಗತಗೊಳಿಸಲು 300 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಶ್ರೀಕಾಶಿ ವಿಶ್ವನಾಥ ದೇವಾಲಯದ ಸುತ್ತಲಿನ ಈ ಆಸ್ತಿಗಳನ್ನು ಸ್ವಾಧೀನ ಪಡೆಯುವಾಗ ಎಲ್ಲರನ್ನೂ ಅಭಿವೃದ್ಧಿಪಥದಲ್ಲಿ ಒಳಗೊಂಡಂತೆ ಕರೆದೊಯ್ಯುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿ ಮತ್ತು ಆಶಯ ಇಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿತು. ಈ ದಿಸೆಯಲ್ಲಿ 1400 ಅಂಗಡಿ ಮಾಲೀಕರು, ಬಾಡಿಗೆದಾರರು, ಹಾಗೂ ಮನೆಯ ಮಾಲೀಕರು ಎಲ್ಲರನ್ನೂ ಒಳಗೊಳ್ಳಲಾಯಿತು. ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ವಿವಾಧಗಳಿಲ್ಲದಂತೆ ಇಡೀ ಕಾರ್ಯವನ್ನು ಕೈಗೊಳ್ಳಲಾಯಿತು. ಪುನರ್ವಸತಿ ಹಾಗೂ ಸ್ವಾಧೀನ ಕಾರ್ಯಕ್ರಮಕ್ಕೆ ಹೆಚ್ಚಿನ ಬಲ ಬಂದಿತು.
ಈ ಅಭಿವೃದ್ಧಿಯ ಯೋಜನೆಯನ್ನು ಕೈಗೊಳ್ಳುವಾಗ ಪಾರಂಪರಿಕ ಕಟ್ಟಡಗಳ ನಿರ್ಮಾಣವನ್ನು ಹಾಗೆಯೇ ಉಳಿಸಲಾಯಿತು. ಹಳೆಯ ಆಸ್ತಿಗಳನ್ನು, ಮನೆಗಳನ್ನು ನೆಲಸಮಗೊಳಿಸುವಾಗ ಈ ಕಾಳಜಿಯನ್ನು ಉಳಿಸಿಕೊಳ್ಳಲಾಯಿತು. ಹೀಗೆ ನೆಲಸಮ ಮಾಡುವಾಗ ನಲ್ವತ್ತಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು ಕಂಡು ಬಂದವು. ಅವನ್ನು ಮರುನಿರ್ಮಾಣ ಮಾಡುತ್ತಲೇ ಅವುಗಳ ಸೌಂದರ್ಯ ಮತ್ತು ಪರಂಪರೆಯನ್ನು ಕಾಪಿಡಲಾಯಿತು.
ಈ ಇಡೀ ಯೋಜನೆಯ ವಿಸ್ತಾರ ಅತಿ ವಿಶಾಲವಾಗಿದೆ. 5 ಲಕ್ಷ ಚದುರ್ ಅಡಿಯ ಯೋಜನೆಯಾಗಿದೆ. ಈ ಮೊದಲು ದೇವಾಲಯದ ಆವರಣ ಕೇವಲ 3000 ಚದರ್ ಅಡಿಗೆ ಮಾತ್ರ ಸೀಮಿತವಾಗಿತ್ತು. ಕೋವಿಡ್ ಪಿಡುಗಿನ ಸಮಯದಲ್ಲಿಯೂ ಈ ಯೋಜನೆಯನ್ನು ನಿಗದಿತ ಸಮಯಮಿತಿಯಲ್ಲಿ ಪೂರ್ಣಗೊಳಿಸಿರುವುದೂ ಶ್ಲಾಘನೀಯ.
ವಾರಣಾಸಿ ಭೇಟಿಯ ಸಂದರ್ಭದಲ್ಲಿ ಕಾಳಭೈರವ ದೇವಸ್ಥಾನಕ್ಕೆ ಮಧ್ಯಾಹ್ನ 12ಕ್ಕೆ ಭೇಟಿ ನೀಡುವರು. . ಹಾಯಿದೋಣಿಗಳ ಹಾಗೂ ಗಂಗಾ ಆರತಿಯನ್ನು ಸಂಜೆ ಆರು ಗಂಟೆಯ ಹೊತ್ತಿಗೆ ವೀಕ್ಷಿಸುವರು. ಡಿ.14ರಂದು ಮಧ್ಯಾಹ್ನ 3.30ಕ್ಕೆ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಸದ್ಗುರು ಸದಾಫಲದೇವು ವಿಹಂಗಮ ಯೋಗ ಸಂಸ್ಥಾನದ 98ನೇ ವಾರ್ಷಿಕ ಆಚರಣೆಯಲ್ಲಿ ಪಾಲ್ಗೊಳ್ಳುವರು. ಸ್ವರವೇದ ಮಹಾಮಂದಿರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಭೇಟಿಯಲ್ಲಿ ಆಸ್ಸಾಮ್, ಅರುಣಾಚಲಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ತ್ರಿಪುರಾ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಮುಖ್ಯಮಂತ್ರಿಗಳ ಭೇಟಿಯನ್ನೂ ಆಯೋಜಿಸಲಾಗಿದೆ. ಬಿಹಾರ್ ಹಾಗೂ ನಾಗಾಲ್ಯಾಂಡ್‌ನ ಡೆಪ್ಯುಟಿ ಸಿಎಂ. ಗಳೂ ಈ ಭೇಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂಕಿರಣವು ಪ್ರಧಾನಮಂತ್ರಿಯವರ ಇನ್ನೊಂದು ಮಹತ್ವದ ಯೋಜನೆಯಾಗಿರುವ ಇಂಡಿಯಾ ಸ್ಪಿರಿಟ್‌ಗೆ ಅನುಗುಣವಾಗಿ ಆಡಳಿತ ಸಂಬಂಧಿ ಕ್ರಮಗಳ ಕುರಿತು ಚರ್ಚಿಸಲು ಅವಕಾಶವಾಗುವುದು. ಪರಿಣಾಮಕಾರಿಯಾದ ಆಡಳಿತಾತ್ಮಕ ಕ್ರಮಗಳ ಕುರಿತು ವಿಚಾರ ಸಮಾಲೋಚಿಸಲು ಹಾಗೂ ಬದಲಿಸಿಕೊಳ್ಳಲು ಈ ಸಂಕಿರಣವು ಅನುವು ಮಾಡಿಕೊಡಲಾಗುವುದು.